ನಟ ಶರಣ್ ಕಷ್ಟಪಟ್ಟು ಕಟ್ಟಿಸಿದ ತಮ್ಮ ಕನಸಿನ ಮನೆ ಹೇಗಿದೆ ನೋಡಿ

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ನಾಯಕನಟನಾಗಿ ನಿರ್ಮಾಪಕನಾಗಿ ಇಂದಿನ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಶರಣ್ ಅವರು 1974 ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ಜನಿಸಿದರು ಮೂಲತಃ ತುಂಬು ಕಲಾ ಕುಟುಂಬದಿಂದ ಬಂದಿದ್ದು ಇವರ ಸಹೋದರಿ ಶೃತಿ ಅವರು ಕೂಡ ಖ್ಯಾತ ನಟಿ . ಇವರ ತಂದೆ ತಾಯಿ ಗುಬ್ಬಿ ನಾಟಕ ಕಂಪನಿ ನಟನೆ ಮಾಡುತಿದ್ದರು. ನಟನೆಗೂ ಮುನ್ನ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಅವರು ಕೆಲವು ಆರ್ಕೆಸ್ಟ್ರಗಳಲ್ಲಿ ಗಾಯಕರಾಗಿದರು ಹಾಗೂ ಕೆಲವು ಭಕ್ತಿಗೀತೆ ಹಾಡಿದ್ದಾರೆ . ಇನ್ನು ದೂರದರ್ಶನ ಟೈಟಲ್ ಟ್ರ್ಯಾಕ್ ಹಾಡಿದ್ದು ಕೆಲವು ಸೀರಿಯಲ್ ಅಲ್ಲಿ ಸಣ್ಣ ಪುಟ್ಟ ಪಾತ್ರವನ್ನು ವಹಿಸಿದ್ದಾರೆ.

1996 ರ ತೆರೆಕಂಡ ಸಿದ್ದಲಿಂಗಯ್ಯ ಅವರ ಪ್ರೇಮ ಪ್ರೇಮ ಪ್ರೇಮ ಎಂಬ ಚಿತ್ರದಲ್ಲಿ ಹಾಸ್ಯ ನಟನಾಗಿ ಮಿಂಚಿ ಚಿತ್ರರಂಗದ ಪ್ರವೇಶ ಮಾಡಿದರು ಆಮೇಲೆ ಮುಟ್ಟಿದ್ದೆಲ್ಲವೂ ಚಿನ್ನವಾಯಿತು 99 ಚಿತ್ರಗಳಲ್ಲಿ ಹಾಸ್ಯನಟ ಪೋಷಕ ಪಾತ್ರಗಳನ್ನು ಅಚ್ಚಕಟ್ಟಾಗಿ ನಿಭಾಯಿಸಿ ಅಭಿನಯ ಮಾಡಿದ್ದಾರೆ.
ತಮ್ಮ ಮಗನ ಅಸೆಯನ್ನು ನನಸು ಮಾಡಲು ಶರಣ್ ಅವರು ತಮ್ಮ ಮನೆಯ ಆಸ್ತಿ ಪತ್ರವನ್ನೂ ಅಡವಿಟ್ಟು ತಾವೇ ಸ್ವತಃ ರ‍್ಯಾಂಬೋ ಎಂಬ ಚಿತ್ರವನ್ನು ನಿರ್ಮಿಸಿ ಅದರಲ್ಲಿ ನಾಯಕ ನಟನಾಗಿ ಅಭಿನಯಿಸಿ ಕೊನೆಗೂ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರೇಕ್ಷಕರ ಮನಗೆದ್ದಿದ್ದರು ಕನ್ನಡದ ಬಾಕ್ಸಾಫೀಸಿನಲ್ಲಿ ಟಾಪ್ ಐದು ಚಿತ್ರಗಳಲ್ಲಿ ರ‍್ಯಾಂಬೋ ಸೇರ್ಪಡೆಯಾಗಿದೆ ನಂತರ ಈ ಚಿತ್ರದ ನಂತರ ಅಧ್ಯಕ್ಷ ರಾಜೇಂದ್ರ ವಿಕ್ಟರಿ ಚಿತ್ರಗಳು ನಾಯಕ ನಟನಾಗಿ ಜಯಭೇರಿ ಬಾರಿಸಿ ಶರಣ್ ಅವರ ಜೀವನದಲ್ಲಿ ಹೊಸ ತಿರುವು ಪಡೆದು ಸಿನಿಪ್ರೇಕ್ಷಕರ ಮನ ಗೆದ್ದಿದ್ದಾರೆ.

ನಂತರ ನಟನೆ ಜೊತೆಗೆ ಮೆಚ್ಚಿನ ಗಾಯನವನ್ನು ಮುಂದುವರಿಸಿ ವಜ್ರಕಾಯ ಬುಲೆಟ್ ಬಸ್ಯಾ ಮುಂತಾದ ಚಲನಚಿತ್ರಗಳಲ್ಲಿ ಸಂಗೀತದ ಮೂಲಕ ತಮ್ಮ ಧ್ವನಿಯನ್ನು ನೀಡಿದ್ದಾರೆ. ತಮ್ಮ ಸಿನಿಮಾರಂಗದಲ್ಲಿ ಸಾಕಷ್ಟು ನೋವು ನಲಿವು ಜೊತೆ ಕಷ್ಟ ಪಟ್ಟು ದುಡಿದ ಹಣದಿಂದ ಶರಣ್ ಅವರು ತಮ್ಮ ಕನಸಿನ ಮನೆಯೊಂದನ್ನು ನಾಗರಬಾವಿ ಅಲ್ಲಿ ಕಟ್ಟಿಸಿದ್ದಾರೆ

ಇತ್ತೀಚೆಗೆ ತಮ್ಮ ಕುಟುಂಬ ಜೊತೆ ಅದ್ದೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ ಇನ್ನು ಗೃಹಪ್ರವೇಶಕ್ಕೆ ಕನ್ನಡ ಸಿನಿಮಾ ನಟ ನಟಿಯರು ಬಂದು ಶುಭ ಕೋರಿದ್ದಾರೆ ಅತ್ಯದ್ಭುತವಾಗಿ ಮನೆಯನ್ನು ನಿರ್ಮಾಣಮಾಡಿದ್ದು ಮನೆಯ ಪ್ರವೇಶದ್ವಾರದಲ್ಲಿ ಬುದ್ಧನ ವಿಗ್ರಹವಿದ್ದು ನಂತರ ಆಧುನಿಕ ಪೀಠೋಪಕರಣ ಗಳಿಂದ ಕೂಡಿದ ಕಿಚನ್ ನೋಡಲು ತುಂಬಾ ರಮಣೀಯವಾಗಿದೆ

ತಮ್ಮ ಅಭಿರುಚಿಯ ಅನುಗುಣವಾಗಿ ಹೋಂ ಥಿಯೇಟರ್ ವ್ಯಾಯಾಮ ಯೋಗ ಮಾಡಲು ಪ್ರಶಾಂತವಾದ ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಿದ್ದಾರೆ ಇವಿಷ್ಟು ಮನೆಯ ಒಳಾಂಗಣದ ನೋಟವಾದರೆ ಹಚ್ಚಹಸಿರಿನಿಂದ ಕೂಡಿರುವ ಹೊರಾಂಗಣವನ್ನು ಕಾಣಬಹುದು. ಶರಣ್ ಅವರನ್ನು ನೋಡಿದರೆ 45 ವರ್ಷ ಎಂದು ಹೇಳಲು ಅಸಾಧ್ಯ ಇನ್ನೂ ಯುವಕನಂತೆ ಕಾಣುವ ತಮ್ಮ ಅದ್ಭುತ ನಟನೆ ಗಾಯನ ಹಾಸ್ಯ ಪ್ರವೃತ್ತಿಯಿಂದ ಜನಮನ್ನಣೆಯನ್ನು ಪಡೆದಿದ್ದಾರೆ . ತಮ್ಮ ನಟನೆಯಿಂದ ಇನ್ನು ಯಶಸ್ಸು ಗಳಿಸಲಿ ಎಂದು ನಾವೆಲ್ಲರೂ ಹಾರೈಸೋಣ..

Leave A Reply

Your email address will not be published.

error: Content is protected !!