ಕೆಜಿಎಫ್ ಚಿತ್ರದ ವಿವಾದದ ಬಗ್ಗೆ ಸುದೀಪ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು ನೋಡಿ! ಖಡಕ್ಕಾಗಿ ಸ್ಪಷ್ಟನೆ ಕೊಟ್ಟ ಕಿಚ್ಚ

ಸೆಲೆಬ್ರಿಟಿಗಳು ಅಂದ ಮೇಲೆ ವಿವಾದಗಳು ಕಾಂಟ್ರವರ್ಸಿಗಳು ಸರ್ವೇಸಾಮಾನ್ಯ. ಚಿತ್ರರಂಗದಲ್ಲಿ ಯಾವಾಗ ನಟರು ಯಶಸ್ಸು ಹಾಗೂ ಜನಪ್ರಿಯತೆಯನ್ನು ಗಳಿಸಿ ಅದರ ಜೊತೆಜೊತೆಗೆ ವಿವಾದಗಳನ್ನು ಹಾಗೂ ಕಾಂಟ್ರವರ್ಸಿಗಳುನ್ನು ಅವರಿಗೆ ಗೊತ್ತಿಲ್ಲದ ಹಾಗೆ ಗಳಿಸಿರುತ್ತಾರೆ. ಚಿತ್ರರಂಗ ಒಗ್ಗಟ್ಟಿನಿಂದ ಇರೊಕೇ ಪ್ರಯತ್ನ ಪಟ್ಟರೂ ಸಹ ಕೆಲವು ಹೊಟ್ಟೆ ಕಿ-ಚ್ಚಿನ ವ್ಯಕ್ತಿಗಳು ಚಿತ್ರರಂಗದಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಸುದೀಪ್ ಮತ್ತು ಯಶ್ ಸ್ಟಾರ್ ವಾರ್ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಮಧ್ಯೆ ಕೂಡ ದೊಡ್ಡದಾದ ಭಿನ್ನಾಭಿಪ್ರಾಯ ಮೂಡಿದೆ ಈ ಭಿನ್ನಾಭಿಪ್ರಾಯ ಮೂಡೋಕೆ ಕಾರಣವೇನೆಂದರೆ ಸುದೀಪ್ ಅವರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಹೋಗಿದ್ದರು.. ಆ ಸಮಯದಲ್ಲಿ ರಿಪೋರ್ಟರ್ ಒಬ್ಬರು ಸುದೀಪ್ ಅವರ ಬಳಿ ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದ್ದಾರೆ ಆಗ ಸುದೀಪ್ ಅವರು ನಾನು ಕೆಜಿಎಫ್ ಚಿತ್ರದಲ್ಲಿ ಅಭಿನಯ ಮಾಡಿಲ್ಲ, ನನಗೆ ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀರಿ ಎಂಬಂತೆ ಉತ್ತರ ನೀಡಿದ್ದರು. ಕೆಜಿಎಫ್ ಚಿತ್ರವು ಕನ್ನಡಿಗರ ಹೆಮ್ಮೆಯ ಚಿತ್ರ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂಥ ಸಾಧನೆ ಕೆಜಿಎಫ್ ಚಿತ್ರ ಮಾಡಿದೆ.

ಇಂತಹ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕೆಜಿಎಫ್ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಸಾವಧಾನದಿಂದ ಒಂದೆರಡು ಮಾತನಾಡುವ ಯೋಗ್ಯತೆ ಇಲ್ಲವೇ ಎಂದು ಹಲವಾರು ಜನರು ಕಿಡಿಕಾರಿದ್ದಾರೆ. ಯಶ್ ಅವರ ಅಭಿಮಾನಿಗಳು ಸುದೀಪ್ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೇ ಸುದೀಪ್ ಅವರ ಮೇಲೆ ಕೋಪವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಒಬ್ಬ ನಟನನ್ನು ಯಶಸ್ಸನ್ನು ಕಂಡರೆ ಇನ್ನೊಬ್ಬ ನಟಿಗೆ ಆಗಲ್ಲ ಎನ್ನುವ ಮಾತುಗಳೆಲ್ಲಾ ಕೇಳಿ ಬರೋಕೆ ಸ್ಟಾರ್ಟ್ ಆಗ್ತಿದೆ. ಇಂತಹ ಸಮಯದಲ್ಲಿ ಸುದೀಪ್ ಅವರು ತಾವು ಹೇಳಿದ ಮಾತನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಟೀಕೆ ಮಾಡುತ್ತಾ ಇರೋರಿಗೆ ಸರಿಯಾದ ಉತ್ತರ ನೀಡಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಸುದೀಪ್ ಅವರು ತಾವು ಕೆಜಿಎಫ್ ಚಿತ್ರದ ಬಗ್ಗೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಯಾಕೆ ಮಾತನಾಡಿಲ್ಲ ಎಂಬುದರ ಬಗ್ಗೆ ಈ ರೀತಿಯಾಗಿ ಖಡಕ್ಕಾಗಿ ಸಮರ್ಥನೆ ನೀಡಿದ್ದಾರೆ.ಆ ದಿನ ನಾನು ಗೋವನ್ ಫಿಲ್ಮ್ ಫೆಸ್ಟಿವಲ್ ಗೆ ಹೋಗಿದ್ದೆ.. ಕಾರಿನಿಂದ ನಾನು ಇಳಿದ ತಕ್ಷಣವೇ ಕನ್ನಡದ ರಿಪೋರ್ಟರ್ ಒಬ್ಬ ಕನ್ನಡದಲ್ಲಿ ಅಭಿನಂದನೆಯನ್ನು ತಿಳಿಸಿದ. ನಂತರ ಇದ್ದಕ್ಕಿದ್ದ ಹಾಗೆ ತಕ್ಷಣವೇ ಕೆಜಿಎಫ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಅವನು ಕೇಳಿದ. ರಿಪೋರ್ಟರ್ ರೀತಿ ಕೇಳಿದ್ದಕ್ಕೆ ನನಗೆ ಸ್ವಲ್ಪ ಮುಜುಗರ ಆಯ್ತು.

ಯಾಕೆಂದರೆ ಫಿಲ್ಮ್ ಫೆಸ್ಟಿವಲ್ ಗೆ ಬಂದ ಸಂಭ್ರಮದಲ್ಲಿ ತಾನು ತುಂಬಾ ಖುಷಿಯಾಗಿದ್ದೆ ಮತ್ತು ಆತಂಕದಲ್ಲಿದ್ದೆ. ಇಂಥ ಸಮಯದಲ್ಲಿ ಬಂದು ನನಗೆ ಕೆಜಿಎಫ್ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆ ಸಮಂಜಸವೆನಿಸಲಿಲ್ಲ. ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ನನಗೆ ಅದಕ್ಕೆ ಸಂಬಂಧಪಟ್ಟ ಪ್ರಶ್ನೆ ಕೇಳದೆ ಕೆಜಿಎಫ್ ಚಿತ್ರದ ಬಗ್ಗೆ ಕೇಳಿರುವುದಕ್ಕೆ ಏನು ಉತ್ತರ ಕೂಡದು ಅಂತ ತಿಳಿಯಲಿಲ್ಲ . ಕೆಜಿಎಫ್ ಚಿತ್ರದ ಬಗ್ಗೆ ನನಗೇನೂ ದ್ವೇಷವಿಲ್ಲ. ಸ್ವತಃ ನಾನೇ ಕೆಲವು ಹಿಂದಿ ಸಂದರ್ಶನಗಳಲ್ಲಿ ಕೆಜಿಎಫ್ ಚಿತ್ರದ ಬಗ್ಗೆ ಮಾತಾಡಿದ್ದೆನೆ. ಈ ವಿಷಯದ ಬಗ್ಗೆ ನಾನು ಇಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಪರೀಕ್ಷೆಗೆ ಕೂತು ಕೊಳ್ಳದ ವ್ಯಕ್ತಿ ಪ್ರಶ್ನೆಯ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಖಡಕ್ ಮಾತುಗಳನ್ನು ಸುದೀಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಕಿಚ್ಚನ ಖಾರವಾದ ಮಾತುಗಳು ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.

Sudeep about kgf controversy

Leave a Comment

error: Content is protected !!