Rashmika Mandanna: ರಶ್ಮಿಕ ಮಂದಣ್ಣ ಜೀವನದಲ್ಲಿ ನಡೆಯಿತು ಆಗಬಾರದ ಘಟನೆ.

Rashmika Mandanna ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಬೇಡಿಕೆ ಹಾಗೂ ಸಂಭಾವನೆಯನ್ನು ಕೂಡ ದ್ವಿಗುಣ ವೇಗದಲ್ಲಿ ಹೆಚ್ಚಿಸಿಕೊಂಡಂತಹ ನಟಿ ಯಾರಾದರೂ ಇದ್ದಾರೆ ಎಂದರೆ ಅದು ನಮ್ಮ ಕೊಡಗಿನ ಕುವರಿ ಆಗಿರುವಂತಹ ರಶ್ಮಿಕ ಮಂದಣ್ಣ(Rashmika Mandanna) ಮಾತ್ರ ಎಂದು ಹೇಳಬಹುದು.

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಕೂಡ ದೊಡ್ಡ ಮಟ್ಟದಲ್ಲಿ ಆರಂಭಿಕ ಗೆಲುವನ್ನು ಸಾಧಿಸುವ ಮೂಲಕ ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಷ್ಟೊಂದು ಕಡಿಮೆ ಸಮಯದಲ್ಲಿ ಭಾರತೀಯ ಚಿತ್ರರಂಗದ ಸಾಕಷ್ಟು ಸೂಪರ್ ಸ್ಟಾರ್ಗಳ ಜೊತೆಗೆ ನಟಿಸಿದ್ದಾರೆ.

ಇನ್ನು ಇತ್ತೀಚಿಗೆ ಅಷ್ಟೇ ತಿಳಿದು ಬಂದಿರುವ ಸುದ್ದಿಯ ಪ್ರಕಾರ ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಮ್ಯಾನೇಜರ್ ಒಬ್ಬರಿಂದ ಮೋಸಕ್ಕೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅಭಿಮಾನಿಗಳು ಕೂಡ ಈ ವಿಚಾರದ ಕುರಿತಂತೆ ಚಿಂತಾಕ್ರಾಂತರಾಗಿದ್ದಾರೆ. ಹಾಗಿದ್ದರೆ ಇದರ ನಿಜವಾದ ವಿಚಾರ ಏನು ಎಂಬುದನ್ನು ತಿಳಿಯೋಣ ಬನ್ನಿ‌.

ಹೌದು ಮಿತ್ರರೇ, ಜಾಹೀರಾತು ಮೂಲಕ ರಶ್ಮಿಕ ಮಂದಣ್ಣ ಅವರಿಗೆ ಬರಬೇಕಾಗಿದೆ 80 ಲಕ್ಷ ರೂಪಾಯಿ ಹಣವನ್ನು ಅವರಿಗೆ ತಿಳಿಯದಂತೆ ಮ್ಯಾನೇಜರ್ ತಮ್ಮ ಅಕೌಂಟಿಗೆ ಹಾಕಿಸಿಕೊಂಡಿದ್ದು ಇದು ತಿಳಿದುಬಂದ ನಂತರ ರಶ್ಮಿಕ ಮಂದಣ್ಣ ಅವರನ್ನು ಕೆಲಸದಿಂದ ತೆಗೆದುಹಾಕಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ಪ್ರಕರಣದ ಕುರಿತಂತೆ ಅಧಿಕೃತವಾಗಿ ನಟಿ ಎಲ್ಲೂ ಕೂಡ ಪ್ರತಿಕ್ರಿಯೆ ನೀಡಿಲ್ಲ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.

error: Content is protected !!