Kaatera: ದರ್ಶನ್ ರವರ ಕಾಟೇರ ಸಿನಿಮಾದ ರಿಲೀಸ್ ಡೇಟ್ ಕೊನೆಗೂ ರಿವೀಲ್ ಆಯ್ತು.

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಾಯಕ ನಟನಾಗಿ ನಟಿಸಿರುವಂತಹ ಕಾಟೇರ(Kaatera) ಸಿನಿಮಾದ ಚಿತ್ರೀಕರಣ ಈಗಾಗಲೇ ಬರದಿಂದ ಸಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.

ಯಾಕೆಂದರೆ ಈ ಸಿನಿಮಾದಲ್ಲಿ ನೈಜ ಘಟನೆಗಳನ್ನು ಆಧರಿಸಿ ಮಾಡಿರುವಂತಹ ಕಥೆ ಇದ್ದು ಮಾತ್ರವಲ್ಲದೆ ದರ್ಶನ್(Darshan) ರವರ ಲುಕ್ ಕೂಡ ಕಥೆಗೆ ಅತ್ಯಂತ ಸೂಕ್ತವಾದ ರೀತಿಯಲ್ಲಿದೆ.

ಸಿನಿಮಾದಲ್ಲಿ ರಾಧನ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಹಾಗೂ ರಾಕ್ ಲೈನ್ ವೆಂಕಟೇಶ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಬಿಡುಗಡೆಯ ತಿಂಗಳು ಕೂಡ ಈಗಾಗಲೇ ಪಕ್ಕ ಆಗಿದೆ.

ಗಾಂಧಿನಗರದಲ್ಲಿ ಓಡಾಡುತ್ತಿರುವ ಅಧಿಕೃತ ಮಾಹಿತಿಗಳ ಪ್ರಕಾರ ಕಾಟೇರ(Kaatera) ಸಿನಿಮಾ ತಂಡ ಚಿತ್ರವನ್ನು ಡಿಸೆಂಬರ್ ತಿಂಗಳ ಒಳಗೆ ಅಂದರೆ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲು ಬೇಕಾಗಿರುವಂತಹ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಚಿತ್ರೀಕರಣ ನಡೆಸುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.

error: Content is protected !!