38 ನೇ ವಯಸ್ಸಿಗೆ ಮದುವೆಯಾದ ನಯನತಾರಾ! ಪ್ರಭುದೇವಾ ಜೋತೆ ಪ್ರೀತಿಯಲ್ಲಿ ಬಿದ್ದಿದ್ದ ನಯನತಾರಾ ಬ್ರೇಕಪ್ ಮಾಡಿಕೊಂಡಿದ್ದೇಕೆ

ಸೌತ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ನಯನತಾರಾ ಅವರದ್ದು ಬಹು ದೊಡ್ಡ ಹೆಸರು. ಅವರನ್ನ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ಇದೀಗ ನವ ಮದುಮಗಳಾಗಿ ಹಸೆಮಣೆ ಏರಿದ್ದಾರೆ ನಟಿ ನಯನತಾರಾ. ನಟಿ ನಯನತಾರಾ ಹಾಗೂ ಅವರನ್ನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿತು. ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ನಯನತಾರಾ ಮದುವೆಯಾಗಿದ್ದಾರೆ. ಇನ್ನು ನಯನತಾರಾ ಅವರ ಮದುವೆಗೆ ಸೆಲೆಬ್ರಿಟಿಗಳ ಮಹಾ ದಂಡೇ ಆಗಮಿಸಿತ್ತು. ಸೌತ್ ನಿಂದ ನಾರ್ತ್ ವರೆಗೂ ಎಲ್ಲಾ ಸಿನಿಮಾ ಇಂಡಸ್ಟ್ರಿಯ ಸೆಲೆಬ್ರೆಟಿಗಳು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರಿಗೆ ಮನಸಾರೆ ಹಾರೈಸಿದ್ದಾರೆ.

ಬಾಲಿವುಡ್ ಬಾದ್ ಷಾ ನಟ ಶಾರುಖ್ ಖಾನ್, ಬೋನಿ ಕಪೂರ್, ಸೂಪರ್ ಸ್ಟಾರ್ ರಜನಿಕಾಂತ್, ಅಟ್ಲಿ ಕುಮಾರ್, ಕಾರ್ತಿ ಹೀಗೆ ಹಲವಾರು ಸೆಲೆಬ್ರಿಟಿಗಳು ನಯನತಾರಾ ಅವರ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ನಯನತಾರಾ ಹಾಗೂ ವಿಘ್ನೇಶ ಶಿವನ್ ಅವರ ಜೋಡಿಯನ್ನು ಮೆಚ್ಚಿಕೊಂಡು ಅವರ ವೈವಾಹಿಕ ಜೀವನಕ್ಕೆ ಬೆಸ್ಟ್ ವಿಶಸ್ ತಿಳಿಸಿದ್ದಾರೆ.

ಆದರೆ ಈ ಸಂದರ್ಭದಲ್ಲಿ ನಯನತಾರಾ ಹಾಗೂ ಪ್ರಭುದೇವ್ ಅವರು ಒಂದು ಕಾಲದಲ್ಲಿ ಬಹಳ ಆತ್ಮೀಯರಾಗಿದ್ದು, ಡೇಟಿಂಗ್ ಮಾಡುತ್ತಿದ್ದುದರ ಬಗ್ಗೆ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಒಂದಾಗಲೇ ಇಲ್ಲ ಯಾಕೆ ಅಂತ ಬೇಸರವನ್ನು ವ್ಯಕ್ತಪಡಿಸಿದವರೂ ಇದ್ದಾರೆ. ನಟಿ ನಯನತಾರಾ ಹಾಗೂ ನಟ ಪ್ರಭುದೇವ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತಿತ್ತು. ಸೌತ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ನಟನಾಗಿ, ನಿರ್ದೇಶಕನಾಗಿ, ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಪ್ರಭುದೇವ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಪ್ರಭುದೇವ್ ಹಾಗೂ ನಯನತಾರಾ ಸಾಕಷ್ಟು ಸಭೆ-ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದರು. 2009ರಲ್ಲಿ ನಟಿ ನಯನತಾರಾ ಹಾಗೂ ಪ್ರಭುದೇವ ಅವರ ಪ್ರೇಮ ಪ್ರಕರಣ ಬಹಳ ಚಾಲ್ತಿಯಲ್ಲಿತ್ತು. ಎಲ್ಲರೂ ಇವರಿಬ್ಬರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

ಆದರೆ ನಟಿ ನಯನತಾರಾ ಆಗಲಿ ಪ್ರಭುದೇವ ಅವರಾಗಲೀ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕಾರಣ ಪ್ರಭುದೇವ ಅವರು ಲತಾ ಅವರ ಜೊತೆ ಮದುವೆಯಾಗಿದ್ದರು. ಅವರ ವಿಚ್ಛೇದನವಾಗದೆ ನಯನತಾರಾ ಜೊತೆ ಸಂಬಂಧವನ್ನು ಮುಂದುವರಿಸುವುದು ಪ್ರಭುದೇವ ಅವರಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ನಯನತಾರಾ ಹಾಗೂ ಪ್ರಭುದೇವ ಅವರ ಲವ್ ಸ್ಟೋರಿ 2009ರಲ್ಲಿಯೇ ಕೊನೆಯಾಯಿತು.

ಈ ಘಟನೆಯ ನಂತರ ನಟಿ ನಯನತಾರಾ ಹಾಗೂ ಪ್ರಭುದೇವ ಬೇರೆ ಬೇರೆಯಾಗಿ, ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿ ಆದರು. ಕಾಲಾನಂತರದಲ್ಲಿ ನಟಿ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಎಂಬವರ ಪ್ರೀತಿಯಲ್ಲಿ ಬಿದ್ದರು. ಈಗ ಇವರಿಬ್ಬರ ಪ್ರೀತಿ ಬೆಳೆದು, ಮದುವೆಯ ರೂಪದಲ್ಲಿ ಮುಂದುವರೆಯಲಿದೆ. ನಯನತಾರಾ ಮದುವೆಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದ ಎಲ್ಲರಿಗೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಸಿಹಿ ಸುದ್ದಿಯನ್ನು ನೀಡಿದೆ.

Leave A Reply

Your email address will not be published.

error: Content is protected !!