Rashmika Mandanna: ಕನ್ನಡ ಸಿನಿಮಾ ಮಾಡಿದ್ರೆ ರಶ್ಮಿಕ ಮಂದಣ್ಣ ಎಷ್ಟು ಸಂಭಾವನೆ ಪಡೀತಾರೆ ಗೊತ್ತಾ?

Rashmika Mandanna ರಶ್ಮಿಕ ಮಂದಣ್ಣ ಕೊಡಗಿನ ಕುಮಾರಿಯಾಗಿದ್ದರೂ ಕೂಡ ಸದ್ಯಕ್ಕೆ ಪರಭಾಷೆಗಳ ಚಿತ್ರ ರಂಗಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಿಂದ ಪರಿಚಿತರಾಗಿ ಗೀತ ಗೋವಿಂದಂ(Geetha Govindam) ಸಿನಿಮಾದ ಮೂಲಕ ತೆಲುಗಿನಿಂದ ಜನಪ್ರಿಯರಾಗುತ್ತಾರೆ.

ಒಂದು ಲೆಕ್ಕದಲ್ಲಿ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ಇಂದು ಬಹುಬಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಜವಾಗಲು ಕಾರಣ ಆಗಿರುವುದು ತೆಲುಗು ಚಿತ್ರರಂಗ ಹಾಗೂ ತೆಲುಗು ಚಿತ್ರರಂಗದ ಸಿನಿಮಾಗಳು ಎಂದರೆ ತಪ್ಪಾಗಲಾರದು. ಹೇಗಿದ್ದರೂ ಕೂಡ ಅವರನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದ್ದು ಕನ್ನಡ ಚಿತ್ರರಂಗ ಹಾಗೂ ಕನ್ನಡ ಭಾಷೆ ಎನ್ನುವ ಚಿಕ್ಕ ಅರಿವು ಕೂಡ ಇಲ್ಲದವರಂತೆ ಅವರು ಆಡುತ್ತಿರುವುದೇ ಅಭಿಮಾನಿಗಳಿಗೆ ಕೆಂಗಣ್ಣಿಗೆ ಗುರಿಯಾಗಿರುವುದು.

ಇನ್ನು ಒಟ್ಟಾರೆ ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುವುದಕ್ಕೆ ಮೂರು ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಕಡಿಮೆ ಸಂಭಾವನೆ ಪಡೆಯುತ್ತಾರೆ ಆದರೆ ಕೆಲವೊಮ್ಮೆ ಅದು ಕನ್ನಡದ ಸ್ಟಾರ್ ನಟರಿಗಿಂತಲೂ ಕೂಡ ಹೆಚ್ಚಿಗೆ ಎಂದು ಹೇಳಬಹುದು.

ಹೌದು ಮಿತ್ರರೇ ರಶ್ಮಿಕ ಮಂದಣ್ಣ(Rashmika Mandanna) ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವುದಕ್ಕೆ ಭರ್ಜರಿ ಒಂದು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಆದರೆ ಒಬ್ಬ ನಾಯಕನಟಿಗೆ ಎಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ನೀಡುವುದಕ್ಕೆ ಕನ್ನಡದ ನಿರ್ಮಾಪಕರು ಸಿದ್ಧವಾಗಿಲ್ಲ ಇದೇ ಕಾರಣಕ್ಕಾಗಿ ಅವರು ಕನ್ನಡ ಚಿತ್ರರಂಗದಲ್ಲಿ ಅಷ್ಟೊಂದು ಅವಕಾಶಗಳನ್ನು ಪಡೆಯುತ್ತಿಲ್ಲ.

Leave A Reply

Your email address will not be published.

error: Content is protected !!