ಇದ್ದಕ್ಕಿದ್ದಂತೆ ಕೆಲಸವನ್ನು ಬಿಟ್ಟು ಪುನೀತ್ ರಾಜ್ ಕುಮಾರ್ ನಿವಾಸದಿಂದ ತೆರಳಿದ ಅಪ್ಪು ಬಾಡಿಗಾರ್ಡ್ ಛಲಪತಿ! ಅಶ್ವಿನಿ ಅವರಿಗೆ ಬಾಡಿಗಾರ್ಡ್ ಆಗಿದ್ದ ಛಲಪತಿ ಕೆಲಸ ಬಿಟ್ಟಿದ್ದು ಏಕೆ ಗೊತ್ತಾ

ಪುನೀತ್ ರಾಜ್‌ಕುಮಾರ್ ತೀರಿಕೊಂಡು ಸುಮಾರು 8 ತಿಂಗಳುಗಳು ಕಳೆದಿವೆ ಆದರೂ ಕೂಡ ಪುನೀತ್ ಅವರ ಅಭಿಮಾನಿಗಳು ಇನ್ನೂ ಕೂಡ ಪುನೀತ್ ಅವರ ನೆನಪಿನಲ್ಲೇ ಜಪ ಮಾಡುತ್ತಿದ್ದಾರೆ. ನಾವೆಲ್ಲ ಪುನಿತ್ ಅವರನ್ನು ಹತ್ತಿರದಿಂದ ನೋಡದೇ ಇದ್ದರೂ ಅವರ ಜೊತೆ ಅನ್ಯೋನ್ಯವಾಗಿ ಕಾಲ ಕಳೆಯದೇ ಇದ್ದರೂ ಕೂಡ ಅವರ ಸಾ’ವು ನಮಗೆಲ್ಲ ತುಂಬಾ ನೋವನ್ನು ತಂದಿದೆ. ಇನ್ನು ಪುನೀತ್ ಅವರ ಜೊತೆ ಅನ್ಯೋನ್ಯವಾಗಿ ಕಾಲಕಳೆದ ವ್ಯಕ್ತಿಗಳಿಗೆ ಇನ್ನೆಷ್ಟು ಬೇಸರವಾಗಿರಬಹುದು ಮತ್ತು ಘಾಸಿಯಾಗಿರಬಹುದು ನೀವೇ ಯೋಚನೆ ಮಾಡಿ.

ಸುಮಾರು ಹತ್ತು ವರ್ಷಗಳಿಂದ ಪುನೀತ್ ಅವರಿಗೆ ಚಲಪತಿ ಎಂಬ ಮಾಜಿ ಮಿಲಿಟರಿ ಮ್ಯಾನ್ ಒಬ್ಬ ಬಾಡಿಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಪುನೀತ್ ಅವರ ಅಭಿಮಾನಿಗಳಿಗೆ ಚಲಪತಿಯವರ ಮುಖ ಪರಿಚಯ ಇದ್ದೇ ಇರುತ್ತೆ. ಪುನೀತ್ ಎಲ್ಲೇ ಹೋದರೂ ಸಹ ಪುನೀತ್ ಅವರಿಗೆ ಬಾಡಿಗಾರ್ಡ್ ಆಗಿ ಚಲಪತಿ ಅಪ್ಪು ಗೆ ರಕ್ಷಣೆ ಕೊಡುತ್ತಿದ್ದರು. ಇವರು ಪುನೀತ್ ಅವರ ಬಾಡಿಗಾರ್ಡ್ ಅಷ್ಟೇ ಆಗಿರಲಿಲ್ಲ. ಪುನೀತ್ ಅವರಿಗೆ ಆಪ್ತರು ಕೂಡ ಆಗಿದ್ದರು. ಅಪ್ಪು ಅವರು ಬಾಡಿ ಗಾರ್ಡ್ ಅನ್ನು ಕೂಡ ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದರು.

ಬಾಡಿಗಾರ್ಡ್ ಛಲಪತಿಯವರು ಪುನೀತ್ ಅವರನ್ನು ಪ್ರೀತಿಯಿಂದ ಬಾಸ್ ಎಂದೇ ಕರೆಯುತ್ತಿದ್ದರು. ಛಲಪತಿಯವರು ತಮ್ಮ ಕುಟುಂಬದವರಿಗಿ೦ತ ಹೆಚ್ಚಾಗಿ ಪುನೀತ್ ಅವರ ಜೊತೆ ಕಾಲ ಕಳೆಯುತ್ತಿದ್ದರು. ಪುನೀತ್ ಅವರನ್ನು ಕಳೆದುಕೊಂಡಿರುವುದು ಚಲಪತಿ ಅವರಿಗೆ ಅರಗಿಸಿಕೊಳ್ಳಲಾಗದಂಥಹ ಘಟನೆ. ಪುನೀತ್ ಅವರು ತೀರಿಕೊಂಡ ಮೇಲೆ ಚಲಪತಿಯವರು ಅಶ್ವಿನಿಯವರಿಗೆ ಬಾಡಿಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡರು ಪುನೀತ್ ಅವರ ಮನೆಯಲ್ಲಿಯೇ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು ಆದರೆ ಸಡನ್ನಾಗಿ ಚಲಪತಿಯವರು ಕೆಲಸವನ್ನು ಬಿಟ್ಟು ಪುನೀತ್ ಅವರ ಮನೆಯನ್ನು ತೊರೆದಿದ್ದಾರೆ.

ಇದು ಅಪ್ಪು ಅಭಿಮಾನಿಗಳಿಗೆ ಶಾಕ್ ಆಗಿದೆ. ಅಪ್ಪು ಅವರು ತೀರಿಕೊಂಡು 8 ತಿಂಗಳು ಆದಮೇಲೆ ಚಲಪತಿಯವರು ಏಕೆ ಪುನೀತ್ ಅವರ ಮನೆಯಿಂದ ಹೊರಹೋದರು ಎಂಬ ಪ್ರಶ್ನೆ ಕಾಡುತ್ತಿದೆ. ಚಲಪತಿ ಅವರು ಅಸಮಾಧಾನದಿಂದ ಹೊರಹೋದರಾ! ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಆದರೆ ಇದಕ್ಕೆ ಮೂಲ ಕಾರಣವೇನೆಂದರೆ.. ಛಲಪತಿ ಅವರಿಗೆ ಅಪ್ಪು ಅವರ ನೆನಪಿನಲ್ಲಿ ಕೆಲಸ ಮಾಡೋಕೆ ತುಂಬಾ ಕಷ್ಟವಾಗುತ್ತಿದೆಯ೦ತೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅಪ್ಪುವವರ ನೆನಪುಗಳೇ ಇವರನ್ನು ಕಾಡುತ್ತೆ ಕೆಲಸ ಮಾಡಬೇಕಾದ್ರೆ ಅಪ್ಪುವವರ ಚಿಂತೆಯಲ್ಲಿಯೇ ತಲ್ಲೀನರಾಗುತ್ತಿದ್ದರು. ಆದ್ದರಿಂದ ಚಲಪತಿಯವರು ಈ ಕೆಲಸವನ್ನು ಶ್ರದ್ಧೆಯಿಂದ ಶ್ರಮ ವಹಿಸಿ ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆದಕಾರಣ ಛಲಪತಿಯವರು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಅದೇನೆಂದರೆ ಇನ್ಮೇಲೆ ಯಾವುದೇ ಸ್ಟಾರ್ ನಟರಾಗಲಿ ನಟಿಯರಾಗಲಿ ಅಥವಾ ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳಿಗೆ ಬಾಡಿಗಾರ್ಡ್ ಆಗಿ ಇವರು ಕೆಲಸ ಮಾಡಲ್ಲ. ಬೇರೆ ನಟರ ಜೊತೆ ಕೆಲಸ ಮಾಡಿದರೆ ಅಪ್ಪು ಅವರ ನೆನಪು ಮರೆತುಹೋಗುವ ಸಾಧ್ಯತೆ ಇರುತ್ತೆ ಆದ್ದರಿಂದ ಯಾವುದೇ ಚಿತ್ರರಂಗದ ವ್ಯಕ್ತಿಗಳ ಜತೆ ಕೆಲಸ ಮಾಡಲ್ಲ ಅಂತ ಛಲಪತಿ ಹೇಳಿದ್ದಾರೆ. ಸದ್ಯಕ್ಕೆ ಛಲಪತಿಯವರು ಕೋಲಾರಕ್ಕೆ ಬಂದಿದ್ದಾರೆ. ಛಲಪತಿ ಅವರು ಒಳ್ಳೆಯ ಬಿಸಿನೆಸ್ ಮ್ಯಾನ್ ಹತ್ತಿರ ಬಾಡಿಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರಂತೆ ಅಥವಾ ತಾವೇ ಸ್ವಂತವಾಗಿ ಒಂದು ಬಿಸಿನೆಸ್ ಶುರು ಮಾಡುತ್ತಾರಂತೆ ಇನ್ನು ಒಂದು ತಿಂಗಳಲ್ಲಿ ಮುಂದೆ ಯಾವ ಕೆಲಸ ಮಾಡಬೇಕೆಂದು ಡಿಸೈಡ್ ಮಾಡುತ್ತಾರೆ.

Leave A Reply

Your email address will not be published.

error: Content is protected !!