Kiccha Sudeep: ಕಿಚ್ಚ ಸುದೀಪ್ ಅಳಿಯನಿಗೆ ಕೊನೆಗೂ ಬಂತು ಒಳ್ಳೆ ಸಮಯ. ಕನ್ನಡಕ್ಕೆ ಬರ್ತಿದ್ದಾರೆ ಜೂನಿಯರ್ ಕಿಚ್ಚ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕನ್ನಡ ಚಿತ್ರರಂಗದ ಓಡೋ ಕುದುರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದರೆ ಅವರು ಮಾಡುವಂತಹ ವಿಭಿನ್ನ ಸಿನಿಮಾ ಹಾಗೂ ವಿಭಿನ್ನ ನಟನೆ ನಿಜಕ್ಕೂ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಮನೋರಂಜನಾತ್ಮಕ ವಿಚಾರವಾಗಿದೆ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವುದರಲ್ಲಿ ಕೂಡ ಯಾವುದೇ ಅನುಮಾನವಿಲ್ಲ.

ಪರಭಾಷೆಗಳಲ್ಲಿ ಕೂಡ ಕೇವಲ ನಾಯಕ ನಟನ ಪಾತ್ರದಲ್ಲಿ ಮಾತ್ರವಲ್ಲ ಸಹ ಕಲಾವಿದನ ಪಾತ್ರದಲ್ಲಿ ಕೂಡ ಹಾಗೂ ಖಳನಾಯಕನ ಪಾತ್ರದಲ್ಲಿ ಕೂಡ ಕಿಚ್ಚ ಸುದೀಪ್ ರವರು ನಟಿಸಿ ಬಂದಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ರವರಿಗೆ ಯಾವುದೇ ಪಾತ್ರ ನೀಡಿದರು ಕೂಡ ಅದಕ್ಕೆ 100% ನ್ಯಾಯವನ್ನು ನೀಡುವಂತಹ ಸಾಮರ್ಥ್ಯ ಇದೆ.

ಈಗ ಕಿಚ್ಚ ಸುದೀಪ್ ರವರ ಕುಟುಂಬದಿಂದ ಅವರ ಅಳಿಯಾಗಿರುವಂತಹ ಸಂಚಿತ್ ಸಂಜೀವ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ನಿನ್ನೆಯಷ್ಟೇ ಅಧಿಕೃತ ಘೋಷಣೆ ನಡೆದಿದ್ದು ಈ ಸಿನಿಮಾವನ್ನು ಅವರ ಪತ್ನಿಯಾಗಿರುವಂತಹ ಪ್ರಿಯ ಸುದೀಪ್(Priya Sudeep) ರವರೆ ನಿರ್ಮಾಪಕಿಯಾಗಿ ಮಾಡುತ್ತಿದ್ದಾರೆ.

ನೋಡೋದಕ್ಕೆ ಕಿಚ್ಚ ಸುದೀಪ್ ರವರ ಹಾಗೆ ಹೈಟ್ ಹೊಂದಿರುವಂತಹ ಸಂಚಿತ್ ಸಂಜೀವ್(Sanchith Sanjeev) ಕನ್ನಡ ಚಿತ್ರರಂಗದಲ್ಲಿ ಸುದೀಪ್ ರವರ ಹಾಗೆ ಎತ್ತರವನ್ನು ಹೊಂದಲಿ ಎಂಬುದಾಗಿ ಹಾರೈಸುತ್ತಿದ್ದೇವೆ. ಸಂಚಿತ್ ಸಂಜೀವ್ ರವರ ಬಗ್ಗೆ ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!