ಬಹಳ ದಿನಗಳ ನಂತರ ಹಾಟ್ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಅವರು ಕರ್ನಾಟಕದಲ್ಲಿ ತುಂಬಾ ಫೇಮಸ್ ಇವರನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಾ ಇಲ್ಲವಾದರೆ ಟೀವಿಯಲ್ಲಿ ನ್ಯೂಸ್ ವಾಹಿನಿಗಳಲ್ಲಿ ನೋಡಿರುತ್ತೀರಿ. ಇವರು ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಗಳಸಿದ್ದಾರೋ ಅಷ್ಟೆ ಕಾಂಟ್ರವರ್ಸಿಗಳಿಂದ ಕೂಡ ಜನಪ್ರಿಯತೆಯನ್ನು ಗಳಿಸಿದ್ದಾರೆ. ಕಳೆದ ಹತ್ತು ತಿಂಗಳ ಹಿಂದೆ ರಾಗಿಣಿ ದ್ವಿವೇದಿ ಅವರು ಬಹಳ ಕಷ್ಟದ ದಿನಗಳನ್ನು ಅನುಭವಿಸಿದ್ದಾರೆ. ಇದೀಗ ರಾಗಿಣಿ ಅವರು ಸುಧಾರಿಸಿಕೊಂಡು ಹೊಸ ಜೀವನವನ್ನು ಶುರುಮಾಡಿದ್ದಾರೆ.

ರಾಗಿಣಿ ದ್ವಿವೇದಿ ಅವರು ಮೂಲತಃ ಪಂಜಾಬಿನ ಕುಟುಂಬದವಳು. ಹುಟ್ಟಿ ಬೆಳೆದಿದ್ದು ಮಧ್ಯಪ್ರದೇಶದಲ್ಲಿ ಇವರ ತಂದೆ ರಾಕೇಶ್ ದ್ವಿವೇದಿ ಅವರು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ರಾಗಿಣಿ ದ್ವಿವೇದಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ತದನಂತರ ಹಲವಾರು ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಹಿಂದಿ ಮೂಲದವಳಾದರೂ ರಾಗಿಣಿ ಅವರು ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ಯಶಸ್ಸನ್ನು ಕಂಡಿದ್ದಾರೆ.

2009 ರಲ್ಲಿ ರಾಗಿಣಿ ಅವರಿಗೆ ವೀರ ಮದಕರಿ ಎಂಬ ಚಿತ್ರದಲ್ಲಿ ಸುದೀಪ್ ಅವರ ಜೊತೆ ನಟನೆ ಮಾಡುವ ಅವಕಾಶ ಸಿಗುತ್ತದೆ. ಅಲ್ಲಿಂದ ಅವರ ವೃತ್ತಿಜೀವನ ಪ್ರಾರಂಭವಾಗುತ್ತೆ. 2009 ರಿಂದ 2019 ರ  ವರೆಗೂ ಒಂದರ ನಂತರ ಇನ್ನೊಂದು ಸಿನಿಮಾಗಳಲ್ಲಿ ಅಭಿನಯ ಮಾಡೋದ್ರಲ್ಲಿ ರಾಗಿಣಿಯವರು ಬ್ಯುಸಿಯಾಗಿದ್ರು. 2020ರಲ್ಲಿ ರಾಗಿಣಿ ಸ್ಯಾಂಡಲ್ ವುಟ್ ಡ್ರ ಗ್ಸ್ ಕೇಸ್ ನಲ್ಲಿ ಸಿಲುಕಿ 140 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.

2020 ರಿಂದ 2021 ರ ತನಕ ರಾಗಿಣಿ ಅವರು ಅನುಭವಿಸಲಾಗದಂಥ ದಿನಗಳನ್ನು ಕಳೆದಿದ್ದಾರೆ.ತುಂಬಾ ಕಷ್ಟದ ಮತ್ತು ಅವಮಾನ ಪಡುವಂತಹ ಕ್ಷಣಗಳ ಇವರು ಅನುಭವಿಸಿದ್ದಾರೆ. ಹಲವಾರು ಟೀಕೆ ಅಪಮಾನಗಳನ್ನು ಸಹಿಸಿಕೊಂಡು ಇದೀಗ ರಾಗಿಣಿ ಅವರು ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹೊಸದಾದ ಜೀವನವನ್ನು ಪ್ರಾರಂಭಿಸಿ ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸೋಕೆ ಶುರುಮಾಡಿದ್ದಾರೆ. ಹಾಗೆ ಕೊ’ರೋನಾ ಸಮಯದಲ್ಲಿ ಹಲವಾರು ಜನರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಕೂಡ ಮಾಡಿ ದೊಡ್ಡತನವನ್ನು ಮೆರೆದಿದ್ದಾರೆ.

ಇನ್ನೊಂದು ವಿಶೇಷತೆಯೇನೆಂದರೆ ರಾಗಿಣಿ ದ್ವಿವೇದಿ ಅವರು ಹದಿನೈದು ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರಂತೆ. ಸಿನಿಮಾಗೋಸ್ಕರ ಕಷ್ಟಪಟ್ಟು ಪರಿಶ್ರಮದಿಂದ ದೇಹವನ್ನು ಫಿಟ್ ಆಗಿ ಮಾಡಿಕೊಂಡಿದ್ದಾರೆ. ಹಾಗೆ ಹೊಸದಾಗಿ ರಾಗಿಣಿಯವರು ಫೋಟೋ ಶೂಟ್ ಕೂಡ ಮಾಡಿಸಿದ್ದರು. ಕಪ್ಪು ಸೀರೆಯಲ್ಲಿ ಮಿಂಚುತ್ತಾ ರಾಗಿಣಿ ದ್ವಿವೇದಿ ಅವರು ಪೋಸ್ ಕೊಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತೂಕವನ್ನು ಕಡಿಮೆ ಮಾಡಿಕೊಂಡು ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಅಂಥ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಅವರ ಹೊಸ ಲುಕ್ ನೋಡಿ ಪಡ್ಡೆ ಹುಡುಗರಂತೂ ಫಿದಾ ಆಗಿರೋದು ಪಕ್ಕಾ.

Leave a Comment

error: Content is protected !!