Pooja Gandhi: ಮದುವೆ ಮುರಿದು ಹೋದ ಮೇಲೆ ಚಿತ್ರರಂಗದಿಂದ ಪೂಜಾ ಗಾಂಧಿ ಮಾಯವಾಗಿದ್ದು ಯಾಕೆ ಗೊತ್ತಾ?

Pooja Gandhi ನಟಿ ಪೂಜಾ ಗಾಂಧಿ(Actress Pooja Gandhi) ನಿಮಗೆಲ್ಲರಿಗೂ ತಿಳಿದಿರುವಂತೆ ಮುಂಗಾರು ಮಳೆ(Mungaru Male) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.

ಕನ್ನಡ ಬರದೇ ಇದ್ದರೂ ಕೂಡ ಕನ್ನಡಿಗರು ಅವರ ನಟನೆಯನ್ನು ನೋಡಿ ಅವರನ್ನು ತಮ್ಮ ಮನೆಮಗಳಂತೆ ಸ್ವೀಕರಿಸುತ್ತಾರೆ. ಆದರೆ ಈ ಮಧ್ಯದಲ್ಲಿ ಅವರ ಎಂಗೇಜ್ಮೆಂಟ್ ನಡೆದು ಮದುವೆ ಕೂಡ ನಿಶ್ಚಯವಾಗುತ್ತದೆ. ಎಲ್ಲರೂ ಪೂಜಾ ಗಾಂಧಿ ಮದುವೆಯಾಗುತ್ತಾರೆ ಎಂಬುದಾಗಿ ಭಾವಿಸುತ್ತಾರೆ.

ಆದರೆ ಕೆಲವೇ ದಿನಗಳಲ್ಲಿ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡು ಚಿತ್ರರಂಗದಿಂದಲೂ ಕೂಡ ಕಣ್ಮರೆಯಾಗುತ್ತಾರೆ. ಅದಾದ ನಂತರ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಾ ಚಿತ್ರರಂಗದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದರು. ಈಗ ಮತ್ತೆ ಮಾಧ್ಯಮದ ಮುಂದೆ ಬಂದಿದ್ದು ಆ ಸಂದರ್ಭದಲ್ಲಿ ಯಾಕೆ ಕಣ್ಮರೆಯಾದರೂ ಎಂಬುದನ್ನು ಕೂಡ ವಿವರಿಸಿದ್ದಾರೆ.

ಚಿತ್ರರಂಗ ದೂರ ಇದಿದ್ದಕ್ಕೆ ನಿಜವಾದ ಕಾರಣ: ಹೌದು ಗೆಳೆಯರೇ ನಟಿ ಪೂಜಾ ಗಾಂಧಿ(Pooja Gandhi) ಅವರು ಇದರ ಕುರಿತಂತೆ ಮಾತನಾಡುತ್ತಾ ಆ ಸಂದರ್ಭದಲ್ಲಿ ನನಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಇದ್ದವು ಇದೇ ಕಾರಣಕ್ಕಾಗಿ ನಾನು ಚಿತ್ರರಂಗದಿಂದ ದೂರವಾಗಬೇಕಾಗಿ ಬಂದಿತು ಹಾಗೂ ಕೆಲವೊಂದು ವೈಯಕ್ತಿಕ ಜೀವನದ ಕೆಲಸಗಳು ಇದ್ದ ಕಾರಣದಿಂದಾಗಿ ನಾನು ಕಣ್ಮರೆಯಾಗಿದ್ದೆ ಈಗ ಮತ್ತೆ ಬಂದಿದ್ದೇನೆ ಎಂಬುದಾಗಿ ಹೇಳಿದ್ದಾರೆ.

Leave A Reply

Your email address will not be published.

error: Content is protected !!