Pavithra Lokesh: ನರೇಶ್ ಹಾಗೂ ಪವಿತ್ರ ಲೋಕೇಶ್ ನಟನೆಯ ಮಳ್ಳಿ ಪಳ್ಳಿ ಸಿನಿಮಾ ಎಷ್ಟು ಕೋಟಿ ನಷ್ಟದಲ್ಲಿದೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Pavithra Lokesh ರಮ್ಯಾ ರಘುಪತಿ ಅವರ ರಾದ್ಧಾಂತ ರಂಪಾಟ ಆದಮೇಲೆ ಪವಿತ್ರ ಲೋಕೇಶ್(Pavithra Lokesh) ಹಾಗೂ ನರೇಶ್ ರವರ ಪ್ರೀತಿ ಪ್ರೇಮದ ಆಟಗಳು ಬಹಿರಂಗವಾಗಿ ಪ್ರತಿಯೊಬ್ಬರಿಗೂ ಕೂಡ ತಿಳಿದು ಬರುತ್ತದೆ. ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಕೂಡ ತಿಳಿದು ಬರುತ್ತದೆ.

ಇನ್ನು ಇವರ ಜೀವನದ ಘಟನೆಯನ್ನೇ ಸಿನಿಮವನ್ನಾಗಿ ಮಾಡಿದ್ದಾರೆ ಎನ್ನುವ ಸುದ್ದಿಗಳು ಕೂಡ ಸಿನಿಮಾದ ಕೆಲವೊಂದು ದೃಶ್ಯಗಳನ್ನು ನೋಡಿ ಜನರು ಭಾವಿಸಿದ್ದರು. ಹೌದು ಮಿತ್ರರೇ ಪವಿತ್ರ ಲೋಕೇಶ್ ಹಾಗೂ ನರೇಶ್(Naresh) ಕಾಂಬಿನೇಷನ್ ನಲ್ಲಿ ಮೂಡಿಬಂದಂತಹ ಮಳ್ಳಿಪಳ್ಳಿ ಸಿನಿಮಾ ನೋಡಿದ ನಂತರ ಪ್ರತಿಯೊಬ್ಬರೂ ಕೂಡ ಇದನ್ನೇ ಭಾವಿಸಿದರು. ಇದೇ ಕಾರಣಕ್ಕಾಗಿ ಈ ಸಿನಿಮಾಗೆ ಪ್ರಚಾರ ಕೂಡ ದೊಡ್ಡ ಮಟ್ಟದಲ್ಲಿ ಸಿಕ್ಕಿತ್ತು.

ಇನ್ನು ಭರ್ಜರಿ 15 ಕೋಟಿ ಬಜೆಟ್ ನಲ್ಲಿ ಮಳ್ಳಿಪಳ್ಳಿ(Malli Pelli) ಸಿನಿಮಾ ನಿರ್ಮಾಣವಾಗಿತ್ತು ಎಂಬುದಾಗಿ ಕೂಡ ಅಧಿಕೃತವಾಗಿ ತಿಳಿದು ಬಂದಿದ್ದು ಈಗಾಗಲೇ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಎಲ್ಲಾ ಕಡೆ ಬಿಡುಗಡೆ ಆಗಿರುವಂತಹ ಈ ಸಿನಿಮಾ ಮೊದಲ ದಿನ 30 ಲಕ್ಷ ರೂಪಾಯಿ ಗಳಿಸಿತು ಎಂಬುದಾಗಿ ತಿಳಿದು ಬಂದಿದ್ದು ಒಟ್ಟಾರೆಯಾಗಿ ಲಾಸ್ ನಲ್ಲಿರುವ ಈ ಸಿನಿಮಾ ಎಷ್ಟು ಲಾಸ್ ಅನ್ನು ಮಾಡಿಕೊಂಡಿದೆ ಎಂಬುದನ್ನು ತಿಳಿಯೋಣ ಬನ್ನಿ.

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಪ್ರಕಾರ ನರೇಶ್ ರವರೆ ನಿರ್ಮಾಪಕರಾಗಿರುವ ಕಾರಣದಿಂದಾಗಿ ಅವರು ಈ ಸಿನಿಮಾದ ಮೂಲಕ ಎಲ್ಲಾ ಮೀಡಿಯಾ ಹಾಗೂ ಥಿಯೇಟರ್ ಕಲೆಕ್ಷನ್ ಹೊರತುಪಡಿಸಿ 1.5 ಕೋಟಿ ನಷ್ಟದಲ್ಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ನರೇಶ್(Naresh) ರವರಿಗೆ ಈಗ ನಷ್ಟವನ್ನು ಭರಿಸಬೇಕಾದಂತಹ ಅಗತ್ಯವಿದೆ.

Leave A Reply

Your email address will not be published.

error: Content is protected !!