Prasad Bidapa: ತಮ್ಮ ಮಗಳನ್ನು ಅಭಿಷೇಕ ಅಂಬರೀಶ್ ಅವರಿಗೆ ಮದುವೆ ಮಾಡಿಕೊಟ್ಟ ನಂತರ ಮೊದಲ ಬಾರಿಗೆ ಮೌನ ಮುರಿದು ಪ್ರಸಾದ್ ಬಿದ್ದಪ್ಪ ಮಾತಾಡಿದ್ದೇನು?

Prasad Bidapa ಅಂಬರೀಶ್(Ambareesh) ಅವರ ಮಗ ಆಗಿರುವಂತಹ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ(Aviva Bidapa) ಇಬ್ಬರ ಮದುವೆ ಕೂಡ ಈಗಾಗಲೇ ನಡೆದಿದ್ದು ರಿಸೆಪ್ಶನ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ.

ಸಾಕಷ್ಟು ಅಭಿಮಾನಿಗಳ ಕನಸು ಕೂಡ ಈಡೇರಿದ್ದು ಆದರೆ ಪ್ರತಿಯೊಬ್ಬರೂ ಕೂಡ ಈ ಸಂದರ್ಭದಲ್ಲಿ ಅಂಬರೀಶ್ ಅವರು ಇರಬೇಕಾಗಿತ್ತು ಎಂಬುದಾಗಿ ಅಂದುಕೊಂಡಿದ್ದು ಮಾತ್ರ ಸುಳ್ಳಲ್ಲ. ಇನ್ನು ಈ ಸಂದರ್ಭದಲ್ಲಿ ಪ್ರಸಾದ್ ಬಿದ್ದಪ್ಪ(Prasad Bidapa) ಅಂದರೆ ಅವಿವ ಅವರ ತಂದೆ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಅಭಿಷೇಕ್ ಅಂಬರೀಶ್(Abhishek Ambareesh) ರವರು ನಮ್ಮ ಕುಟುಂಬಕ್ಕೆ ಒಳ್ಳೆಯ ಅಳಿಯ ಹಾಗೂ ಅಂಬರೀಶ್ ಅವರ ಜೊತೆಗೆ ಒಳ್ಳೆಯ ಸ್ನೇಹ ಇರುವ ಕಾರಣದಿಂದಾಗಿಯೇ ಕುಟುಂಬ ನಮಗೆ ಮೊದಲಿನಿಂದಲೂ ಕೂಡ ಆತ್ಮೀಯವಾಗಿತ್ತು ಹೀಗಾಗಿ ನಮ್ಮ ಮಗಳನ್ನು ಒಳ್ಳೆಯ ಮನೆಗೆ ಕಳಿಸಿದ್ದೇವೆ ಎಂಬುದು ನಮಗೆ ತಿಳಿದಿದೆ ಎಂಬುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡುತ್ತಾ ಪ್ರಸಾದ್ ಬಿದ್ದಪ್ಪ(Prasad Bidapa) ಮಂಡ್ಯದಲ್ಲಿ ನಡೆಯಲಿರುವಂತಹ ಬೀಗರ ಊಟ ಕಾರ್ಯಕ್ರಮದ ಬಗ್ಗೆ ಕೂಡ ಮಾತನಾಡುತ್ತಾ ಇದರ ಬಗ್ಗೆ ಕೇಳಿದ್ದೆ ಆದರೆ ಅತಿ ಶೀಘ್ರದಲ್ಲಿ ನೋಡುವ ಭಾಗ್ಯ ಕೂಡ ಸಿಗಲಿದೆ ಎಂಬುದಾಗಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!