ವೈಷ್ಣವಿ ಗೌಡ ಮತ್ತು ನಿವೇದಿತಾ ಸೇರ್ಕೋಂಡು ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡಿರೋ ವಿಡಿಯೋ ಹೇಗಿದೆ ನೋಡಿ

ಒಂದು ಕಾಲದಲ್ಲಿ ವೈಷ್ಣವಿ ಗೌಡ ಅವರು ಕನ್ನಡದ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿ ಮಾಡಿದ್ದರು. ವೈಷ್ಣವಿ ಗೌಡ ಅವರ ಅಗ್ನಿಸಾಕ್ಷಿ ಧಾರಾವಾಹಿ ಇಡೀ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು. ಯುವಕರಿಂದ ಹಿಡಿದು ಮುದುಕರ ತನಕ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರು. ವೈಷ್ಣವಿ ಗೌಡ ಅವರು ನಟನೆ ಮಾಡಿರುವ ಒಂದೇ ಒಂದು ಧಾರಾವಾಹಿಯಲ್ಲಿ ಆದರೂ ಕೂಡ ಇವರು ಹತ್ತು ಧಾರಾವಾಹಿಯಲ್ಲಿ ನಟನೆ ಮಾಡಿದಷ್ಟು ಜನಪ್ರಿಯತೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ.

ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ವೈಷ್ಣವಿ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದರು. ಹಾಗೆ ಬಿಗ್ ಬಾಸ್ ಕಾರ್ಯಕ್ರಮದ ಫೈನಲ್ ಹಂತವನ್ನು ಕೂಡಾ ತಲುಪಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ನಂತರ ವೈಷ್ಣವಿ ಗೌಡ ಅವರು ಧಾರಾವಾಹಿಗಳನ್ನು ಕಾಣಿಸಿಕೊಳ್ಳುತ್ತಿಲ್ಲ ಹಾಗೆ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ.ಇದೀಗ ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈಷ್ಣವಿ ಗೌಡ ಅವರು ಯೂಟ್ಯೂಬ್ ನಲ್ಲಿ ಪ್ರತಿ ವಾರಕ್ಕೊಮ್ಮೆ ಒಂದು ವಿಡಿಯೋವನ್ನು ಅಪ್ ಲೋಡ್ ಮಾಡುತ್ತಾರೆ. ಲಕ್ಷಾಂತರ ಅಭಿಮಾನಿಗಳು ವೈಷ್ಣವಿ ಗೌಡ ಅವರ ವಿಡಿಯೋವನ್ನು ನೋಡುತ್ತಾರೆ ಮತ್ತು ವಿಡಿಯೋಗಳ ವೀಕ್ಷಣೆಯಿಂದಲೇ ವೈಷ್ಣವಿ ಗೌಡ ಯೂಟ್ಯೂಬ್ ಕಡೆಯಿಂದ ಹಣ ಸಿಗುತ್ತೆ. ಯೂಟ್ಯೂಬ್ ವೀಡಿಯೋ ಗಳಿಂದ ವೈಷ್ಣವಿ ಗೌಡ ಅವರಿಗೆ ತಿಂಗಳಿಗೆ ಸರಾಸರು ಐವತ್ತು ರಿಂದ ಒಂದು ಲಕ್ಷ ರೂಪಾಯಿಗಳ ಆದಾಯವಿದೆ. ವೈಷ್ಣವಿ ಮತ್ತು ನಿವೇದಿತಾ ಸೇರಿಕೊಂಡು ರಾಗಿ ಮುದ್ದೆ ತಯಾರಿಸುವ ಅಡುಗೆ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ವೈಷ್ಣವಿ ಗೌಡ ಅವರು ನಿವೇದಿತಾ ಅವರ ಮನೆಗೆ ಹೋಗಿ ನಿವೇದಿತಾಗೆ ಅಡುಗೆ ಚಾಲೆಂಜ್ ನೀಡಿದ್ದರು. ರಾಗಿ ಮುದ್ದೆ ತಯಾರಿಸುವ ಚಾಲೆಂಜ್ ನಿವೇದಿತಾಗೆ ಕೊಡಲಾಗಿತ್ತು.ಅಡುಗೆಮನೆಯ ಗಂಧಗಾಳಿ ಗೊತ್ತಿಲ್ಲದ ನಿವೇದಿತಾ ಗೌಡ ಮೊದಲ ಬಾರಿ ರಾಗಿ ಮುದ್ದೆಯನ್ನು ತಯಾರಿಸಿದ್ದಾರೆ. ಅಡುಗೆ ಬಗ್ಗೆ ಎ-ಬಿ-ಸಿ-ಡಿ ಕೂಡ ಗೊತ್ತಿಲ್ಲದ ನಿವೇದಿತಾ ಗೌಡಗೆ ವೈಷ್ಣವಿ ಗೌಡ ಅವರೇ ರಾಗಿಮುದ್ದೆ ಮಾಡೋದು ಹೇಗೆ ಅಂತ ಕಲಿಸಿಕೊಟ್ಟಿದ್ದಾರೆ.

ವೈಷ್ಣವಿ ಗೌಡ ಮತ್ತು ನಿವೇದಿತಾ ಇಬ್ಬರು ಸೇರಿಕೊಂಡು ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡೋಕೆ ಮಾಡಿರುವ ಹರಸಾಹಸ ನೋಡೋಕೆ ತುಂಬಾ ತಮಾಷೆಯಾಗಿದೆ.ನಿವೇದಿತಾ ಗೌಡ ಅವರಿಗೆ ಮ್ಯಾಗಿ ಬಿಸಿಬೇಳೆಬಾತ್ ಪೊಂಗಲ್ ಬಿಟ್ಟರೆ ಬೇರೆ ಯಾವ ಅಡುಗೆ ಕೂಡ ಮಾಡೋಕೆ ಗೊತ್ತಿಲ್ಲ. ಇದೇ ಮೊದಲ ಬಾರಿಗೆ ನಿವೇದಿತಾ ಗೌಡ ಅವರು ಮಾಡಿರುವ ರಾಗಿ ಮುದ್ದೆ ಹೇಗಿತ್ತು ಅನ್ನೋದನ್ನ ನೀವೇ ವಿಡಿಯೋ ದಲ್ಲಿ ನೋಡಿ.. ಪಿಜ್ಜಾ ಬರ್ಗರ್ ತಿನ್ನುವ ನಿವೇದಿತಾ ರಾಗಿಮುದ್ದೆ ಮಾಡಿದ್ದನ್ನು ನೋಡಿದರೆ ನಿಮಗೆಲ್ಲಾ ರಾಗಿಮುದ್ದೆ ಮಾಡೋದು ಹೇಗೆ ಅಂತಾನೆ ಮರೆತುಹೋಗುತ್ತೆ.

https://youtu.be/Wct7IsbvYPQ

Leave a Comment

error: Content is protected !!