ನಾನೇನು ಕನ್ನಡ ಮತ್ತು ಕನ್ನಡ ಚಿತ್ರವನ್ನು ಉದ್ಧಾರ ಮಾಡಲಿಕ್ಕೆ ಬಂದವನಲ್ಲಾ ಎಂದು ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ನೀಡಿದ್ದೇಕೆ ಗೊತ್ತಾ

ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಇವರು ಕೆಜಿಎಫ್ ಚಿತ್ರದ ಸೂತ್ರಧಾರ ಕತೆ ಚಿತ್ರಕತೆ ಸಂಭಾಷಣೆ ಮತ್ತು ಕೆಜಿಎಫ್ ಚಿತ್ರದ ಆಧಾರಸ್ತಂಭವೇ ಪ್ರಶಾಂತ್ ನೀಲ್. ಇಂದು ಕೆಜಿಎಫ್ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಲು ಮೂಲ ಪನ್ನಾ ಪ್ರಶಾಂತ್ ಅವರೇ ಇವರು ಇಲ್ಲದೇ ಕೆಜಿಎಫ್ ಚಿತ್ರವೇ ನಡೆಯುತ್ತಿರಲಿಲ್ಲ. ಇವರ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆ ಕೌಶಲ್ಯತೆ ಕೆಜಿಎಫ್ ಚಿತ್ರದ ಯಶಸ್ಸಿ ಗೆ ಬಲವಾದ ಕಾರಣ.

ಕೆಜಿಎಫ್ ಚಿತ್ರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವುದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಮ್ಮೆ ಇಂಥದ್ದೊಂದು ಸಿನಿಮಾ ನಮ್ಮ ಬತ್ತಳಿಕೆಯಿಂದ ಬಂದಿವೆಯೆಂದು ಹೇಳಿಕೊಳ್ಳೋಕೆ ನಮಗೆಲ್ಲಾ ಗರ್ವ ತಂದುಕೊಡುತ್ತೆ. ಖುಷಿಯ ವಿಚಾರ ಏನೆಂದರೆ ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್ ಸಿನಿಮಾಗಳನ್ನು ನಿರ್ದೇಶನ ನಮ್ಮ ಕನ್ನಡಿಗರು ಎನ್ನುವುದು ಆದರೆ ಬೇಸರದ ವಿಷಯವೇನೆಂದರೆ ಈ ಚಿತ್ರದ ನಿರ್ದೇಶಕರಾದ ನಿರ್ದೇಶಕರಾದ ಪ್ರಶಾಂತ್ ಅವರು ಇನ್ಮೇಲೆ ಕನ್ನಡ ಸಿನಿಮಾ ಮಾಡಲ್ಲ ಅನ್ನೋದು..

ಹೌದು ಗೆಳೆಯರೇ.. ಪ್ರಶಾಂತ್ ನೀಲ್ ಅವರು ಇನ್ಮೇಲೆ ಕನ್ನಡ ಸಿನಿಮಾ ಮಾಡೋದು ತುಂಬಾ ವಿರಳ ಯಾಕೆಂದ್ರೆ ಸುಮಾರು ಮುಂದಿನ ಎಂಟು ವರ್ಷಗಳ ಕಾಲ ತೆಲುಗು ಸಿನಿಮಾದಲ್ಲಿ ನಿರ್ದೇಶನ ಮಾಡುವುದಕ್ಕೆ ಪ್ರಶಾಂತ್ ನೀಲ್ ಅವರು ಬುಕ್ ಆಗಿದ್ದಾರೆ. ತೆಲುಗಿನ ಸ್ಟಾರ್ ನಟರಾದ ಜೂನಿಯರ್ ಎನ್ ಟಿ ಆರ್ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಅವರಿಗೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ. ಕಡಿಮೆಯೆಂದರೂ ಎಲ್ಲ ಹೀರೋಗಳಿಗೆ ಸಿನಿಮಾ ಮಾಡಲು ಎಂಟರಿಂದ ಹತ್ತು ವರ್ಷಗಳು ಬೇಕಾಗುತ್ತವೆ.

ಇದಾದ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುವುದು ಖಚಿತವಿಲ್ಲ. ಬಾಲಿವುಡ್ ಮತ್ತು ತಮಿಳು ಹೀರೋಗಳಿಗೆ ಪ್ರಶಾಂತ್ ನೀಲ್ ಅವರು ಚಿತ್ರ ಮಾಡಲು ಮುಂದಾಗುವ ಸಾಧ್ಯತೆಗಳಿವೆ. ಈ ವಿಷಯದ ಬಗ್ಗೆ ನೇರವಾಗಿ ಪ್ರಶಾಂತ್ ನೀಲ್ ಅವರ ಬಳಿಯೇ ಪ್ರಶ್ನೆ ಕೇಳಿದಾಗ ಪ್ರಶಾಂತ್ ನೀಲ್ ಅವರು ಕೊಟ್ಟ ಉತ್ತರ ನಿಜಕ್ಕೂ ಕನ್ನಡಿಗರಿಗೆ ಬೇಸರ ತಂದಿದೆ. ಪ್ರಶಾಂತ್ ನೀಲ್ ಅವರ ಬಳಿ ನೀವು ಇನ್ಮೇಲೆ ಕನ್ನಡ ಸಿನಿಮಾವನ್ನು ಯಾಕೆ ಮಾಡಲ್ಲ ಎಂದು ಕೇಳಿದಾಗ ಪ್ರಶಾಂತ್ ನೀಲ್ ಅವರು ನಾನು ಕನ್ನಡ ಸಿನಿಮಾವನ್ನ ಕನ್ನಡ ಭಾಷೆಯನ್ನಾಗಲೀ ಉದ್ಧಾರ ಮಾಡಲು ಬಂದವನಲ್ಲ ನಾನು ನನ್ನ ಸ್ವಾರ್ಥಕ್ಕಾಗಿ ಸಿನಿಮಾ ಮಾಡಲು ಸಿನಿಮಾರಂಗಕ್ಕೆ ಬಂದಿದ್ದೇನೆ.

ನನಗೆ ಮೊದಲು ನನ್ನ ಕುಟುಂಬ ಮುಖ್ಯ. ನನ್ನ ಕುಟುಂಬವನ್ನು ಚೆನ್ನಾಗಿಡುವುದು ನನ್ನ ಗುರಿಯಾಗಿದೆ ಹೊರತು ಕನ್ನಡ ಚಿತ್ರರಂಗಕ್ಕೆ ನನ್ನಿಂದ ಉಪಕಾರ ಆಗಬೇಕಾಗಿಲ್ಲ. ಕನ್ನಡ ಚಿತ್ರರಂಗವನ್ನು ಬೆಳೆಸುವಷ್ಟು ದೊಡ್ಡ ಮನುಷ್ಯ ನಾನಲ್ಲ. ಆದ್ದರಿಂದ ನಾನು ನನ್ನ ಸ್ವಾರ್ಥದ ದಾರಿಯಲ್ಲಿಯೇ ಸಾಗುತ್ತಾನೆ. ನನಗೆ ತೆಲುಗು ಚಿತ್ರರಂಗದಿಂದ ಸಕ್ಕತ್ ಆಫರ್ ಗಳು ಬಂದಿವೆ. ತೆಲುಗಿನ ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಾನು ಪಾಲ್ಗೊಳ್ಳುವುದರಿಂದ ನನ್ನ ಜೀವನದ ಅಡಿಪಾಯ ಚೆನ್ನಾಗಿರುತ್ತೆ. ಹಾಗೇ ನನ್ನ ವೃತ್ತಿಜೀವನದಲ್ಲಿ ಬೆಳವಣಿಗೆ ಕೂಡ ಚೆನ್ನಾಗಿರುತ್ತೆ ಆದ್ದರಿಂದ ನಾನು ನನ್ನ ವೃತ್ತಿ ಜೀವನವನ್ನು ಉದ್ದಾರ ಮಾಡೋದನ್ನ ನೋಡುತ್ತೇನೆ ಹೊರತು ಕನ್ನಡ ಚಿತ್ರರಂಗವನ್ನು ಉದ್ಧಾರ ಮಾಡಲ್ಲ ಎಂದು ಪ್ರಶಾಂತ್ ನೀಲ್ ಅವರು ನೇರವಾಗಿ ದಿಟ್ಟವಾದ ಉತ್ತರ ನೀಡಿದ್ದಾರೆ.

Leave a Comment

error: Content is protected !!