KGF 3: ಕೆಜಿಎಫ್ ಚಾಪ್ಟರ್ 3 ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

KGF 3 ಆದಿಪುರುಷ್ ಸಿನಿಮಾದ ಸೋಲಿನ ನಂತರ ಪ್ರತಿಯೊಬ್ಬರೂ ಕೂಡ ಈಗ ಪ್ರಶಾಂತ್ ನೀಲ್(Prashanth Neel) ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಸಲಾರ್ ಸಿನಿಮಾದ ಬಿಡುಗಡೆಯಾಗಿ ಕಾಯುತ್ತಿದ್ದಾರೆ ಯಾಕೆಂದರೆ ಪ್ರಶಾಂತ್ ನೀಲ್ ಅವರಂತಹ ನಿರ್ದೇಶಕ ಒಂದು ಸಿನಿಮಾ ಮಾಡಿದ್ದಾರೆ ಎಂದರೆ ಖಂಡಿತವಾಗಿ ಅದು ಬಾಕ್ಸ್ ಆಫೀಸ್ ನಲ್ಲಿ ಇತಿಹಾಸವನ್ನು ನಿರ್ಮಿಸದೆ ಇರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಪ್ರತಿಯೊಬ್ಬ ಸಿನಿಮಾ ಪಂಡಿತರಲ್ಲೂ ಕೂಡ ಇದೆ.

ಆದರೆ ಈಗ ಪ್ರಶಾಂತ್ ನೀಲ್ ಅವರ ವಿಷಯ ಬಂದ್ರೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಕೂಡ ಆ ವಿಷಯದಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಯಾಕೆಂದರೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಈಗಾಗಲೇ ಎರಡು ಸಿನಿಮಾಗಳು ಮೂಡಿಬಂದಿದ್ದು ಎರಡು ಕೂಡ ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿವೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ.

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಕೆಜಿಎಫ್ ಚಾಪ್ಟರ್ 3(KGF CHAPTER 3) ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಕಾತುರ ಕುತೂಹಲ ಎಲ್ಲವೂ ಕೂಡ ಹೆಚ್ಚಾಗುತ್ತದೆ ಹೀಗಾಗಿ ಇಂದಿನ ಲೇಖನಿಯಲ್ಲಿ ಇದರ ಬಿಡುಗಡೆ ದಿನಾಂಕವನ್ನು ಹೇಳಲು ಬಂದಿದ್ದೇವೆ. ಹಾಗಿದ್ದರೆ ಈ ಸಿನಿಮಾ ಯಾವಾಗ ಬಿಡುಗಡೆಯಾಗಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಈಗಾಗಲೇ ಯಶ್(Yash) ಹಾಗೂ ಪ್ರಶಾಂತ್ ನೀಲ್ ಇಬ್ಬರಿಗೂ ಇರುವಂತಹ ಕಮಿಟ್ಮೆಂಟ್ ಗಳನ್ನು ಮುಗಿಸಿಕೊಂಡು ಅವರು ಕೂಡಲೇ ಕೆಜಿಎಫ್ ಚಾಪ್ಟರ್ 3 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದರು ಕೂಡ ಈ ಸಿನಿಮಾ ಬಿಡುಗಡೆಯಾಗುವುದಕ್ಕೆ 2025 ರ ವರೆಗೂ ಕೂಡ ನಾವು ಕಾಯಲೇ ಬೇಕಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.

Leave A Reply

Your email address will not be published.

error: Content is protected !!