ರಶ್ಮಿಕಾ ಮಂದಣ್ಣ ಧರಿಸುವ ದುಬಾರಿ ಹೈ ಹೀಲ್ಸ್ ಚಪ್ಪಲಿಯ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ

ರಶ್ಮಿಕಾ ಮಂದಣ್ಣ ಅವರು ಇದೀಗ ಭಾರತದ ಚಿತ್ರರಂಗದಲ್ಲಿ ಟಾಪ್ ನಟಿಯರ ಸ್ಥಾನವನ್ನು ಗಳಿಸಿದ್ದಾರೆ. ಇನ್ನೇನು ಕೆಲವೇ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ನವರು ಭಾರತದ ನಂಬರ್ ಒನ್ ನಟಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಕನ್ನಡದ ಹುಡುಗಿ ದೇಶಮಟ್ಟದಲ್ಲಿ ಈ ರೇಂಜ್ ಗೆ ಹೆಸರು ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ರಶ್ಮಿಕಾ ಅವರು ಐಶ್ವರ್ಯ ರೈ ಅವರ ಮಟ್ಟಕ್ಕೆ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಸಿನಿಮಾ ರಸಿಕರಿಗಿದೆ.

ರಶ್ಮಿಕಾ ಇದೀಗ ಉತ್ತರ ಭಾರತದಲ್ಲಿ ಕೂಡ ಸುಪ್ರಸಿದ್ಧ ನಟಿ ದಕ್ಷಿಣ ಭಾರತದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದ ಮೇಲೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿ ಅಂಗಳಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರು ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬೈ ಎಂಬ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ರೊಮ್ಯಾಂಟಿಕ್ ಪ್ರೇಮಕಥೆ ಆಧಾರಿತ ಮಿಷನ್ ಮಜನು ಚಿತ್ರದಲ್ಲಿ ಕೂಡ ರಶ್ಮಿಕಾ ನಟನೆ ಮಾಡಿದ್ದಾರೆ.

ರಶ್ಮಿಕಾಗೆ ಏಕಕಾಲದಲ್ಲಿ ಹಿಂದಿ ಸಿನಿಮಾಗಳಲ್ಲಿ ಮತ್ತು ತೆಲುಗು ತಮಿಳು ಸಿನಿಮಾಗಳಲ್ಲಿ ಹಲವಾರು ಆಫರ್ ಗಳು ಬರುತ್ತಿವೆ. ರಶ್ಮಿಕಾ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಯಾಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್ ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್ ಹೃತಿಕ್ ರೋಷನ್ ಐಶ್ವರ್ಯ ರೈ ಕರೀನಾ ಕಪೂರ್ ಕತ್ರಿನಾ ಕೈಫ್ ಇವರೆಲ್ಲ ಕೂಡ ಆಗಮಿಸಿದ್ದರು.

ಸೆಲೆಬ್ರಿಟಿಗಳು ಅಂದ ಮೇಲೆ ಪಾರ್ಟಿಗಳಿಗೆ ಹೋಗುವಾಗ ದುಬಾರಿ ಬಟ್ಟೆಗಳನ್ನು ಮತ್ತು ಕಾಸ್ಟ್ಯೂಮ್ ಗಳನ್ನು ಹಾಕಿಕೊಳ್ಳುತ್ತಾರೆ. ರಶ್ಮಿಕಾ ಅವರು ಕೂಡ ಕರಣ್ ಜೋಹರ್ ಅವರ ಬರ್ತ್ ಡೇ ಪಾರ್ಟಿಗೆ ದುಬಾರಿ ಹೈಹೀಲ್ಸ್ ಚಪ್ಪಲಿಯನ್ನು ಹಾಕಿಕೊಂಡು ಹೋಗಿದ್ದರು. ರಶ್ಮಿಕಾ ಅವರು ಬರ್ತ್ ಡೇ ಪಾರ್ಟಿಗೆ ಕಪ್ಪು ಕಟೌಟ್ ಡ್ರೆಸ್ ಮತ್ತು ಕಪ್ಪು ಬಣ್ಣದ ಹೈ ಹೀಲ್ಸ್ ಚಪ್ಪಲಿ ಹಾಕಿದ್ದರು. ರಶ್ಮಿಕಾ ಮಂದಣ್ಣ ಅವರು ಧರಿಸಿದ್ದ ಈ ಕಪ್ಪು ಬಣ್ಣದ ಹೈ ಹೀಲ್ಸ್ ನ ಬೆಲೆ ಕೇಳಿದ್ರೆ ನೀವೇಲ್ಲಾ ನಿಜಕ್ಕೂ ನಂಬಲು.

ರಶ್ಮಿಕಾ ಮಂದಣ್ಣ ಅವರು ಧರಿಸಿದ್ದ ಚಪ್ಪಲಿಯ ಹೆಸರು ಸೇಂಟ್ ಲಾರೆಂಟ್ಸ್ ಒಪಿಯಮ್ ಸಿಲೂಯೆಟ್. ಈ ಚಪ್ಪಲಿಯ ಬೆಲೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿಗಳು. ಈ ಚಪ್ಪಲಿಯನ್ನು ನಯವಾದ ಕಪ್ಪು ಚರ್ಮದ ವಿನ್ಯಾಸದಲ್ಲಿ ಪ್ರಸ್ತುತಪಡಿಸಲಾಗಿದೆ. ನಾದದ ಚಿಹ್ನೆ ಯಂತೆ ಇರುವ ಗೋಲ್ಡ್-ಟೋನ್ YSL ಹೀಲ್ ಅನ್ನು ಈ ಚಪ್ಪಲಿಗೆ ಅಳವಡಿಸಲಾಗಿದೆ. ಇದು 100% ಲೆದರ್ ಚಪ್ಪಲಿಯಾಗಿದೆ. ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ತೆಗೆದುಕೊಂಡು ರಶ್ಮಿಕಾಗೆ ಒಂದೂವರೆ ಲಕ್ಷ ರೂಪಾಯಿಯ ಚಪ್ಪಲಿ ಯಾವ ಲೆಕ್ಕ ಹೇಳಿ.

Leave A Reply

Your email address will not be published.

error: Content is protected !!