ಮಗಳ ಜೊತೆ ಸಕತ್ ಡಾನ್ಸ್ ಮಾಡಿದ ರಮೇಶ್ ಅರವಿಂದ್ ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಎವ್ವರ್ ಗ್ರೀನ್ ಹೀರೊ ರಮೇಶ್ ಅರವಿಂದ್ ಅವರ ನಟನೆ ಬಗ್ಗೆ ಯಾರಿಗೆ ತಾನೆ ಗೊತ್ತಿರುವುದಿಲ್ಲ. ರಮೇಶ್ ಅರವಿಂದ್ ಅವರ ಕುಟುಂಬದ ಬಗ್ಗೆ ಹಾಗೂ ಅವರು ಮಗಳ ಜೊತೆ ಡ್ಯಾನ್ಸ್ ಮಾಡಿರುವ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಯಂಗ್ ಎಂಡ್ ಎನರ್ಜಿಟಿಕ್ ಆದ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನನಗೆ ಅದ್ಭುತ ಅಪ್ಪ ಅಮ್ಮ ಸಿಕ್ಕಿದ್ದಾರೆ ಹಾಗೆ ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ ಅರ್ಚನಾ ಅವರನ್ನು ಭೇಟಿ ಮಾಡಿದ್ದೆ, ನಾನು ಬಹುಮುಖಿ ಕೆಲಸ ಮಾಡಲು ಕಾರಣ ನನ್ನ ಪತ್ನಿ ಎಂದು ರಮೇಶ್ ಅವರು ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಬಹುಮುಖ ಪ್ರತಿಭಾವಂತರು ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ವಾಗ್ಮಿ, ಓದುವುದು ಹೀಗೆ ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟರಾಗಿ ಗುರುತಿಸಿಕೊಂಡಿದ್ದಾರೆ ಅಲ್ಲದೆ ರಮೇಶ್ ಅರವಿಂದ್ ಅವರು ಎವ್ವರ್ ಗ್ರೀನ್ ಹೀರೊ. ಹಲವು ಕನ್ನಡ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಹೀರೊ ತ್ಯಾಗರಾಜ್ ಆಗಿ ಕಾಣಿಸಿಕೊಳ್ಳುವ ರಮೇಶ್ ಅವರು ವಯಕ್ತಿಕ ಜೀವನದಲ್ಲೂ ಪ್ರೀತಿ ಇಟ್ಟುಕೊಂಡಿದ್ದಾರೆ. ರಮೇಶ್ ಹಾಗೂ ಅರ್ಚನಾ ಅವರು 5 ವರ್ಷಗಳ ಕಾಲ ಸ್ನೇಹಿತರಾಗಿದ್ದರು. 1991, ಜುಲೈ 7 ರಂದು ಈ ಜೋಡಿ ಮದುವೆಯಾಗಿತ್ತು. ಸ್ಯಾಂಡಲ್ ವುಡ್ ನ ಅನ್ಯೋನ್ಯ ದಂಪತಿಗಳಲ್ಲಿ ಇವರು ಒಬ್ಬರು ಅದೇ ಪ್ರೀತಿಯಿಂದ ಅನ್ಯೋನ್ಯವಾಗಿ ಇದ್ದಾರೆ. ಇವರಿಗೆ ನಿಹಾರಿಕಾ ಹಾಗೂ ಅರ್ಜುನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಮೇಶ್ ಅವರು ತಮ್ಮ ಮಕ್ಕಳಿಗೆ ನೀವು ಏನೇ ತಪ್ಪು ಮಾಡಿದರೂ ನನಗೆ ಫೋನ್ ಮಾಡಿ ಹೇಳಬೇಕು ಎಂದು ಹೇಳಿದ್ದಾರೆ, ಮಕ್ಕಳೊಂದಿಗೆ ಸ್ನೇಹಿತನಂತೆ ಇರಬೇಕು ಎನ್ನುವುದು ರಮೇಶ್ ಅರವಿಂದ್ ಅವರ ಆಶಯ. ಅರ್ಚನಾ ಅವರು ಸ್ವತಂತ್ರ ಹಾಗೂ ಸ್ವಾವಲಂಬಿ. ರಮೇಶ್ ಅರವಿಂದ್ ಸಿನಿಮಾ ಶೂಟಿಂಗ್, ನಿರೂಪಣೆ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ ಹೀಗಾಗಿ ಕುಟುಂಬದ ಫಂಕ್ಷನ್ ಗಳಲ್ಲಿ ಭಾಗವಹಿಸಲು ಆಗುವುದಿಲ್ಲ ಹಾಗೂ ಮಕ್ಕಳ ಬಗ್ಗೆ ಗಮನ ಕೊಡಲಾಗುವುದಿಲ್ಲ. ಅರ್ಚನಾ ಅವರು ರಮೇಶ್ ಅವರ ಅನುಪಸ್ಥಿತಿಯಲ್ಲಿ ಎಲ್ಲವನ್ನು ನಿಭಾಯಿಸುತ್ತಾರೆ. ಮನೆಗೆಲಸ, ಮಕ್ಕಳ ಬಗ್ಗೆ ನೋಡಿಕೊಳ್ಳುವುದು ಅರ್ಚನಾ ಅವರೆ.

ವಿಷ್ಣು ವರ್ಧನ್ ಅವರು ಒಮ್ಮೆ ರಮೇಶ್ ಅವರ ಮನೆಗೆ ಬಂದಾಗ ನಿಮ್ಮ ಮನೆಯಿಂದ ಹೊರ ಹೋಗಲು ಇಷ್ಟವಾಗುವುದಿಲ್ಲ ನಿಮ್ಮ ಮನೆಯಲ್ಲಿ ಒಂದು ಕಳೆ ಇದೆ ಎಂದು ಹೇಳಿದ್ದರು. ಒಬ್ಬರ ಮೇಲೊಬ್ಬರು ನಂಬಿಕೆ ಇಡಬೇಕು ಇದೆ ಮೂಲಭೂತ ವಿಷಯ ಎಂದು ರಮೇಶ್ ಅವರು ಹೇಳುತ್ತಾರೆ. ನನ್ನ ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆದಿರಲು ಅರ್ಚನಾ ಕಾರಣ ನನಗೆ ಈ ಬಗ್ಗೆ ಖುಷಿಯಾಗುತ್ತದೆ ಎಂದು ರಮೇಶ್ ಅವರು ತಮ್ಮ ಪತ್ನಿಯನ್ನು ಹೊಗಳಿದ್ದಾರೆ. ನಿಹಾರಿಕಾ ಅವರು ಒಂದು ಕಂಪನಿಯಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ರಮೇಶ್ ಅರವಿಂದ್ ಅವರ ಕುಟುಂಬಕ್ಕೆ ಬಹಳ ಸಂತೋಷದ ಸಮಯ ರಮೇಶ್ ಅರವಿಂದ್ ಅವರ ಒಬ್ಬಳೇ ಮುದ್ದಿನ ಮಗಳು ನಿಹಾರಿಕಾ ಅವರ ಮದುವೆ ಸಮಾರಂಭ ನಡೆಯಲಿದೆ. ರಮೇಶ್ ಅವರ ಮಗಳು ನಿಹಾರಿಕಾ ಅವರೊಂದಿಗೆ ಡ್ಯಾನ್ಸ್ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ರಮೇಶ್ ಅರವಿಂದ್ ಅವರು ತಮ್ಮ ಕುಟುಂಬದವರ ಜೊತೆ ಸಂತೋಷವಾಗಿರಲಿ ಎಂದು ಆಶಿಸೋಣ.

Leave a Comment

error: Content is protected !!