
Kiccha Sudeep: ಕಿಚ್ಚ ಸುದೀಪ್ ಅಳಿಯನಿಗೆ ಮೊದಲ ಸಿನಿಮಾದಲ್ಲೇ ಡಬಲ್ ಚಾಲೆಂಜ್.
Kiccha Sudeep ಕಿಚ್ಚ ಸುದೀಪ್ ರವರು ತಮ್ಮ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರನ್ನು ಜಿಮ್ಮಿ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡಲು ಸಿದ್ಧರಾಗಿದ್ದಾರೆ. ಇಂದು ಇದರ ಮುಹೂರ್ತ ಪೂಜೆ ಕೂಡ ನಡೆದಿದೆ.
ಈ ಸಿನಿಮಾವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಸ್ವತಹ ಕಿಚ್ಚ ಸುದೀಪ್ ರವರ ಪತ್ನಿ ಆಗಿರುವ ಪ್ರಿಯ ಸುದೀಪ್(Priya Sudeep) ರವರು ಪಡೆದುಕೊಂಡಿದ್ದು, ಸಹ ನಿರ್ಮಾಪಕರಾಗಿ ಕೆಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಕೂಡ ಕಂಡುಬರುತ್ತಿದೆ. ಈ ಸಿನಿಮಾದ ಜೊತೆಗೆ ಕಿಚ್ಚ ಸುದೀಪ್ ರವರು ತಮ್ಮ ಅಳಿಯನಿಗೆ ಮತ್ತೊಂದು ಚಾಲೆಂಜ್ ಕೂಡ ನೀಡಿದ್ದಾರೆ.

ಕಿಚ್ಚ ಸುದೀಪ್ ರವರ ಅಳಿಯ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಹೇಟರ್ಸ್ಗಳು ಈ ಸಿನಿಮಾದ ಮೂಲಕ ಫ್ಲ್ಯೂಕ್ ನಲ್ಲಿ ಗೆದ್ದ ಎನ್ನುವ ಕಾರಣವನ್ನು ಕೂಡ ನೀಡುತ್ತಾರೆ. ಅದಕ್ಕಾಗಿ ಕಿಚ್ಚ ಸುದೀಪ್(Kiccha Sudeep) ರವರ ತಮ್ಮ ಅಳಿಯ ಸಂಚಿವ್ ಅವರಿಗೆ ಡಬಲ್ ಚಾಲೆಂಜ್ ಅನ್ನು ನೀಡುವ ಮೂಲಕ ಹೊಸ ರೀತಿಯ ಲಾಂಚ್ ಅನ್ನು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೌದು ಹೊಸ ಸಿನಿಮಾದ ಮೂಲಕವೇ ಸಂಚಿತ್ ಸಂಜೀವ್ ರವರು ಮಾಡಲು ಹೊರಟಿರುವ ಆ ಎರಡು ಕೆಲಸಗಳು ಯಾವುವು ಗೊತ್ತಾ ಬನ್ನಿ ತಿಳಿಯೋಣ.
ಹೌದು ಮಿತ್ರರೇ ಸಂಚಿತ್ ಸಂಜೀವ್(Sanchith Sanjeev) ರವರು ಮೊದಲ ಸಿನಿಮಾದಲ್ಲಿ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಆ ಸಿನಿಮಾದ ನಿರ್ದೇಶನವನ್ನು ಕೂಡ ಸ್ವತಹ ಅವರೇ ಮಾಡಲಿದ್ದಾರೆ. ಹೀಗಾಗಿ ಸಿನಿಮಾ ಗೆದ್ದರೆ ಹಾಗೂ ಸೋತರು ಎರಡಕ್ಕೂ ಕೂಡ ಅವರೇ ಕಾರಣವಾಗಲಿದ್ದಾರೆ ಎಂಬುದಾಗಿ ಕಿಚ್ಚ ಸುದೀಪ್ ರವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಂಜಿತ್ ಸಂಜೀವ್ ಮೊದಲ ಸಿನಿಮಾದಲ್ಲಿ ಯಾವ ರೀತಿ ಸವಾಲನ್ನು ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.