ಬಾಲಿವುಡ್ ಮಾ’ದಕ ನಟಿ ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು. ಯಾರು ಗೊತ್ತಾ ಹೇಗೆ ಶುರು ಆಯ್ತು ಇವರಿಬ್ಬರ ಲವ್ ಸ್ಟೋರಿ

ಸಾಮಾನ್ಯವಾಗಿ ರಾಖಿ ಸಾವಂತ್ ಗೊತ್ತಿಲ್ಲ ಅನ್ನುವವರೇ ಇಲ್ಲ. ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾ, ರಿಯಾಲಿಟಿ ಶೋ ಗಳನ್ನು ಮಾಡ್ತಾ, ಡ್ಯಾನ್ಸರ್ ಆಗಿಯೂ ಕೆಲಸ ಮಾಡುತ್ತಿರುವ ರಾಖಿ ಸಾಕಷ್ಟು ವಿವಿಧಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ ಮಿಸ್. ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ರಾಖಿ ಸಾವಂತ್ ಕಳೆದ ವರ್ಷ ಹಿಂದಿ ಬಿಗ್ ಬಾಸ್ ಸೀಸನ್ 15ರಲ್ಲಿ ಭಾಗವಹಿಸಿದ್ದರು. ಇಲ್ಲಿ ಅವರ ಮಾಜಿ ಪರಿ ರಿತೇಶ್ ಕೂಡ ಇದ್ದರು ಎನ್ನುವುದು ವಿಶೇಷ. ಇನ್ನು ಬಿಗ್ ಬಾಸ್ ಗೆ ವಿಶೇಷವಾಗಿ ಸೈಡರ್ ವೂಮೆನ್ ಆಗಿ ಎಂಟ್ರಿ ಕೊಟ್ಟು ಬಿಗ್ ಬಾಸ್ ಮನೆಯಲಿ ಇರುವಷ್ಟು ದಿನವೂ ಸಕ್ಕತ್ ಮಜವಾಗಿದ್ರು. ಅವರ ಆಟವನ್ನು ನೋಡುವುದೇ ಮನೋರಂಜನೆಯಾಗಿತ್ತು. ಇದಾದ ಬಳಿಕ ಅವರ ಪತಿ ರಿತೇಶ್ ಹೇಳದೇ ಕೇಳದೇ ರಾತ್ರೋ ರಾತ್ರಿ ರಾಖಿಯನ್ನ ಬಿಟ್ಟು ಪರಾರಿಯಾದರಂತೆ. ಹೀಗಂತ ಮಾಧ್ಯಮದ ಮುಂದೆ ತಾವಾಗಿಯೇ ಹೇಳಿಕೊಂಡು ಕಣ್ಣೀರಿಟ್ಟಿದ್ದರು ರಾಖಿ ಸಾವಂತ್.

ಇನ್ನು ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ರಾಖಿ ಸಾವಂತ್ ಕೆಲವು ವೆಬ್ ಸೀರಿಸ್, ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದದ್ರು. ಈಗ ಇದಕ್ಕಿಂತ ಬ್ಯುಸಿ ಲೈಫ್ ನ್ನು ಲೀಡ್ ಮಾಡ್ತಿದ್ದಾರೆ ರಾಖಿ. ಹೌದು ರಾಖಿ ಸದ್ಯ ಲವ್ ನಲ್ಲಿ ಬಿದ್ದಾರೆ. ಮತ್ತೆ ಲವ್ವಾ ಅಂತ ಉದ್ಘಾರ ತೆಗಿಬೇಡಿ. ಹೌದು ಈ ಬಾರಿ ತಾನು ರಿಲೇಶನ್ ಶಿಫ್ ನಲ್ಲಿ ಸೀರಿಯಸ್ ಆಗಿದ್ದೇನೆ. ಇವನೇ ನನ್ನ ಬಾಯ್ ಫ್ರೆಂಡ್, ನನ್ನ ಸ್ಪೀಟ್ ಹಾರ್ಟ್, ನನ್ನ ಲೈಫ್ ಅಂತೆಲ್ಲಾ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

ರಾಖಿ ಸಾವಂತ್ ಪರಿಚಯಿಸಿದ ಹುಡುಗ ಮೈಸೂರು ಮೂಲಕ ಆದಿಲ್ ಖಾನ್ ದುರನಿ. ದೊಡ್ಡ ಕಾರ್ ಬ್ಯುಸನೆಸ್ ಹೊಂದಿರುವ ಈತ ಸದ್ಯ ಮುಂಬೈನಲ್ಲಿ ನೆಲೆಸಿದ್ದಾನೆ. ರಾಖಿ ಸಾವಂತ್ ಮೀಡಿಯಾ ಮುಂದೆ ತಮ್ಮ ಬಾಯ್ ಫ್ರೆಂಡ್ ಅನ್ನು ಪರಿಚಯಿಸಿದ್ದಾರೆ. ಆದಿಲ್ ರಾಖಿಗಿಂತಲೂ ಆರು ವರ್ಷ ಸಣ್ಣವನು ಅಂತ ವರದಿಯಾಗಿದೆ. ಆದರೆ ಲವ್ ಮಾಡೋರಿಗೆ ವಯಸ್ಸೆಲ್ಲಾ ವಿಷಯವೇ ಅಲ್ಲಾ ಬಿಡಿ! ಇನ್ನು ರಾಖಿ ತಾನು ಆದಿಲ್ ಮುದ್ದಾಡುವ ಫೊಟೋವನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಾಗೆಯೇ ರಾಖಿ ಸಾವಂತ್ ಬಗ್ಗೆ ಮಾತನಾಡುವ ಆದಿಲ್ ಅವರು ತುಂಬಾ ಸರಳ ವ್ಯಕ್ತಿತ್ವದ ಹುಡುಗಿ, ಡೌನ್ ಟು ಅರ್ಥ್ ಅಂತ ಹೊಗಳಿದ್ದಾರೆ. ಜೊತೆಗೆ ತನ್ನ ಪ್ರೇಯಸಿಗೆ 50 ಲಕ್ಷ ಮೌಲ್ಯದ ದುಬಾರಿ ಬಿಎಂಡಬ್ಲ್ಯೂ ಕಾರನ್ನೂ ಗಿಫ್ಟ್ ಮಾಡಿದ್ದಾನೆ. ರಾಖಿ ರಿತೇಶ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದ ಸಂದರ್ಭದಲ್ಲಿ ಆದಿಲ್ ಅವಳನ್ನು ಡಿಪ್ರೆಶನ್ ನಿಂದ ಹೊರಬರಲು ಸಹಾಯ ಮಾಡಿದ್ದನಂತೆ. ಅಲ್ಲಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದೀಗ ಪ್ರೀತಿ ಮಾಡುವುದರಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಿರುವ ರಾಖಿ, ತನ್ನ ಹೆಚ್ಚಿನ ಸಮಯವನ್ನು ಬಾಯ್ ಫ್ರೆಂಡ್ ಗೇ ಕೊಡುತ್ತಿದ್ದಾರೆ ಎನ್ನುವುದರಲ್ಲಿ ನೋ ಡೌಟ್. ಹಾಗಾಗಿ ಅತಿಯಾಗಿ ಪ್ರೀತಿಸುವ ಈ ಜೋಡಿ ಶಾಶ್ವತವಾಗಿ ಜೊತೆಗಿರಲಿ ಎನ್ನುವುದೇ ಎಲ್ಲರ ಹಾರೈಕೆ!

Leave a Comment

error: Content is protected !!