Rashmika Mandanna: ಜೀವನದ ಅತ್ಯಂತ ಪ್ರಮುಖ ರಹಸ್ಯವನ್ನು ಬಿಚ್ಚಿಟ್ಟು ಆ ವ್ಯಕ್ತಿಯ ಬಗ್ಗೆ ಹೇಳಿದ್ದೇನು ರಶ್ಮಿಕಾ?

Rashmika Mandanna ನಟಿ ರಶ್ಮಿಕ ಮಂದಣ್ಣ(Rashmika Mandanna) ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ತೆಲುಗು ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿಯೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಸಿನಿಮಾರಂಗದಲ್ಲಿ ಯಾವುದೇ ಸಪೋರ್ಟ್ ಇಲ್ಲದಿದ್ದರೂ ಹಾಗೂ ಯಾವುದು ದೊಡ್ಡ ಮಟ್ಟದ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದಿದ್ದರೂ ಕೂಡ ರಶ್ಮಿಕ ಮಂದಣ್ಣ ಇಷ್ಟೊಂದು ಕಡಿಮೆ ಸಮಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಾಧಿಸಿರುವ ಸಾಧನೆ ನಿಜಕ್ಕೂ ಕೂಡ ಶ್ಲಾಘನೀಯವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟಿಯರಲ್ಲಿ ಅವರು ಕೂಡ ಕಾಣಿಸಿಕೊಳ್ಳುತ್ತಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟಿವ್ ಆಗಿರುವಂತಹ ರಶ್ಮಿಕ ಮಂದಣ್ಣ ಆಗಾಗ ತಮ್ಮ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಸೆಶನ್ ಅನ್ನು ಮಾಡುತ್ತಲೇ ಇರುತ್ತಾರೆ ಆ ಸಂದರ್ಭದಲ್ಲಿ ಅಭಿಮಾನಿ ಒಬ್ಬರು ನಿಮ್ಮ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ಯಾರು ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಜೀವನದ ಅತ್ಯಂತ ಇಷ್ಟವಾದ ಹಾಗೂ ಪ್ರಮುಖ ವ್ಯಕ್ತಿ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ.

ರಶ್ಮಿಕ ಮಂದಣ್ಣ ಅವರ ಪ್ರಕಾರ ಅವರ ಜೀವನದಲ್ಲಿ ಅತ್ಯಂತ ಪ್ರಮುಖ ವಾದ ವ್ಯಕ್ತಿ ಅವರ ಅಭಿಮಾನಿಗಳಾಗಿದ್ದಾರೆ ಅವರ ಅಭಿಮಾನಿಗಳಿಂದಲೇ ಇಂದು ಅವರು ಈ ಸ್ಥಾನದಲ್ಲಿದ್ದಾರೆ ಎಂಬುದಾಗಿ ಹಂಚಿಕೊಂಡಿದ್ದಾರೆ. ರಶ್ಮಿಕ ಮಂದಣ್ಣ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!