ಬಾಲಿವುಡ್ ನಟಿ ಟಾಬು ಇನ್ನೂ ಮದುವೇ ಆಗದೇ ಇರೋದಕ್ಕೆ ಅಜಯ್ ದೇವಗನ್ ನೇ ಕಾರಣವಂತೆ ಯಾಕೆ ಗೊತ್ತಾ!

ಬಾಲಿವುಡ್ ನಲ್ಲಿಈವರೆಗೆ ಸಾಕಷ್ಟು ನಟಿಯರು ಬಂದುಹೋಗಿದ್ದಾರೆ. ಹೆಲವರ ಹೆಸರು ಇಗಲೂ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು 4-5ದಶಕಗಳಿಂದ ಬಾಲಿವುಡ್ ನ್ನು ಆಳುತ್ತಲೆ ಬಂದಿದ್ದಾರೆ. ಅಂಥ ನಟಿಯರಲ್ಲಿ ಟಬು ಕೂಡ ಒಬ್ಬರು. ನಟಿ ಟಬುವನ್ನು ಇಷ್ಟಪಡದೇ ಇರುವವರೇ ಇಲ್ಲ. ಆವರು ಈಗಲೂ ತೆರೆಯ ಮೇಲೆ ಬಂದರೆ ಪಡ್ದೆ ಹುಡುಗರು ಮುಗಿಬಿದ್ದು ಅವರ ಸಿನಿಮಾವನ್ನು ನೋಡುತ್ತಾರೆ.

ಹೌದು. ಟಬು ವಯಸ್ಸು ಈಗ 51. ಆದರೆ ಅವರು ಅಷ್ಟು ವಯಸ್ಸಾಗಿದೆ ಎನ್ನೋದನ್ನುಅವರ ನಟನೆಯಲ್ಲಿ ಯಾರೂ ಹೇಳಲು ಸಾಧ್ಯವೇ ಇಲ್ಲ. ಇಂದಿಗೂ ಯಾವ ಹಿರೋಯಿನ್ ಗೂ ಕಮ್ಮಿಯಿಲ್ಲದ ರೀತಿಯಲ್ಲಿ ಅದ್ಭುತವಾಗಿ ನಟಿಸುತ್ತಾರೆ ಟಬು. ಇಂಥ ಅಭಿನೇತ್ರಿ ನಮ್ಮ ನಡುವೆ ಇರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಯಾಕಂದ್ರೆ ಅವರಿಗೆ ಯಾವುದೇ ಪಾತ್ರವನ್ನ ಕೊಡಲಿ, ಎಲ್ಲವನ್ನೂ ಅತ್ಯಂತ ನೈಜವಾಗಿ ನಟಿಸುವುದರ ಮೂಲಕ ಆ ಪಾತ್ರಗಲಿಗೆ ಜೀವ ತುಂಬುತ್ತಾರೆ.

ನಟಿ ಟಬು ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಅಜಯ್ ದೇವಗನ್ ಅವರ ಜೊತೆಯಲ್ಲಿಯೇ. ಇವರಿಬ್ಬರ ಜೋಡಿ ತೆರೆ ಮೇಲೆ ಬಂದರೆ ಸಿಳ್ಳೆಗಳ ಸುರಿಮಳೆ. ಇಂದಿಗೂ ಇವರಿಬ್ಬರ ಜೋಡಿಯನ್ನು ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿದ್ದ ಈ ಜೋಡಿ ನಿಜಜೀವನದಲ್ಲಿಯೂ ಒಂದಾದರೆ ಎಷ್ಟು ಅದ್ಭುತವಾಗಿರುತ್ತೆ ಅಂತ ಹಲವರು ಅಂದುಕೊಂಡಿದ್ದೂ ಇದೆ. ಆದರೆ ಟಬು ಹಾಗೂ ಅಜಯ್ ದೇವಗನ್ ಉತ್ತಮ ಸ್ನೇಹಿತರು!

ನಟಿ ಟಬು ಸಿನಿಮಾರಂಗಕ್ಕೆ ಕಾಲಿಟ್ಟಾಗಿನಿಂದ ಸುಪರ್ ಹಿಟ್ ಚಿತ್ರಗಳನ್ನೇ ನೀಡಿದ್ದಾರೆ. ಅಜಯ್ ಹಾಗೂ ಟಬು ಜೊತೆಯಾಗಿ 1994ರಲ್ಲಿ ನಟಿಸಿದ್ದ ’ವಿಜಯ್ ಪಥ್’ ಸಿನಿಮಾವನ್ನಂತೂ ಇಂದಿಗೂ ಯಾರೂ ಮರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, 1995 ’ಹಕೀಕತ್’, 1999ರಲ್ಲಿ ’ತಕ್ಷಕ್’ 2015ರಲ್ಲಿ ’ದೃಶ್ಯಂ’ ಸಿನಿಮಾ ಹಾಗೂ ’ಗೋಲ್ ಮಾಲ್ ರಿಟರ್ನ್ಸ್’ 2017ರಲ್ಲಿ ತೆರೆಕಂಡ ’ದೇ ದೇ ಪ್ಯಾರ್ ದೇ’ ಈ ಎಲ್ಲಾ ಚಿತ್ರಗಳ ಮೂಲಕ ಪರ್ಫೆಕ್ಟ್ ಜೋಡಿ ಎನಿಸಿಕೊಂಡಿದ್ದ ಅಜಯ್ ಹಾಗೂ ಟಬು ’ದೃಶ್ಯಂ -೨’ ನಲ್ಲಿಯೂ ಜೊತೆಯಾಗಿ ನಟಿಸಲಿದ್ದಾರೆ.

ಟಬು ಅವರು ಇತ್ತೀಚಿನ ’ಬೂಲ್ ಭುಲಯ್ಯ-೨’ ಸಿನಿಮಾದಲ್ಲಿಯೂ ಅದ್ಭುತ ನಟನೆಯನ್ನು ಮಾಡಿದ್ದಾರೆ. ಇನ್ನು ಸೌತ್ ಸಿನಿಮಾಗಳಲ್ಲಿಯೂ ಟಬು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ ಇಷ್ಟು ಸುಂದರವಾಗಿರುವ ಟಬು ಮಾತ್ರ ಇನ್ನೂ ಮದುವೆಯಾಗಿಲ್ಲ, ವಯಸ್ಸು 51 ಆದ್ರೂ ಇನ್ನೂ ಯಾರನ್ನೂ ಮೆಚ್ಚಿಕೊಂಡಿಲ್ಲ ಯಾಕೆ ಎಂಬ ಪ್ರಶ್ನೆಗೆ ಟಬು, ಇದಕ್ಕೆಲ್ಲಾ ಕಾರಣ ನಟ ಅಜಯ್ ಎನ್ನುತ್ತಾರೆ!

ಹೌದು, ಇತ್ತೀಚಿನ ಸಂದರ್ಶನವೊಂದರಲ್ಲಿ ಟಬು ಈ ಬಗ್ಗೆ ಮಾತನಾಡಿದ್ದಾರೆ. ಟಬು ಸಿನಿಮಾ ಕ್ಷೇತ್ರಕ್ಕೆ ಬಂದಾಗ ಉತ್ತಮ ಸ್ನೇಹ ಹುಟ್ಟಿಕೊಂಡಿದ್ದು ಅಜಯ್ ದೇವಗನ್ ಅವರ ಜೊತೆ. ಟಬು ಅವರ ಸಹೋದರ ಸಂಬಂಧಿ ಹಾಗೂ ಅಜಯ್ ಸಿನಿಮಾ ಸೆಟ್ ನಲ್ಲಿ ಟಬು ಮೇಲೆ ಸದಾ ಒಂದು ಕಣ್ಣಿಟ್ಟಿರುತ್ತಿದ್ದರಂತೆ. ಯಾರಾದರೂ ಟಬು ಜೊತೆ ಮಾತನಾಡಿದ್ರೂ ಅವರನ್ನ ಹೊಡೆಯಲು ಹೋಗುತ್ತಿದ್ದರಂತೆ. ಹಾಗಾಗಿ ’ಆ ಸಮಯದಲ್ಲಿ ನನ್ನ ಜೊತೆ ಯಾವ ಹುಡುಗರೂ ಬಂದು ಮಾತನಾಡಲು ಹೆದರುತ್ತಿದ್ದರು. ಇಂದು ನಾನು ಸಿಂಗಲ್ ಆಗಿರೋದಕ್ಕೆ ಅಜಯ್ ಕಾರಣ. ನಾನು ಹೀಗೆ ಹೇಳಿದ್ರೆ ಅವನು ಇಂದು ಕ್ಷಮೆ ಕೇಳಬಹುದು’ ಅಂತ ನಗುತ್ತಾರೆ ಟಬು.

ಟಬು ಯಾಕೆ ಮದುವೆಯಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಆದರೆ ಅಜಯ್ ಹಾಗೂ ಟಬು ಅವರ ಸ್ನೇಹಕ್ಕೆ ಪ್ರೀತಿಯ ಬಣ್ಣ ಕಟ್ಟಿದ್ರೂ ಇವರಿಬ್ಬರೂ ಈಗಲೂ ಉತ್ತಮ ಸ್ನೇಹಿತರು ಅಂತ ಸಾಬೀತು ಮಾಡಿದ್ದಾರೆ. ಈಗಲೂ ಜೊತೆಯಾಗಿ ಸಿನಿಮಾಗಳಲ್ಲಿ ನಟಿಸಿ ರಂಜಿಸುತ್ತಾರೆ..

Leave A Reply

Your email address will not be published.

error: Content is protected !!