ಸಮಂತಾಳನ್ನು ಸಂಪೂರ್ಣವಾಗಿ ಮರೆತು ಹೊಸ ಮದುವೆಗೆ ರೆಡಿ ಆದ ನಾಗ ಚೈತನ್ಯ. ಅಕ್ಕಿನೇನಿ ಕುಟುಂಬಕ್ಕೆ ಹೊಸ ಸೊಸೆಯ ಆಗಮನ

ತೆಲಗು ಸ್ಟಾರ್ ನಟ ನಾಗಚೈತನ್ಯ ಹಾಗೂ ಬಹುಬೇಡಿಕೆಯ ಬಹುಭಾಷಾ ನಟಿ ಸಮಂತಾ ಅವರ ವಿಚ್ಚೇಧನದ ವಿಚಾರ ಟಾಲಿವುಡ್ ನಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಮಾರು ಆರು ತಿಂಗಳುಗಳ ಕಾಲ ಈ ಬಗ್ಗೆ ಮಾತನಾಡುತ್ತಿದ್ದ ಟಾಲಿವುಡ್ ಗೆ ಕಡೆಗೂ ವಿಚ್ಛೇಧನದ ಕಹಿ ಸುದ್ದಿಯನ್ನು ನೀಡಿತ್ತು ಈ ಜೋಡಿ. ತೆಲಗುವಿನಲ್ಲಿ ಅತಿ ದೊಡ್ಡ ಹೆಸರಿರುವ ಅಕ್ಕಿನೇನಿ ಕುಟುಂಬ ಈ ವಿಚ್ಛೇಧನಕ್ಕೆ ಕಡೆಗೂ ಅಸ್ತು ಎಂದಿತ್ತು.

ನಟಿ ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ತಮ್ಮ ಎರಡನೇ ಮದುವೆ ವಾರ್ಷಿಕೋತ್ಸವದ ದಿನವೇ ಗುಡ್ ಬೈ ಹೇಳಿದ್ದರು. ಆ ಬಳಿಕ ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಇಬ್ಬರೂ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ನಿಜ ಹೇಳಬೇಕೆಂದರೆ ವಿಚ್ಛೇಧನದ ನಂತರ ಸಮಂತಾ ಅವರು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಸಮಂತಾ ಕಂಪು ಹರಡಿದೆ. ಈ ನಡುವೆ ನಾಗ ಚೈತನ್ಯ ಅವರ ಪ್ರೀತಿಯ ವಿಚಾರ ಇನ್ನಷ್ಟು ಸುದ್ದಿ ಮಾಡಿದೆ. ನಾಗ ಚೈತನ್ಯ ನಟಿಯೊಬ್ಬಳ ಜೊತೆ ಡೆಟಿಂಗ್ ನಲ್ಲಿ ಇದ್ಡಾರೆ ಎನ್ನುವ ವಿಷಯ ಟಾಲಿವುಡ್ ತುಂಬಾ ಬಾರಿ ಗಾಸಿಪ್ ಮಾಡುತ್ತಿದೆ.

ಹೌದು, ನಟ ನಾಗ ಚೈತನ್ಯ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದರೂ ಗರ್ಲ್ ಫ್ರೆಂಡ್ ಜಿತೆ ಸುತ್ತಾಡುತ್ತಾರೆ ಎನ್ನುವ ವಿಷಯ ಸಿಕ್ಖಾಪಟ್ಟೆ ವೈರಲ್ ಆಗಿದೆ. ಆ ಹುಡುಗಿ ಯಾರು ಅಂತ ನಿಮಗೂ ಆಶ್ಚರ್ಯವಾಗಬಹುದು. ತೆಲಗು ಸೂಪರ್ ಸ್ಟಾರ್ ನಾಗಚೈತನ್ಯ, ತೆಲುಗು ನಟಿ ಶೋಭಿತಾ ಧಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ಡಾರೆ ಎಂದು ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ.

ಈಗಾಗಲೇ ರಿಚ್ ಹೋಟೆಲ್ ಗಳಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಶೋಭಿತ, ಇತ್ತಿಚಿಗೆ ಹಲವು ಕಾರ್ಯಕ್ರಮಗಳಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಾಗಾರ್ಜುನ ಕುಟುಂಬ ಒಪ್ಪಿಗೆ ನೀಡಿದೆ ಅಂತ ಟಾಲಿವುಡ್ ಹೇಳುತ್ತಿದೆ. ಇನ್ನು ಇವರಿಬ್ಬರ ಸಂಬಂಧವೇ ಸ್ಯಾಮ್ ಹಾಗೂ ಚೈತ್ ಬೇರೆಯಾಗುವುದಕ್ಕೆ ಕಾರಣವಾ ಅಂತ ಹಲವರಿಗೆ ಅನ್ನಿಸಬಹುದು. ಆದರೆ ಇವರಿಬ್ಬರ ವಿಚ್ಛೇಧನಕ್ಕೂ ಶೋಭಿತಾಳಿಗೂ ಸಂಬಂಧವಿಲ್ಲವಂತೆ!

ಇನ್ನು ನಟ ಚೈತ್ ಹಾಗೂ ನಟಿ ಶೋಭಿತಾ ಸಂಬಂಧದ ಬಗ್ಗೆ ಗಾಸಿಪ್ ಗಳು ಹರಿದಾಡುತ್ತಿವೆಯೇ ಹೊರತು ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಹಾಗಾಗಿ ಟಾಲಿವುಡ್ ನಲ್ಲಿ ವೈರಲ್ ಆಗಿರುವ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಸುದ್ದಿ ನಿಜವೋ ಸುಳ್ಳೋ ಎನ್ನುವ ಗುಟ್ಟು ಇನ್ನೂ ರಟ್ಟಾಗಬೇಕಿದೆ.

Leave a Comment

error: Content is protected !!