ಸಂಜನಾ ಗರ್ಲಾನಿ ತಂಗಿ ನಿಕ್ಕಿ ಗರ್ಲಾನಿ ನಿಶ್ಚಿತಾರ್ಥ ಹೇಗಿತ್ತು ನೋಡಿ. ನಿಕ್ಕಿ ಗರ್ಲಾನಿ ಕೈಹಿಡಿಯಲಿರುವ ಹುಡುಗ ಯಾರು ಗೊತ್ತಾ

ನಿಕಿತಾ ಗರ್ಲಾನಿ ಅವರು ತಮಿಳು ಚಿತ್ರರಂಗದ ಖ್ಯಾತ ನಟಿ ಇವರು ತಮ್ಮ ವೃತ್ತಿ ಜೀವನವನ್ನು ಕನ್ನಡ ಚಿತ್ರರಂಗದಿಂದಲೇ ಪ್ರಾರಂಭ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಜೊತೆಗೆ ಅಜಿತ್ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಪಾತ್ರ ವಹಿಸುವ ಮೂಲಕ ನಾಯಕ ನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇವರು ಬೆರಳೆಣಿಕೆಯಷ್ಟೇ ಸಿನಿಮಾ ಮಾಡಿದರು. ನಂತರ ತಮಿಳು ಚಿತ್ರರಂಗಕ್ಕೆ ಅವರು ಕಾಲಿಡುತ್ತಾರೆ.

ನಿಕ್ಕಿ ಗರ್ಲಾನಿ ಅವರು ಅಭಿನಯಿಸಿದ ಮರಕಥಮಣಿ, ಮೊಟ್ಟ ಶಿವ ಕೆಟ್ಟ ಶಿವ ,ಹರಹರ ಮಹಾದೇವ, ಮಲುಪು ಮತ್ತು ರಾಜವಂಶ೦ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೊಂಡು ಅಲ್ಲೇ ಸೆಟಲ್ ಆಗಿದ್ದರು. 2017 ರಲ್ಲಿ ಮಲುಪು ಎಂಬ ತೆಲುಗು ಚಿತ್ರದ ಮೂಲಕ ನಿಕ್ಕಿ ಗರ್ಲಾನಿ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ತಮ್ಮ ಮೊದಲ ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಆ ಚಿತ್ರದ ಹೀರೋ ಆದಿ ಜೊತೆ ನಿಕ್ಕಿ ಗರ್ಲಾನಿ ಗೆ ಸ್ನೇಹವಾಗುತ್ತದೆ. ನಂತರ ಸ್ನೇಹ ಸಂಬಂಧವಾಗಿ ಬೆಳೆಯುತ್ತೆ. ಆದಿ ಮತ್ತು ನಿಕ್ಕಿ 2017 ರಿಂದ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ. ಪಬ್ಲಿಕ್ ಜಾಗಗಳನ್ನು ಇಬ್ಬರೂ ಒಟ್ಟೊಟ್ಟಿಗೆ ಓಡಾಡುವ ಫೋಟೋಗಳು ಕೂಡ ಮುಂಚೆ ಹರಿದಾಡುತ್ತಿತ್ತು. ಆದರೆ ತಾವಿಬ್ಬರೂ ಪ್ರೀತಿಸೋ ವಿಷಯ ನಿಕ್ಕಿ ಗಲ್ರಾನಿ ಮತ್ತು ಆದಿ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ತೆಲುಗು ಸ್ಟಾರ್ ನಟನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ನಿಕ್ಕಿ ಗರ್ಲಾನಿ ತುಂಬಾ ಖುಷಿ ನೀಡಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ನಡೆಸಿದ್ದೇನೆ . ಇನ್ಮುಂದೆ ನಾವಿಬ್ಬರು ಒಟ್ಟಿಗೆ ಪ್ರಯಾಣ ವನ್ನು ಶುರುಮಾಡಲಿದ್ದೇವೆ. ಈ ಹೊಸ ಪ್ರಯಾಣಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ನಿಕ್ಕಿ ಗರ್ಲಾನಿ ವರು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!