ವಿಕ್ರಮ್ ಸಿನೆಮಾ ಹಿಟ್ ಆಯ್ತು ಅಂತ ನಟ ಸೂರ್ಯಾ ಗೆ ಕಮಲ್ ಹಾಸನ್ ಉಡುಗೊರೆಯಾಗಿ ಕೊಟ್ಟಿರೋ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚಿಗೆ ತಮಿಳು ಚಿತ್ರರಂಗದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಮಕಾಡೆ ಮಲಗಿದ ಸಿನಿಮಾಗಳೇ ಜಾಸ್ತಿ. ಯಾವ ಸಿನಿಮಾಗಳಲ್ಲಿ ಯಾವ ಲೋಪದೋಷಗಳಿತ್ತು ಹೇಳೋಕ್ಕಾಗಲ್ಲ, ಆದರೆ ವಿಕ್ರಮ್ ಸಿನಿಮಾ ಮಾತ್ರ ಕಾಲಿವುಡ್ ನಲ್ಲಿ ಭರವಸೆಯನ್ನು ಮೂಡಿಸಿದೆ. ನಟ ಕಮಲ ಹಾಸನ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ವಿಕ್ರಮ್. ಬಹಳ ಸಮಯದ ನಂತರ ಕಮಲ ಹಾಸನ್ ಮತ್ತೆ ನಟನೆಗೆ ಇಳಿದಿದ್ದಾರೆ. ನಟ ಕಮಲ್ ಹಾಸನ್ ಸೂಪರ್ ಕಂಬ್ಯಾಕ್ ಮಾಡಿದ್ದು ಸೂಪರ್ ಹಿಟ್ ಚಿತ್ರದ ಮೂಲಕ.

ನಟ ಕಮಲ ಹಾಸನ್ ಇತ್ತೀಚಿಗೆ ಯಾವ ಸಿನಿಮಾಗಳನ್ನು ಮಾಡಿರಲಿಲ್ಲ ಆದರೆ ವಿಕ್ರಮ್ ಮೂಲಕ ಸಿನಿಪ್ರಿಯರಲ್ಲಿ ದೊಡ್ಡ ಭರವಸೆಯನ್ನು ಮತ್ತೆ ಮೂಡಿಸಿದ್ದಾರೆ. ಇತ್ತೀಚಿಗಷ್ಟೇ ರಿಲೀಸ್ ಆಗಿರುವ ವಿಕ್ರಮ್ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದೆ. ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ನಲ್ಲಿ ವಿಕ್ರಮ್ ಚಿತ್ರ ನಿರ್ಮಾಣ ಕಂಡಿದೆ. ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆದಿರುವ ವಿಕ್ರಮ್ ಸಿನಿಮಾದಲ್ಲಿ ಇನ್ನೊಂದು ಮುಖ್ಯ ಪಾತ್ರವನ್ನು ನಿರ್ವಹಿಸಿರುವ ನಟ ಅಂದರೆ ಸೂರ್ಯ. ತಮಿಳು ಚಿತ್ರರಂಗವನ್ನು ಆಳುತ್ತಿರುವ ಸೂಪರ್ ಸ್ಟಾರ್ ನಟ ಸೂರ್ಯ ನಾಯಕ ನಟನಾಗಿ ಹಲವಾರು ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಇದೀಗ ಕಮಲ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿ ಒಬ್ಬ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಹೌದು ಈ ಸಿನಿಮಾದಲ್ಲಿ ನಟಿಸಿದ ಸೂರ್ಯ ಅವರ ಪಾತ್ರದ ಹೆಸರು ರೋಲೆಕ್ಸ್. ಈ ಪಾತ್ರದ ಹೆಸರಿರುವ ಒಂದು ದುಬಾರಿ ಗಿಫ್ಟ್ ಅನ್ನು ಸದ್ಯ ಸೂರ್ಯ ಅವರಿಗೆ ನೀಡಿದ್ದಾರೆ ಕಮಲ್ ಹಾಸನ್. ಹೌದು ಅತ್ಯಂತ ದುಬಾರಿಯಾಗಿರುವ ರೋಲೆಕ್ಸ್ ವಾಚ್ ಅನ್ನು ಸೂರ್ಯ ಅವರಿಗೆ ಕಮಲಹಾಸನ್ ನೀಡಿದ್ದಾರೆ. ಇದರ ಬೆಲೆಯನ್ನು ಕೇಳಿ ನೆಟ್ಟಿಗರು ಅಬ್ಬಾ ಇಷ್ಟೊಂದು ದುಬಾರಿನಾ ಅಂತ ಉದ್ಘಾರವೆತ್ತಿದ್ದಾರೆ. ಕಮಲ್ ಹಾಸನ್ ಅವರ ಈ ಚಿತ್ರದಿಂದ ಅವರಿಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಕಾರಣದಿಂದಾಗಿ ಕಮಲ್ ಹಾಸನ್ ನೆಚ್ಚಿನ ನಟನಿಗೆ ಉಡುಗೊರೆಯನ್ನು ನೀಡಿದ್ದಾರೆ.

ಜೂನ್ 7ರಂದು ತೆರೆಕಂಡಿರುವ ವಿಕ್ರಮ್ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್. ಈ ಸಿನಿಮಾ ಸೂಪರ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಎಪ್ಪತ್ತು ಲಕ್ಷ ಮೌಲ್ಯದ ಲೆಕ್ಸಸ್ ಕಾರನ್ನು ಉಡುಗೊರೆಯಾಗಿ ಲೋಕೇಶ್ ಅವರಿಗೆ ಕಮಲ್ ಹಾಸನ್ ನೀಡಿದ್ದರು. ಇದೀಗ ಅತ್ಯಂತ ದುಬಾರಿ ಬೆಲೆಯ ರೋಲೆಕ್ಸ್ ವಾಚ್ ಸೂರ್ಯ ಅವರ ಕೈ ಸೇರಿದೆ. ಇದರ ಬೆಲೆ ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ. ಏಕೆಂದರೆ ಈ ರೋಲೆಕ್ಸ್ ವಾಚ್ ನ ಬೆಲೆ ಬರೋಬ್ಬರಿ ನಲವತ್ತೇಳು ಲಕ್ಷ ರೂಪಾಯಿಗಳು. ಇನ್ನು ಸ್ವತಃ ಸೂರ್ಯ ಅವರೇ ಕಮಲ್ ಹಾಸನ ತಮಗೆ ಈ ದುಬಾರಿ ಗಿಫ್ಟ್ ನೀಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮಿಳು ಅಥವಾ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿಯೂ ಕೂಡ ದೊಡ್ಡ ಬೇಡಿಕೆ ಇದೆ. ಇದೀಗ ಕಮಲ್ ಹಾಸನ್ ನಟನೆಯ ವಿಕ್ರಮ ಸಿನಿಮಾ ಕರ್ನಾಟಕದಲ್ಲಿಯು ತನ್ನ ಹವಾ ಮುಂದುವರೆಸಿದೆ. ಇತ್ತೀಚಿಗಿನ ತಮಿಳು ಚಿತ್ರಕ್ಕೆ ಹೋಲಿಸಿದರೆ ವಿಕ್ರಮ್ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾಕ್ಕಿ ಈಗಾಗಲೇ ತುಂಬಾನೇ ಬಿಲ್ಡಪ್ ಕೊಡಲಾಗಿತ್ತು. ಆದರೆ ಅದಕ್ಕೆ ತಕ್ಕ ಹಾಗೆ ಈ ಸಿನಿಮಾ ಸಕ್ಸಸ್ ಅನ್ನು ಕೂಡ ಕಂಡಿದೆ. ಒಟ್ಟಿನಲ್ಲಿ ನಟ ಕಮಲ್ ಹಾಸನ್ ತಮ್ಮ ಚಿತ್ರದ ಯಶಸ್ಸಿನಿಂದಾಗಿ ದಿಲ್ ಖುಷ್ ಆಗಿದ್ದಾರೆ.

Leave a Comment

error: Content is protected !!