Pooja Gandhi Marriage: ಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾಗಾಂಧಿ!

Pooja Gandhi Marriage: ಅದೊಂದು ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯನ್ನು ಸುರಿಸಿದ ನಟಿ ಪೂಜಾ ಗಾಂಧಿ ಅವರು ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿ ತಮ್ಮ ವ್ಯಕ್ತಿತ್ವದ ಪರಿಚಯವನ್ನು ಕನ್ನಡಿಗರಿಗೆ ಮಾಡಿಕೊಟ್ಟರು. ಭಾಷೆ ಸಮಸ್ಯೆಯಿಂದಾಗಿ ಹೆಚ್ಚಿನ ಕನ್ನಡ ಚಿತ್ರಗಳ ಅವಕಾಶವನ್ನು ಕಳೆದುಕೊಂಡಂತಹ ಪೂಜಾ ಗಾಂಧಿ ಅವರು ಕನ್ನಡವನ್ನು ಕಲಿಯುವಂತಹ ನಿರ್ಧಾರ ತೆಗೆದುಕೊಂಡು

ಶ್ರೇಷ್ಠ ಕವಿ ಮಹಾಶಯರ ಕವನಗಳನ್ನು, ಕಥಸಂಕಲಗಳನ್ನು ಓದುತ್ತಾ ಜನರಿಗೆ ಕನ್ನಡ ಭಾಷೆಯ ಹಿರಿಮೆಯ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ತಮಗೆ ಕನ್ನಡವನ್ನು ಹೇಳಿಕೊಟ್ಟ ಗುರುಗಳನ್ನೇ ವರಿಸಿರುವುದಾಗಿ ಮಾಹಿತಿಯನ್ನು ಹಂಚಿಕೊಂಡು ಕೈ ಬರಹದಲ್ಲಿ ಬರೆದಂತಹ ಕರೆಯೋಲೆಯ ಮುಖಾಂತರ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು (Marriage invitation card) ನೀಡಿದ್ದಾರೆ.

ಹೌದು ಗೆಳೆಯರೇ, ಓರ್ವ ಸ್ಟಾರ್ ಸೆಲೆಬ್ರಿಟಿ ಆದರೂ ಕೂಡ ಯಾವುದೇ ಅದ್ದೂರಿ ಆಡಂಬರವಿಲ್ಲದೆ ಬಹಳ ಸರಳವಾಗಿ ‘ಪ್ರೀತಿಯ ಮಾಧ್ಯಮ ಮಿತ್ರರಿಗೆ ಆತ್ಮೀಯರಿಗೆ ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು, ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಗಿದ್ದೀರಿ. ನವೆಂಬರ್ 29 ರಂದು ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹಾರೈಸಿ ಆಶೀರ್ವದಿಸಿ”

ಎಂದು ತಮ್ಮ ಕೈ ಬರವಣಿಗೆಯಲ್ಲಿ ನಟಿ ಪೂಜೆ ಗಾಂಧಿ(Pooja Gandhi) ಆಮಂತ್ರಣ ಪತ್ರಿಕೆ ಒಂದನ್ನು ಬರೆದು ಹಂಚಿಕೊಂಡಿದ್ದರು, ಬಹಳ ಸರಳವಾಗಿ ರಾಷ್ಟ್ರಕವಿ ಕುವೆಂಪು(Kuvempu) ಅವರ ಮಂತ್ರ ಮಾಂಗಲ್ಯದ ಆಶಯದಲ್ಲಿ ತಮ್ಮ ಬಹುಕಾಲದ ಗೆಳೆಯ ಹಾಗೂ ಕನ್ನಡದ ಗುರುಗಳಾದ ವಿಜಯ ಘೋರ್ಪಡೆ(Vijay Ghorpade)ಯರೊಂದಿಗೆ ಪೂಜಾ ಗಾಂಧಿ(Pooja Gandhi) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಕುರಿತಾದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!