ಮದುವೆಗೂ ಮುಂಚೆ ಪುನೀತ್ ಅವರ ನಡವಳಿಕೆ ಬೇರೆ ತರನೇ ಇತ್ತು ಎಂದ ನಟಿ ಪ್ರೇಮಾ. ಮುಂಚೆ ಪುನೀತ್ ಹೇಗಿದ್ರು ಗೊತ್ತಾ

ಪುನೀತ್ ಅವರ ವ್ಯಕ್ತಿತ್ವ ನಡವಳಿಕೆ ಹಾಗೂ ಗುಣದ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಅವರಂಥಾ ನಿಷ್ಕಲ್ಮಶ ಮನಸ್ಸುಳ್ಳ ಮನುಷ್ಯ ಭೂಮಿ ಮೇಲೆ ಇರೋದೆ ತುಂಬಾ ವಿರಳ. ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ಪುನೀತ್ ಅವರು ನೋಡುತ್ತಿದ್ದರು. ದಾನ ಧರ್ಮದಲ್ಲಿ ಪುನೀತ್ ಅವರ ಸಾಧನೆ ಅಗಾಧ. ಮದುವೆಯ ನಂತರ ಮತ್ತು ಮದುವೆಗೂ ಮುಂಚೆ ಊರ ನಡುವಳಿಕೆಯಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಅಪ್ಪು ಅವರ ನಡವಳಿಕೆ ಮುಂಚೆ ಹೇಗಿತ್ತು ಎನ್ನುವುದರ ಬಗ್ಗೆ ನಟಿ ಪ್ರೇಮಾ ಅವರು ಶಾಕಿಂಗ್ ವಿಷಯವೊಂದನ್ನು ಹೊರಹಾಕಿದ್ದಾರೆ.

ಪುನೀತ್ ಅವರು ಮದುವೆಗೂ ಮುಂಚೆ ತುಂಬಾ ಡಿಫರೆಂಟ್ ಆಗಿ ಇದ್ದರು. ಮದುವೆಗೂ ಮುಂಚೆ ಇದ್ದ ಪುನೀತ್ ಗೆ ಮದುವೆ ಆದಮೇಲೆ ಬದಲಾದ ಪುನೀತ್ ಗೆ ಅಜಗಜಾಂತರ ವ್ಯತ್ಯಾಸವಿತ್ತು. ಹೌದು ಗೆಳೆಯರೇ ಪುನೀತ್ ಅವರು ಮದುವೆಗೂ ಮುಂಚೆ ಸಿನಿಮಾಗಳಲ್ಲಿ ಕೂಡ ಅಭಿನಯಿಸುತ್ತಿರಲಿಲ್ಲ. ಚಿರಯುವಕನಾಗಿದ್ದ ಅಪ್ಪುವವರು ಗ್ರೈನೇಟ್ ಬಿಸಿನೆಸ್ ಮಾಡುತ್ತಿದ್ದರು ಮತ್ತು ಜೊತೆ ಜೊತೆಗೆ ತಾಯಿಯ ಜೊತೆ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.

ಸಿನಿಮಾ ರಂಗಕ್ಕೆ ಬಂದ ನಂತರ ಪುನೀತ್ ಅವರ ವ್ಯಕ್ತಿತ್ವ ಹಾಗೂ ನಡವಳಿಕೆಗಳನ್ನು ನಾವೆಲ್ಲ ಗಮನಿಸಿದ್ದೇವೆ. ಅವರು ಎಂದಿಗೂ ಸೌಮ್ಯ ಹಾಗೂ ಸಹೃದಯ ವ್ಯಕ್ತಿತ್ವವನ್ನು ತೋರುತ್ತಿದ್ದವರು. ಯಾವಾಗಲೂ ನಗು ಮುಖದೊಂದಿಗೆ ಪ್ರತಿಯೊಬ್ಬರನ್ನು ಸ್ವಾಗತಿಸಿ ಸ್ವಾಗತಿಸುತ್ತಿದ್ದರು. ಎಂದಿಗೂ ಯಾರಿಗೂ ಏಕವಚನದಲ್ಲಿ ಪುನೀತ್ ಅವರು ಮಾತನಾಡಿ ನಾವು ನೋಡಿಲ್ಲ. ಆದರೆ ಇದೇ ಪುನೀತ್ ಅವರು ಮದುವೆಗೂ ಮುಂಚೆ ತದ್ವಿರುದ್ಧವಾಗಿದ್ದರು ಎಂದರೆ ನೀವು ನಂಬಲೇಬೇಕು.

ಸ್ವತಃ ನಟಿ ಪ್ರೇಮಾ ಅವರೇ ಈ ವಿಷಯ ಹೊರ ಹಾಕಿದ್ದಾರೆ. 1994 ರಲ್ಲಿ ಓಂ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯ. ನಟಿ ಪ್ರೇಮಾ ಅವರು ಈ ಚಿತ್ರದ ನಟಿಯಾಗಿದ್ದರು ಮತ್ತು ಶಿವರಾಜ್ ಕುಮಾರ್ ಅವರು ಈ ಚಿತ್ರದ ನಾಯಕನಾಗಿದ್ದು ಹಾಗೆ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ನಿರ್ಮಾಪಕರೂ ಆಗಿದ್ದರು. ಓಂ ಚಿತ್ರದ ನಿರ್ಮಾಪಕರಾದ ಕಾರಣ ಅಪ್ಪು ಅವರು ಆಗಾಗ ಚಿತ್ರದ ಶೂಟಿಂಗ್ ಸೆಟ್ ಗಳಿಗೆ ಭೇಟಿ ನೀಡುತ್ತಿದ್ದರು. ಆಗ ಪುನೀತ್ ಅವರ ನಡವಳಿಕೆ ಹೇಗಿತ್ತು ಎಂಬುದನ್ನು ಪ್ರೇಮಾ ಅವರು ವಿವರಿಸಿದ್ದಾರೆ.

ಓಂ ಚಿತ್ರದ ಶೂಟಿಂಗ್ ಸೆಟ್ ಗಳಿಗೆ ಬಂದ ಪುನೀತ್ ಅವರು ತುಂಬಾ ಬಿಂದಾಸ್ ಆಗಿ ಓಡಾಡಿಕೊಂಡು ಇರುತ್ತಿದ್ದರು. ಪ್ರತಿಯೊಬ್ಬರನ್ನು ಹೋಗಲೇ ಬಾರಲೇ ಅಂದುಕೊಂಡು ಜಾಲಿಯಾಗಿ ಕೇರ್ ಲೆಸ್ ಆಗಿ ಬದುಕುತ್ತಿದ್ದರು. ಇದನ್ನು ಸ್ವತಃ ಪ್ರೇಮ್ ಅವರೇ ಪ್ರತ್ಯಕ್ಷದರ್ಶಿಯಾಗಿ ನೋಡಿದವರು. ಪ್ರೇಮಾ ಅವರು ಆಗಿನ ಸಮಯದಲ್ಲಿ ಪುನೀತ್ ಅವರ ಜೊತೆ ಹೆಚ್ಚಾಗಿ ಮಾತುಕತೆ ನಡೆಸುತ್ತಿರಲಿಲ್ಲ. ಸ್ವತಃ ಪುನೀತ್ ರಾಜ್ ಕುಮಾರ್ ಅವರು ಕೂಡ ಈ ಒಂದು ವಿಚಾರದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನನಗೆ ಮುಂಚೆ ತುಂಬಾ ಕೋಪ ಬರುತ್ತಿತ್ತು. ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನಾನು ಬಿಂದಾಸ್ ಆಗಿ ಜೀವನ ಮಾಡುತ್ತಿದ್ದೆ ಎಂದು ಅಪ್ಪು ಹೇಳಿಕೊಂಡಿದ್ದರು.

Leave a Comment

error: Content is protected !!