Prabhas Remuneration: ಆದಿಪುರುಷ್ ಸಿನಿಮಾಗೆ ಪ್ರಭಾಸ್ ಪಡೆದುಕೊಂಡ ಸಂಭಾವನೆ ಎಷ್ಟು?

Prabhas remuneration: ಪ್ರಭಾಸ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಆದಿಪುರುಷ ಸಿನಿಮಾ ಈಗಾಗಲೇ ಜೂನ್ 16ರಂದು 6200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿಮಾದ ಕಲೆಕ್ಷನ್ ಕೂಡ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದೆ. ಪ್ರತಿಯೊಬ್ಬರೂ ಕೂಡ ಪ್ರಭಾಸ್(Prabhas remuneration) ಅವರ ಪಾತ್ರದ ಕುರಿತಂತೆ ಕಾತರರಾಗಿದ್ದರು. ಯಾಕೆಂದರೆ ಪ್ರಭಾಸ್ ರವರು ಈ ಸಿನಿಮಾದಲ್ಲಿ ಮಾಡುತ್ತಿರುವುದು ರಾಮನ ಪಾತ್ರದಲ್ಲಿ.

ಆದರೆ ಅವರ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಪ್ರಭಾಸ್ ಅವರ ಪಾತ್ರ ಪೋಷಣೆ ಹಾಗೂ ಪಾತ್ರವನ್ನು ತೆರೆಯ ಮೇಲೆ ತಂದಿರುವ ರೀತಿಯ ಅಸಮಾಧಾನವನ್ನು ವ್ಯಕ್ತಪಡಿಸಿ ಸಿನಿಮಾದ ಕುರಿತಂತೆ ತಮಗೆ ಇರುವಂತಹ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದಿಪುರುಷ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಅನ್ನು ಮೊದಲ ದಿನವೇ ಮಾಡಿದ್ದರು ಪ್ರೇಕ್ಷಕರ ಮೆಚ್ಚುಗೆಯನ್ನು ಮಾತ್ರ ವಿರಳವಾಗಿ ಪಡೆದುಕೊಳ್ಳುತ್ತಿದೆ.

ಇನ್ನು ಪ್ರಭಾಸ್ ನಾಯಕತ್ವದ ಸಿನಿಮಾ ಎಂದರೆ ಅದಕ್ಕೊಂದು ದೊಡ್ಡಮಟ್ಟದ ಹೈಪ್ ಇರುತ್ತದೆ. ಆದರೆ ಆದಿಪುರುಷ ಸಿನಿಮಾದ ಟೀಸರ್ ಬಂದ ದಿನದಿಂದಲೂ ಇಂದಿನವರೆಗೂ ಕೂಡ ಸಿನಿಮಾವನ್ನು ಸಂಪೂರ್ಣವಾಗಿ ಛೀಮಾರಿ ಹಾಕುವವರು ಹೆಚ್ಚಾಗಿದ್ದಾರೆ. ಇನ್ನು 600 ಕೋಟಿ ಬಜೆಟ್ ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರಭಾಸ್ ಪಡೆದುಕೊಂಡಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ.

ಭಾರತ ದೇಶದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟ ಪ್ರಭಾಸ್ ರವರು ಆಗಿದ್ದಾರೆ ಹೀಗಾಗಿ ಅವರು ಭರ್ಜರಿ 125 ಕೋಟಿ ರೂಪಾಯಿ ಹಣವನ್ನು ಈ ಸಿನಿಮಾದ ನಟನೆಗಾಗಿ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಪ್ರಭಾಸ್(Prabhas) ಅವರ ಸಂಭಾವನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇದನ್ನೂ ಓದಿ Adipurush Collection: ಟೀಕೆಗಳ ನಡುವೆ ಕೂಡ ಆದಿಪುರುಷ್ ಮೊದಲು ದಿನ ಗಳಿಸಿದ್ದೆಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Leave A Reply

Your email address will not be published.

error: Content is protected !!