ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ಕಮಲ ಹಾಸನ್. ಅಪ್ಪು ಮನೆಗೆ ಕಮಲ್ ಹಾಸನ್ ಹೋಗಿದ್ದಾಗ ಅಪ್ಪು ಹೀಗ್ಯಾಕೆ ಮಾಡಿದ್ರು

ಅಪ್ಪು ಅವರನ್ನು ನಾವೆಲ್ಲ ಕಳೆದುಕೊಂಡು ಏಳು ತಿಂಗಳು ಗಳು ಕಳೆದಿವೆ. ಇನ್ನೂ ಕೂಡ ನಮಗೆಲ್ಲ ಅಪ್ಪ ಸರ್ ಇಲ್ಲ ಎಂಬ ವಿಷಯವನ್ನು ಕರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಬಗ್ಗೆ ಸಿನೆಮಾ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡಿದಾಗ ನಮಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತೆ. ಛೆ! ಇಂತಹ ಒಳ್ಳೆಯ ಮನುಷ್ಯ ನಮ್ಮೊಂದಿಗೆ ಇಲ್ಲವಲ್ಲ ಎಂದು.. ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಭಿಮಾನಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ.

ಅಷ್ಟೇ ಅಲ್ಲ ಅಪ್ಪ ಸರ್ ಗೆ ಜನಸಾಮಾನ್ಯರು ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ಸಿನಿಮಾ ನಟ ನಟಿಯರು ಕೂಡ ಅಪ್ಪು ಅವರ ಅಭಿಮಾನಿಗಳೇ. ತಮಿಳು ತೆಲುಗು ಚಿತ್ರರಂಗದಲ್ಲಿ ಕೂಡ ಅಪ್ಪು ಅವರನ್ನು ಇನ್ಸ್ಪಿರೇಶನ್ ಆಗಿ ತೆಗೆದುಕೊಂಡು ಡ್ಯಾನ್ಸ್ ಕಲಿತಂತಹ ನಟರಿದ್ದಾರೆ. ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರು ಇದೀಗ ಅಪ್ಪು ಅವರ ಬಗ್ಗೆ ಭಾವುಕ ನುಡಿಗಳನ್ನು ನುಡಿದಿದ್ದಾರೆ. ತಮ್ಮ ಹೊಸ ಸಿನಿಮಾ ವಿಕ್ರಂ ಚಿತ್ರದ ಪ್ರಚಾರಕ್ಕೋಸ್ಕರ ಬೆಂಗಳೂರಿಗೆ ಬಂದಾಗ ಅಪ್ಪು ಅವರ ಬಗ್ಗೆ ಕಮಲ್ ಹಾಸನ್ ಅವರು ತಮ್ಮ ಭಾವನೆಯನ್ನು ತೋರ್ಪಡಿಸಿದ್ದಾರೆ.

ಅಪ್ಪು ಅವರ ವ್ಯಕ್ತಿತ್ವ ಮತ್ತು ಸರಳತೆಯ ಬಗ್ಗೆ ಒಂದು ಉದಾಹರಣೆ ಕೊಟ್ಟು ಕಮಲ್ ಹಾಸನ್ ಅವರು ವಿವರಿಸಿದ್ದಾರೆ ಒಂದು ದಿನ ಕಮಲ್ ಹಾಸನ್ ಅವರು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಹೋಗಿದ್ದರು ಆಗ ಪುನೀತ್ ಅವರು ಕಮಲ್ ಹಾಸನ್ ಅವರ ಮುಂದೆ ಕೈಕಟ್ಟಿ ತಲೆಬಾಗಿ ನಿಂತುಕೊಂಡು ಸ್ವಾಗತ ಕೋರಿದರು. ಕಮಲ್ ಹಾಸನ್ ಅವರ ಮುಂದೆ ಪುನೀತ್ ರಾಜ್ ಕುಮಾರ್ ಅವರು ಕೆಲಸಗಾರನಂತೆ ಕೆಲಸ ಹುಡುಕಿಕೊಂಡು ಕಮಲ್ ಹಾಸನ್ ಅವರ ಬಳಿ ಬಂದಿರುವ ವ್ಯಕ್ತಿಯ ಹಾಗೆ ನಡೆದುಕೊಂಡಿದ್ದರು.

ಪುನೀತ್ ರಾಜ್ ಕುಮಾರ್ ರ ನಯ ವಿನಯತೆ ಸರಳತೆ ನೋಡಿ ಕಮಲ್ ಹಾಸನ್ ಬೆಚ್ಚಿಬಿದ್ದಿದ್ದರು. ಕಮಲ್ ಹಾಸನ್ ಅವರು ಅಪ್ಪು ಹೊರಮನೆಯಿಂದ ಹೋಗುವತನಕ ಅಪ್ಪು ಕೈಕಟ್ಟಿಕೊಂಡು ಕೆಲಸಗಾರನಂತೆ ನಿಂತಿದ್ದರು. ಬೇರೆಯವರಿಗೆ ಹೇಗೆ ಗೌರವಿಸಬೇಕೆಂದು ನಾನು ಪುನೀತ್ ಹುಡುಗರು ಕಲಿತುಕೊಂಡೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ನನ್ನ ವಯಸ್ಸಿಗೆ ಪುನೀತ್ ಕೊಡುತ್ತಿದ್ದ ಗೌರವ ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಮುಂದೊಂದು ದಿನ ನಾನು ಪುನೀತ್ ಜೊತೆ ಒಂದು ಸಿನಿಮಾದಲ್ಲಿ ನಟನೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದೆ ಆದರೆ ಅದು ಕನಸಾಗಿಯೇ ಉಳಿಯಿತು ಎಂದು ಕಮಲ್ ಹಾಸನ್ ಅವರು ಅಪ್ಪು ಅವರ ವ್ಯಕ್ತಿತ್ವದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

Leave a Comment

error: Content is protected !!