ಊರಿನ ಜಾತ್ರೆಗಳಲ್ಲಿ ಕೋಲಾಟ, ದೊಡ್ಡಾಟ ಮಾಡುತಿದ್ದ ವ್ಯಕ್ತಿ ಸಿನಿಮಾದಲ್ಲಿ ಜಪ್ರಿಯತೆ ಗಳಿಸಿದ್ದು ಹೇಗೆ ನೋಡಿ

ವೈಜನಾಥ್ ಬಿರಾದಾರ್ ಅವರು ಬಡಕುಟುಂಬದಿಂದ ಬಂದಿದ್ದು ಕನ್ನಡ ಚಿತ್ರರಂಗಕ್ಕೆ ಹೇಗೆ ಪರಿಚಯವಾದರು ಹಾಗೂ ಅವರ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ವೈಜನಾಥ ಬಿರಾದಾರ್ ನಾಗಮ್ಮ ಹಾಗೂ ಬಸಪ್ಪ ದಂಪತಿಗಳ ನಾಲ್ಕು ಮಕ್ಕಳಲ್ಲಿ ಹಿರಿಯವನಾಗಿ 1952 ಜೂನ್ 20 ರಂದು ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ತೇಗಂಪುರ ಗ್ರಾಮದಲ್ಲಿ ಜನಿಸಿದರು. ಇವರ ಕೊನೆ ತಮ್ಮ ಹಾಗೂ ತಂಗಿ ಹೆಚ್ಚುಕಾಲ ಬದುಕಲಿಲ್ಲ. ವೈಜನಾಥ 3 ನೇ ತರಗತಿ ಓದುತ್ತಿರುವಾಗ ತಂದೆ ನಿಧನರಾದರು ಇದರಿಂದ ಅವರ ಅಮ್ಮ ವೈಜನಾಥ ಅವರನ್ನು ಶಾಲೆ ಬಿಡಿಸಿದರು ಅವರಿಗೆ ನಟನೆ ಮಾಡಬೇಕೆಂಬ ಗೀಳು. ತಮ್ಮ ಜಮೀನಿನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು.

ಊರಿನ ಜಾತ್ರೆಗಳಲ್ಲಿ ಕೋಲಾಟ, ದೊಡ್ಡಾಟ ಮಾಡುತ್ತಿದ್ದರು. ಇದನ್ನು ನೋಡಿದ ಅಲ್ಲಿನ ಸ್ಥಳೀಯ ರಘುನಾಥ ಅವರು ನಾಟಕ ಮಂಡಳಿಗೆ ಸೇರಿ ಅಲ್ಲಿಂದ ಸಿನಿಮಾ ಸೇರುವಂತೆ ಸಲಹೆ ನೀಡಿದರು ಬಿರಾದಾರ್ ಅವರಿಗೆ ಅದು ಸರಿ ಎನಿಸಿದರೂ ಸಿನಿಮಾರಂಗಕ್ಕೆ ಹೋಗಲು ಹೆಚ್ಚು ಓದಿಕೊಂಡಿರಬೇಕು ಹಾಗೂ ಸುಂದರವಾಗಿರಬೇಕು ಇದಾವುದು ಇರದ ಕಾರಣ ಈ ಯೋಜನೆಯನ್ನು ಕೈಬಿಟ್ಟರು. ಅವರಿಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವಿತ್ತು. ಹೀಗೆ ಓದುತ್ತಿರುವಾಗ ರಾಜಕುಮಾರ್ ಅವರ ಕಥೆಯನ್ನು ಓದಿದರು ರಾಜಕುಮಾರ್ ಅವರು ನಾಲ್ಕನೇ ಕ್ಲಾಸ್ ಓದಿದ್ದು ಹಳ್ಳಿಯಿಂದ ಬಂದು ನಾಟಕ ಕಂಪನಿಗೆ ಸೇರಿ ಸಿನಿಮಾದಲ್ಲಿ ಹೆಸರು ಮಾಡುತ್ತಾರೆ ಇದನ್ನು ಓದಿ ವೈಜನಾಥ ಪ್ರಭಾವಿತರಾದರು. ನಂತರ ಅವರ ಜಮೀನು ಅವರ ಕೈ ತಪ್ಪಿ ಹೋಯಿತು. ನಂತರ ಸ್ಥಳೀಯ ನಾಟಕ ಕಂಪನಿ ಸೇರಿದರು, ಹಲವು ನಾಟಕಗಳಲ್ಲಿ ಹಾಸ್ಯ ಪಾತ್ರವನ್ನು ಮಾಡುತ್ತಾ ಬಂದರು.

1982 ರಲ್ಲಿ ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಅವರು ಬರ ಎಂಬ ಸಿನಿಮಾ ಮಾಡಲು ತಂಡವು ಶೂಟಿಂಗ್ ಗೆ ಉತ್ತರ ಕರ್ನಾಟಕದ ಭಾಗಗಳಿಗೆ ಬಂದರು ಹಾಗೆ ಬೀದರಿಗೂ ಬಂದರು ಬಿರಾದರ್ ಅವರು ಶೂಟಿಂಗ್ ನೋಡಲು ಬಂದಿದ್ದರು ಆ ಸಿನಿಮಾದ ಹೀರೊ ಅನಂತನಾಗ್ ಅವರು ಮಜ್ಜಿಗೆ ಬೇಕು ಎಂದು ಕೇಳುತ್ತಾರೆ, ಇದನ್ನು ಕೇಳಿಸಿಕೊಂಡ ಬಿರಾದಾರ್ ತಮ್ಮ ಮನೆಯಲ್ಲಿ ತಯಾರಿಸಿದ ಮಜ್ಜಿಗೆ ತಂದು ಕೊಡುತ್ತಾರೆ ಬೆಳಗಿನ ತಿಂಡಿಗೆ ಮೊಸರನ್ನ ಒದಗಿಸಿದ ಬಿರಾದಾರ್ ಅವರ ಕಥೆ ಕೇಳಿ ಅನಂತ್ ನಾಗ್ ಅವರು ನಿರ್ದೇಶಕರಿಗೆ ಪರಿಚಯ ಮಾಡಿಕೊಟ್ಟರು ಅಲ್ಲದೆ ಬರ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಲು ಅವಕಾಶ ಸಿಕ್ಕಿತು.

ನಂತರ ಬೆಂಗಳೂರಿಗೆ ಹೋಗಲು 31 ರೂ ಬೇಕಾಗಿತ್ತು ಹಣವಿಲ್ಲದೆ ಸಂಬಂಧಿಯೊಬ್ಬರ ಸಹಾಯದಿಂದ ಬೆಂಗಳೂರು ತಲುಪಿದರು ರಾಜಕುಮಾರ್ ಅವರನ್ನು ಹುಡುಕಿದರು ಅವರ ಸಹಾಯ ಪಡೆದರು. ನಟನಾಗಬೇಕು ಎಂದು ಅವರಿವರ ಕೈಕಾಲು ಹಿಡಿದು ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಬಂದರು ಅವಕಾಶಕ್ಕಾಗಿ ಅಂಗಲಾಚಿದರು, ಕಾದರು ತಿನ್ನಲು ಊಟ, ಇರಲು ಮನೆಯಿರಲಿಲ್ಲ. 6-7 ತಿಂಗಳು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ನಂತರ ತಾನು ನಂಬಿದ ದೇವರ ಮೊರೆ ಹೋದರು. ಹೀಗಿರುವಾಗ ಒಂದು ನಾಟಕ ತಂಡ ಜೊತೆ ಇರಲು ಕೇಳಿಕೊಂಡಿತ್ತು ಅದಕೊಪ್ಪಿದರು ಬಿರಾದಾರ್ ತಂಡದವರು 20 ರೂ ಕೊಟ್ಟರು ಹಣ ನೋಡಿ ಬೆರಗಾಗಿ ಹೋಟೆಲ್ ಹೋಗಿ ಹೊಟ್ಟೆ ತುಂಬಾ ಊಟ ಮಾಡಿದರು. ಅಲ್ಲಿಂದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು.

ಸಿನಿಮಾಗಳಲ್ಲಿ ಅವಕಾಶ ಕೊಟ್ಟಿದ್ದು ಕಾಶಿನಾಥ. ಬಿರಾದಾರ್ ಭಿಕ್ಷುಕ ಪಾತ್ರಕ್ಕೆ ಸೈ ಎನಿಸಿಕೊಂಡಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲೂ ಅವಕಾಶ ದೊರೆಯಿತು, ಓ ಮಲ್ಲಿಗೆ, ಏಕದಂತ, ಸೂರಪ್ಪ ಮೊದಲಾದ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರ ನಿರ್ವಹಿಸುತ್ತಾ ಕನ್ನಡದ ಅತ್ಯುತ್ತಮ ಪೋಷಕ ಹಾಗೂ ಹಾಸ್ಯ ನಟನೆಂದು ಗುರುತಿಸಿಕೊಂಡರು ಅವರ ಅತ್ಯುತ್ತಮ ಚಿತ್ರವೆಂದರೆ 2010ರಲ್ಲಿ ತೆರೆಕಂಡ ಕನಸೆಂಬ ಕುದುರೆಯನೇರಿ ಚಿತ್ರ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಿಂದ 2011ರಲ್ಲಿ ಅಂತರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಬಿರಾದಾರ್ ಅವರಿಗೆ ಸಿಕ್ಕಿತು, ಸ್ಪೇನ್ ನ ಮ್ಯಾಡ್ರಿಡ್ ಎಂಬಲ್ಲಿ ನಡೆದ ಇಂಡಿಯಾ ಇಮೇಜಿನ್ ಎಂಬ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡ ಈ ಚಿತ್ರದ ನಟನೆಗಾಗಿ ಮಹೋನ್ನತವಾದ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದರು ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದಾರೆ.

Leave A Reply

Your email address will not be published.

error: Content is protected !!