ನರೇಶ್ ಒಬ್ಬ ಹೆಣ್ಣುಬಾಕ! ಲೇಡಿ ಮ್ಯಾನೇಜರ್ ನಿಂದ ಹಿಡಿದು ಇನ್ನೂ ಕೆಲವು ಹೆಂಗಸರ ಜೋತೆ ಅಫೇರ್ ಇತ್ತು ಎಂದ ನರೇಶ್ ಮೂರನೇ ಪತ್ನಿ

ಇತ್ತೀಚೆಗೆ ತೆಲುಗು ಹಿರಿಯ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೊಂದು ಕಡೆ ಇವರಿಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ನರೇಶ್ ಆಗಲಿ ಅಥವಾ ಪವಿತ್ರ ಲೋಕೇಶ್ ಆಗಲಿ ಮದುವೆ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ನಟ ನರೇಶ್ ಅವರ ಮೂರನೇ ಪತ್ನಿ ರಮ್ಯ ಇದೀಗ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ.

ತೆಲುಗು ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿಯವರು ಇದೀಗ ದೊಡ್ಡ ಸುದ್ದಿಯಲ್ಲಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮದುವೆ ವಿಚಾರ ಹೊರಬರುತ್ತಿದ್ದಂತೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಇದೀಗ ಗರಂ ಆಗಿದ್ದಾರೆ. ರಮ್ಯಾ ರಘುಪತಿಯವರು ನರೇಶ್ ಅವರನ್ನು 2010ನೇ ಇಸವಿಯಲ್ಲಿ ಮದುವೆಯಾಗಿದ್ದರು. ನರೇಶ್ ಅವರ ಮೂರನೇ ಪತ್ನಿ ಹಾಗು ಇವರು ನರೇಶ್ ಅವರನ್ನು ವವಿವಾಹವಾಗಿದ್ದರು. ರಮ್ಯ ಅವರು ಕನ್ನಡತಿ. ನಟ ನರೇಶ್ 6000 ಕೋಟಿಯ ಒಡೆಯನಾದರೆ, ರಮ್ಯಾ ಬಗ್ಗೆ ಅವರು ಏನೂ ಕಡಿಮೆಯಿಲ್ಲ ಇವರು ಕೂಡ ಬಿಸಿನೆಸ್ ಮ್ಯಾನ್ ಮತ್ತು ಮಾಜಿ ಸಚಿವನ ಸಹೋದರನ ಪುತ್ರಿ. ಇವರು ಕೂಡಾ ಶ್ರೀಮಂತ ಮನೆತನದವರು.

ಮದುವೆಯಾದ 2-3ವರ್ಷಗಳ ಕಾಲ ಇಬ್ಬರು ಕೂಡ ಚೆನ್ನಾಗಿಯೇ ಇದ್ದರು. ಅದಾದ ನಂತರ ನಟ ನರೇಶ್ ಅವರು ಪತ್ನಿ ರಮ್ಯಾ ಮೇಲೆ ವಂಚನೆ ಆರೋಪವನ್ನು ಮಾಡಿದರು ತನ್ನ ಹೆಸರನ್ನು ಬಳಸಿಕೊಂಡು ತನ್ನ ಹೆಂಡತಿ ಹಣವನ್ನು ಕಬಳಿಸಿದ್ದಾರೆ ಎಂಬ ಆರೋಪವನ್ನು ಮಾಡಿದರು ಅದಾದ ಮೇಲೆ ನರೇಶ್ ಮತ್ತು ರಮ್ಯಾ ಡಿವೋರ್ಸ್ ಪಡೆದುಕೊಂಡರು ಎಂದು ಸುದ್ದಿ ಹಬ್ಬಿತ್ತು. ಇದೀಗ ಸುಮಾರು ಏಳರಿಂದ ಹತ್ತು ವರ್ಷಗಳು ಕಳೆದ ಮೇಲೆ ಮತ್ತೆ ನರೇಶ್ ಮತ್ತು ಅವರ ಮೂರನೇ ಪತ್ನಿಯ ಸಂಬಂಧದ ವಿಷಯ ಚರ್ಚೆಗೆ ಬಂದಿದೆ. ಸ್ವತಃ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಸಂದರ್ಶನವೊಂದರಲ್ಲಿ ನರೇಶ್ ಅವರ ಮೇಲೆ ಕೆಂಡಾಮಂಡಲವಾಗಿದ್ದಾರೆ ಮತ್ತು ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ನರೇಶ್ ಒಬ್ಬ ಹೆಣ್ಣುಬಾಕ. ತುಂಬಾ ಹೆಣ್ಣುಮಕ್ಕಳ ಜೊತೆ ಇವನಿಗೆ ಅಫೇರ್ ಇದೆ ಸ್ವತಃ ಅವನ ಲೇಡಿ ಮ್ಯಾನೇಜರ್ ಜೊತೆ ಅಫೇರ್ ಇಟ್ಟುಕೊಂಡಿದ್ದ ಎಂದು ರಮ್ಯಾ ಹೇಳಿದ್ದಾರೆ. ತನಗಿಂತ ಹೆಚ್ಚಾಗಿ ತನ್ನ ಲೇಡಿ ಮ್ಯಾನೇಜರ್ ಜೊತೆ ಹೆಚ್ಚು ಕಾಲ ಕಳೆಯೋದು ಮತ್ತು ಲೇಡಿ ಮ್ಯಾನೇಜರ್ ಜೊತೆ ಟ್ರಿಪ್ ಗಳಿಗೆ ಹೋಗುತ್ತಿದ್ದ. ಈ ವಿಷಯ ನರೇಶ್ ಅವರ ಅಮ್ಮನಿಗೆ ಕೂಡ ತಿಳಿದಿತ್ತು. ನನಗೆ ಕೂಡ ಈ ವಿಷಯ ತಿಳಿದ ಮೇಲೆ ನಾನು ಲೇಡಿ ಮ್ಯಾನೇಜರ್ ನ ಕೆಲಸದಿಂದ ತೆಗೆದು ಹಾಕಲು ವಾರ್ನಿಂಗ್ ನೀಡಿದ್ದೆ. ಆದರೆ ನರೇಶ್ ನನ್ನ ಮಾತು ಕೇಳದೆ ಲೇಡಿ ಮ್ಯಾನೇಜರ್ ಜೊತೆ ಆಗಾಗ ಸಂಬಂಧ ಬೆಳೆಸುತ್ತಿದ್ದ.

ಶ್ರೀರಾಮನವಮಿಯ ದಿನ ಸ್ವತಃ ತನ್ನ ಗಂಡ ನರೇಶ್ ಲೇಡಿ ಮ್ಯಾನೇಜರ್ ಜೊತೆ ಸಂಪರ್ಕ ಹೊಂದುತ್ತಿರುವ ವೀಡಿಯೋವೊಂದನ್ನು ಡಿಟೆಕ್ಟಿವ್ ಮೂಲಕ ರಮ್ಯಾ ರಘುಪತಿಯವರು ವೀಕ್ಷಿಸಿದ್ದರು. ರೆಡ್ ಹ್ಯಾಂಡ್ ಆಗಿ ತನ್ನ ಗಂಡನನ್ನು ಹಿಡಿದಿದ್ದರು. ಆ ದಿನ ಆ ಕ್ಷಣ ರಮ್ಯಾ ರಘುಪತಿಯವರು ಬೆಚ್ಚಿಬಿದ್ದರು. ಅಲ್ಲಿಯವರೆಗೂ ನಾನು ನಮ್ಮಿಬ್ಬರ ಸಂಬಂಧವನ್ನು ಪವಿತ್ರವಾಗಿ ನೋಡುತ್ತಿದ್ದೆ. ಆದರೆ ಆ ಘಟನೆ ನಡೆದ ಮೇಲೆ ನರೇಶ್ ಮೇಲೆ ಇದ್ದ ದೃಷ್ಟಿಕೋನವೇ ಬದಲಾಯಿತು. ಇಷ್ಟೆ ಅಲ್ಲ ನರೇಶ್ ಗೆ ಮನೆಯ ಪಾತ್ರೆ ತೊಳೆಯುವ ಹೆಂಗಸಿನ ಜೊತೆಗೆ ಕೂಡ ಅಕ್ರಮ ಸಂಬಂಧ ಇತ್ತೆಂದು ಮೂರನೇ ಪತ್ನಿ ರಮ್ಯ ರಘುಪತಿ ಸ್ಫೋಟಕ ವಿಷಯ ತೆರೆದಿಟ್ಟಿದ್ದಾರೆ. ತೆಲುಗು ನಟ ನರೇಶ್ ನ ಇನ್ನೊಂದು ಮುಖವನ್ನು ರಮ್ಯಾ ಬಿಚ್ಚಿಟ್ಟಿದ್ದಾರೆ.

Leave a Comment

error: Content is protected !!