ಹುಟ್ಟೂರಿನ ಅತ್ಯಂತ ಶಕ್ತಿಶಾಲಿ ದೇವಿ ಮಾರಿಗುಡಿಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾದ ರಕ್ಷಿತ್ ಶೆಟ್ಟಿ

ಸ್ನೇಹಿತರೆ ಕನ್ನಡದ ಸಿಂಪಲ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರು ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ ಆಚಾರ್ ಜೊತೆಗೆ ಸಪ್ತಸಾಗರದಾಚೆಯಲ್ಲೊ ಸಿನಿಮಾ ಸರಣಿಗಳ ನಂತರ ಮತ್ತೆ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿರಲಿಲ್ಲ. ಈ ಕಾರಣದಿಂದ ಅಭಿಮಾನಿಗಳು ರಕ್ಷಿತ್ ಶೆಟ್ಟಿ(Rakshith Shetty) ಅವರನ್ನು ಹಲವೆಡೆ ಮುಂದಿನ ಸಿನಿಮಾ ಯಾವುದೆಂಬ ಪ್ರಶ್ನೆಯನ್ನು ಮೇಲಿಂದ ಮೇಲೆ ಕೇಳುತ್ತಲೇ ಇದ್ದರು.

ಇದಕ್ಕೆಲ್ಲ ಉತ್ತರ ನೀಡುವ ಸಲುವಾಗಿ ಕಳೆದೆರಡು ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ಅವರು ತಮ್ಮ ಹುಟ್ಟುವರಾದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅತ್ಯಂತ ಶಕ್ತಿಶಾಲಿ ದೇವಸ್ಥಾನವನ್ನು ತೆರಳಿ ಮುಹೂರ್ತದ ಕಾರ್ಯಕ್ರಮವನ್ನು ನೆರವೇರಿಸಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ಹೌದು ಗೆಳೆಯರೇ ತಮ್ಮ ಸಿನಿಮಾ ತಂಡ ಹಾಗೂ ಸ್ನೇಹಿತರ ಜೊತೆಗೆ ರಕ್ಷಿತ್ ಶೆಟ್ಟಿ ಕಳೆದೆರಡು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ

ಶ್ರೀ ಮಾರಿಯಮ್ಮನ ದರ್ಶನ ಪಡೆಯುವುದರ ಜೊತೆಗೆ ದೇವಿಗೆ ವಿಶೇಷವಾದ ಹರಕೆ ಸಲ್ಲಿಸಿದ್ದಾರೆ. ಕಲಾವಿದರಿಗೆ ದೇವರ ಮೇಲಿರುವಂತಹ ದೈವ ಭಕ್ತಿಯನ್ನು ನಮ್ಮ ಕನ್ನಡ ಸಿನಿಮಾ ರಂಗ ಹೊರತುಪಡಿಸಿದರೆ ಬೇರೆ ಯಾವ ಇಂಡಸ್ಟ್ರಿಯಲ್ಲಿಯೂ ಕಾಣಲಾಗುವುದಿಲ್ಲ. ನಟ ನಟಿಯರು ತಮ್ಮ ಬಿಡುವಿನ ಸಮಯದಲ್ಲಿ ವಿಶೇಷವಾದ ಪುಣ್ಯಕ್ಷೇತ್ರಗಳಿಗೆ ತೆರಳಿ ಧಾರ್ಮಿಕ ಕ್ಷಣವನ್ನು ಕಳೆಯುತ್ತಿರುತ್ತಾರೆ. ಅದರಂತೆ ರಕ್ಷಿತ್ ಶೆಟ್ಟಿ(Rakshith Shetty) ಅವರು ತಮ್ಮ ಹುಟ್ಟೂರಿನಲ್ಲಿ ಇರುವಂತಹ ಮಾರಿ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಹೌದು ಸ್ನೇಹಿತರೆ ಈ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಬಹಳ ಅದ್ದೂರಿಯದಂತಹ ಜಾತ್ರಾ ಮಹೋತ್ಸವವನ್ನು ಮಾಡುತ್ತಾರೆ. ತಾಯಿ ಮಾರಿಯಮ್ಮನ ಮೇಲೆ ಅಪಾರವಾದ ನಂಬಿಕೆಯನ್ನು ಹೊಂದಿರುವಂತಹ ರಕ್ಷಿತ್ ಶೆಟ್ಟಿ, ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನಕ್ಕೆ ಹೋಗಿ ತಮ್ಮ ರಿಚರ್ಡ್ ಆಂಟೋನಿ(Richard Antony) ಚಿತ್ರದ ಮುಹೂರ್ತದ ಕೆಲಸವನ್ನು ನೆರವೇರಿಸಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೆಲಸ ಬಹುತೇಕ ಪೂರ್ಣಗೊಂಡಿದ್ದು,

ಸಿನಿಮಾದ ಶೂಟಿಂಗ್ ಏಪ್ರಿಲ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿರುವಂತಹ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇನ್ನು ಮೂಲವೊಂದರ ಪ್ರಕಾರ ಕೆಜಿಫ್ ಕಾಂತರಾ ಸಿನಿಮಾಗಳಂತೆ ರಿಚರ್ಡ್ ಆಂಟೋನಿ ಚಿತ್ರ ಕೂಡ ಹೊಂಬಾಳೆ ಫಿಲಂಸ್ ಬ್ಯಾನರ್(Hombale films)ನ ಅಡಿಯಲ್ಲಿ ತಯಾರಾಗಲಿದ್ದು ಸಿನಿಮಾದ ಮೇಲಿನ ನಿರೀಕ್ಷೆ ದಿನೇ ದಿನೇ ದುಪ್ಪಟ್ಟಾಗುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!