ಮಗನಿಗೆ ವಿಭಿನ್ನವಾಗಿ ಹೆಸರಿಟ್ಟು ನಾಮಕರಣ ಮಾಡಿದ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ. ನಿಕಿಲ್ ಮಗನ ಹೆಸರು ಮತ್ತು ಅದರ ಅರ್ಥ ಏನು ಗೊತ್ತಾ ಇಲ್ಲಿದೆ ನೋಡಿ

ದೇವೇಗೌಡರ ಫ್ಯಾಮಿಲಿಯಲ್ಲಿ ಇಂದು ತುಂಬಾ ವಿಶೇಷ ಮತ್ತು ಸಡಗರದ ದಿನ. ಯಾಕೆಂದರೆ ನಿಖಿಲ್ ಕುಮಾರಸ್ವಾಮಿ ಅವರ ಮಗನ ನಾಮಕರಣ ಮಾಡಿದ ದಿನ. ಅದ್ದೂರಿಯಾಗಿ ತನ್ನ ಮೊಮ್ಮಗನ ನಾಮಕರಣ ಕಾರ್ಯಕ್ರಮವನ್ನು ಕುಮಾರಸ್ವಾಮಿಯವರು ಆಚರಿಸಿಕೊಳ್ಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಮಗನಿಗೆ ತುಂಬಾ ವಿಶಿಷ್ಟ ಮತ್ತು ವಿಭಿನ್ನವಾದ ಹೆಸರಿಟ್ಟಿದ್ದಾರೆ ನಿಖಿಲ್ ಮತ್ತು ರೇವತಿ ಇಬ್ಬರ ಕುಟುಂಬದಲ್ಲೂ ಇಂದು ಖುಷಿ ಮನೆ ಮಾಡಿದೆ.

ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಸಂಬಂಧಿಕರು ಮತ್ತು ಆಪ್ತ ಸ್ನೇಹಿತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಮಗು ಹುಟ್ಟಿ ಸುಮಾರು 9 ತಿಂಗಳುಗಳು ಕಳೆದ ಮೇಲೆ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಮಗನ ನಾಮಕರಣದ ಕಾರ್ಯಕ್ರಮವನ್ನು ಹೊಂದಿಕೊಂಡಿದ್ದಾರೆ. ಯಾಕೆ ಇಷ್ಟೊಂದು ಎಂದು ಪ್ರಶ್ನೆ ಕೇಳಿದ್ದಕ್ಕೆ ಕುಮಾರಸ್ವಾಮಿಯವರೇ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಮಗ ಹುಟ್ಟಿದ ಸಂದರ್ಭದಲ್ಲಿ ಕೋವಿಡ್ ಅಲೆ ಜೋರಾಗಿತ್ತು…

ಈ ಕಾರಣದಿಂದ ಕಳೆದ ವರ್ಷ ನಾಮಕರಣದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ ತಮ್ಮ ಆಪ್ತ ಬಳಗ ಮತ್ತು ಸ್ನೇಹಿತರನ್ನು ನಾಮಕರಣಕ್ಕೆ ಆಮಂತ್ರಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣದಿಂದ ಈ ವರ್ಷ ನಾಮಕರಣವನ್ನು ಹಮ್ಮಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡರ ಕುಟುಂಬದ ಯಶಸ್ಸಿಗೆ ಕಾರಣವಾದ ಪ್ರತಿಯೊಬ್ಬರು ಕುಟುಂಬ ಸಮೇತವಾಗಿ ಬಂದು ಆಶೀರ್ವಾದ ಮಾಡಬೇಕೆಂದು ಕುಮಾರಸ್ವಾಮಿಯವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಇಚ್ಚೆಯಂತೆ ಇಂದು ಮೊಮ್ಮಗನ ನಾಮಕರಣದ ಸಮಾರಂಭ ಭರ್ಜರಿಯಾಗಿ ನಡೆದಿದೆ.

ನಾಮಕರಣದ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿಯವರು ತಮ್ಮ ಮೊಮ್ಮಗನಿಗೆ ಚಿನ್ನದ ಕಡಗವನ್ನು ತೊಡಿಸಿದ್ದಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಗನಿಗೆ ಇಟ್ಟಿರುವ ಹೆಸರು ತುಂಬಾ ಕುತೂಹಲವಾಗಿದೆ. ತಮ್ಮ ಮಗನಿಗೆ ನಿಖಿಲ್ ಆವ್ಯನ್ ದೇವ್ ಎಂಬ ಹೆಸರನ್ನು ಇಟ್ಟಿದ್ದಾರೆ. ದೇವೇಗೌಡರ ಹೆಸರು ಇರಲಿ ಎಂದು ಚಿಕ್ಕದಾಗಿ ದೇವ್ ಎಂದು ಮಗನ ಹೆಸರಿಗೆ ಕೊನೆಯಲ್ಲಿ ಸೇರಿಸಿದ್ದಾರೆ. ಆವ್ಯನ್ ಎನ್ನುವುದು ಗಣಪತಿಯ ಹೆಸರು ಈ ಹೆಸರಿನ ಅರ್ಥ ಅದೃಷ್ಟವಂತ ಅಂತ. ಶಾಸ್ತ್ರದ ಪ್ರಕಾರ ನಿಖಿಲ್ ಮತ್ತು ರೇವತಿ ಅವರು ಮಗನ ನಾಮಕರಣ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ನಿಮ್ಮ ಮಗ ದೊಡ್ಡವನಾದ ಮೇಲೆ ಏನಾಗಬೇಕು ಎಂದು ಕೇಳಿದ್ದಕ್ಕೆ ನಿಖಿಲ್ ಅವನು ಒಬ್ಬ ಒಳ್ಳೆಯ ಪ್ರಜೆಯಾದರೆ ಸಾಕು ಎಂದು ಹೇಳಿದ್ದಾರೆ. ನಿಕಿಲ್ ಮಗನ ನಾಮಕರಣದ ಸುಂದರ ಕ್ಷಣಗಳು ಹೇಗಿತ್ತು ಇಲ್ಲಿದೆ ನೋಡಿ ವಿಡಿಯೋ

Leave A Reply

Your email address will not be published.

error: Content is protected !!