ನಟ ಅಲ್ಲು ಅರ್ಜುನ್ ಪಡೆದ ವರದಕ್ಷಿಣೆ ಎಷ್ಟು ಗೊತ್ತಾ ಸ್ವತಃ ಅಲ್ಲು ಅರ್ಜುನ್ ಮಾವನೇ ಬಿಚ್ಚಿಟ್ಟ ಸತ್ಯ

ಅಲ್ಲು ಅರ್ಜುನ್ ಅವರು ದಕ್ಷಿಣ ಭಾರತದ ಜನಪ್ರಿಯ ನಟ. ಇದೇ ವರ್ಷ ಅಲ್ಲು ಅರ್ಜುನ್ ಅವರು ಇನ್ಮೇಲೆ ಕೇವಲ ಸೌತ್ ಇಂಡಿಯನ್ ಸ್ಟಾರ್ ಅಲ್ಲ ಇದೀಗ ಅಲ್ಲು ಪಾನ್ ಇಂಡಿಯನ್ ಸ್ಟಾರ್ ನಟ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರು ಇಡೀ ದೇಶದಲ್ಲೇ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಖ ಇದೀಗ ದೇಶದಲ್ಲೇ ಚಿರ ಪರಿಚಿತ. ಜನಪ್ರಿಯತೆ ಹೆಚ್ಚಾದಂತೆ ಅಲ್ಲು ಅರ್ಜುನ್ ಅವರ ಗಳಿಕೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅವರ ಸಂಭಾವನೆ ಮುಗಿಲು ಮುಟ್ಟಿದೆ.

2022 ರಲ್ಲಿ ಅಲ್ಲು ಅರ್ಜುನ್ ಅವರ ಸಂಭಾವನೆ 100 ಕೋಟಿಗೆ ಮುಟ್ಟಿದೆ. ನೂರಾರು ಕೋಟಿಯ ಒಡೆಯ ಅಲ್ಲು ಅರ್ಜುನ್ ಅವರ ವರದಕ್ಷಿಣೆಯ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ನಟ ಅಲ್ಲು ಅರ್ಜುನ್ ಅವರು ಎಷ್ಟು ರುಪಾಯಿಗಳನ್ನು ವರದಕ್ಷಿಣೆಯಾಗಿ ತೆಗೆದುಕೊಂಡಿದ್ದಾರೆ ಎಂದು ಸ್ವತಃ ಅಲ್ಲು ಅರ್ಜುನ್ ಅವರ ಹೆಂಡತಿ ಸ್ನೇಹಾ ರೆಡ್ಡಿ ಅವರ ತಂದೆ ಕಂಚರಾಲ ಚಂದ್ರಶೇಖರ್​ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ.

ನಟ ಅಲ್ಲು ಅರ್ಜುನ್ ಅವರು ಈಗ ರೆಡ್ಡಿ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2011 ರಲ್ಲಿ ಈ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. 2011 ರ ಸಮಯದಲ್ಲಿ ಕೂಡ ಅಲ್ಲು ಅರ್ಜುನ್ ಅವರು ತೆಲುಗು ಚಿತ್ರರಂಗದ ಟಾಪ್ ನಟರಾಗಿದ್ದರು. ಆರ್ಯ-೨ ನಂಥ ಹಿಟ್ ಚಿತ್ರಗಳಲ್ಲಿ ಅಲ್ಲು ಅರ್ಜುನ್ ಆ ಸಮಯದಲ್ಲಿ ನಟಿಸಿದ್ದರು. ಆಗ ಕೂಡ ಅಲ್ಲು ಅರ್ಜುನ್ ಅವರಿಗೆ ಕೈ ತುಂಬಾ ಸಂಭಾವನೆ ಬರುತ್ತಿತ್ತು. ಕೈ ತುಂಬಾ ಸಂಭಾವನೆ ಸಿಗುತ್ತಿದ್ದರೂ ಸಹ ಅಲ್ಲು ಅರ್ಜುನ್ ಅವರು ಮದುವೆಯಾಗೋ ಸಮಯದಲ್ಲಿ ವರದಕ್ಷಿಣೆ ತೆಗೆದುಕೊಂಡರು ಎಂಬ ಪ್ರಶ್ನೆ ಮೂಡುತ್ತೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅಲ್ಲು ಅರ್ಜುನ್ ಅವರ ಮಾವ ಕಂಚರಾಲ ಚಂದ್ರಶೇಖರ್​ ರೆಡ್ಡಿ ಅವರು ಬಳಿ ನಿಮ್ಮ ಅಳಿಯ ಬಗ್ಗೆ ಒಂದೆರಡು ಮಾತಾಡಿ ಎಂದು ಎಂದು ಪ್ರಶ್ನೆ ಕೇಳಿದಾಗ ಈ ರೀತಿಯ ಉತ್ತರ ಕೊಟ್ಟಿದ್ದಾರೆ.. “ಮಾವನಾಗಿ ನನ್ನ ಅಳಿಯ ಅಲ್ಲು ಅರ್ಜುನ್​ಗೆ ನಾನು ನೂರಕ್ಕೆ ನೂರು ಅಂಕಗಳನ್ನು ಕೊಡಲು ಇಚ್ಛೆಪಡುತ್ತೇನೆ. ಕೇವಲ ತೆಲುಗು ಭಾಷೆಯ ಅಭಿಮಾನಿಗಳನ್ನು ಹೊಂದಿಲ್ಲ, ಇಡೀ ಇಂಡಿಯಾದಲ್ಲಿಯೇ ಆತನಿಗೆ ಅಭಿಮಾನಿಗಳಿದ್ದಾರೆ. ನನ್ನ ಅಳಿಯನ ಸಿನಿಮಾಗಳ ಹಾಡುಗಳನ್ನೂ ನೇಪಾಳದಲ್ಲಿ , ಜಮ್ಮು ಮತ್ತು ಕಾಶ್ಮೀರದಲ್ಲೂ ಕೇಳುತ್ತಾರೆ. ಕಠಿಣ ಪರಿಶ್ರಮದಿಂದ ಮಾತ್ರ ಇದು ಸಾಧ್ಯ ಎಂದರು “

ಹಾಗೆ ಅದೇ ಸಂದರ್ಶನದಲ್ಲಿ ನಿಮ್ಮ ಮಗ ಮದುವೆ ಸಮಯದಲ್ಲಿ ಎಷ್ಟು ವರದಕ್ಷಿಣೆ ಪಡೆದುಕೊಂಡಿದ್ದಾನೆ ಎಂದು ಪ್ರಶ್ನೆ ಕೇಳುತ್ತಾರೆ. ನನ್ನ ಅಳಿಯ ಒಂದೇ ಒಂದು ರೂಪಾಯಿ ವರದಕ್ಷಿಣೆ ತೆಗೆದುಕೊಂಡಿಲ್ಲ. ಅಲ್ಲು ಅರ್ಜುನ್ ಅವರ ಕುಟುಂಬದವರು ವರದಕ್ಷಿಣೆ ವಿರುದ್ಧ ವಾಗಿದ್ದಾರೆ. ನನ್ನ ಅಳಿಯನ ಬಳಿಯೇ ಸಾವಿರಾರು ಕೋಟಿ ರೂಪಾಯಿಗಳಿವೆ. ನಾನು ಅವನಿಗೆ ದುಡ್ಡು ಕೊಡುವುದು ದೊಡ್ಡ ವಿಷಯವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಚಂದ್ರಶೇಖರ್ ಉತ್ತರ ನೀಡಿದರು.

Leave a Comment

error: Content is protected !!