Olle Hudga Pratham: ತನ್ನ ಎಂಗೇಜ್ಮೆಂಟ್ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು?

Olle Hudga Pratham ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಹೆಸರುಗಳು ಸದಾಕಾಲ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಅವುಗಳಲ್ಲಿ ಒಳ್ಳೆ ಹುಡುಗ ಪ್ರಥಮ್ ಅವರ ಹೆಸರು ಕೂಡ ಒಂದಾಗಿದ್ದು ಇವರ ಜರ್ನಿ ಪ್ರಾರಂಭವಾಗಿದ್ದು ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್(Biggboss Kannada) ಮೂಲಕ. ಇಲ್ಲಿಂದ ಪ್ರಾರಂಭವಾದ ಅವರ ಜರ್ನಿ ನೇರವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ.

ಒಳ್ಳೆ ಹುಡುಗ ಪ್ರಥಮ್(Olle Hudga Pratham) ರವರು ಸದ್ಯದ ಮಟ್ಟಿಗೆ ಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟನಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಸಿನಿಮಾಗಳು ಕೂಡ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದ್ದು ಇದೇ ಕಾರಣಕ್ಕಾಗಿ ಅವರು ಇನ್ನಷ್ಟು ಸಿನಿಮಾಗಳ ನಿರ್ಮಾಣಕ್ಕೆ ಕೂಡ ಕೈ ಹಾಕಿದ್ದಾರೆ.

ಸದಾ ಕಾಲ ಒಂದಿಲ್ಲೊಂದು ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿಯಾಗುವಂತಹ ಒಳ್ಳೆ ಹುಡುಗ ಪ್ರಥಮ್ ಅವರು ಈಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಮೊದಲ ಬಾರಿಗೆ ಸುದ್ದಿಯಾಗಿದ್ದಾರೆ. ಹೌದು ಇತ್ತೀಚಿಗಷ್ಟೇ ಸೆಲೆಬ್ರಿಟಿಗಳ ಮದುವೆಯ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ ಜಾಸ್ತಿಯಾಗಿದ್ದು ಈ ಕಡೆ ಒಳ್ಳೆ ಹುಡುಗ ಪ್ರಥಮ್ ಅವರು ಕೂಡ ಗುಟ್ಟಾಗಿಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಹೌದು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ನನ್ನ ಎಂಗೇಜ್ಮೆಂಟ್ ಸುದ್ದಿ ಇಡೀ ರಾಜ್ಯ ಸಂತೋಷ ಕೊಡುವ ಸುದ್ದಿಯಲ್ಲ ಆದ್ರೂ ಕೂಡ ನನ್ನನ್ನು ಇಷ್ಟಪಡುವಂತಹ ಜನರಿಗೆ ಇದನ್ನು ಹಂಚಿಕೊಳ್ಳಬೇಕು ಎಂದು ಅನಿಸಿತು ಅದಕ್ಕಾಗಿ ಈ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಎಂಬುದಾಗಿ ಪ್ರಥಮ್(Pratham) ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳ ಮೂಲಕ ಈ ವಿಚಾರವನ್ನು ಹೊರ ಹಾಕಿದ್ದಾರೆ.

Leave A Reply

Your email address will not be published.

error: Content is protected !!