ಕೆಜಿಎಫ್-2 ಆದ್ಮೇಲೆ ಯಶ್ ಅವರ ಮುಂದಿನ ಸಿನಿಮಾ ಯಾವುದು ಗೊತ್ತಾ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ ಯಶ್

ಕೆಜಿಎಫ್ ಚಿತ್ರದ ನಂತರ ಯಶ್ ಅವರ ಜೀವನದ ದಿಕ್ಕೇ ಬದಲಾಗಿದೆ. ನಟ ಯಶ್ ಅವರು ಇದೀಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಅವರು ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿದ್ದಾರೆ. ಮುಂಚೆಯೆಲ್ಲಾ ಯಶ್ ಮಾಡುವ ಸಿನಿಮಾಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇನ್ಮುಂದೆ ಹಾಗಲ್ಲ ಅವರಿಗೆ ಎಲ್ಲಾ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಯಶ್ ಅವರ ಸಿನಿಮಾಗಳು ಬೇರೆ ರಾಜ್ಯಗಳಲ್ಲೂ ಕೂಡ ತೆರೆ ಕಾಣುತ್ತವೆ.

ಅಲ್ಲು ಅರ್ಜುನ್ ಪ್ರಭಾಸ್ ಅವರ ಹಾಗೆ ದಕ್ಷಿಣ ಭಾರತದ ಮತ್ತೊಬ್ಬ ಪಾನ್ ಇಂಡಿಯನ್ ಸ್ಟಾರ್ ನಟ ಹೊರಹೊಮ್ಮಿದ್ದಾರೆ. ಕೆಜಿಎಫ್-2 ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ನಂತರ ಎಸ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಯಶ್ ಅವರು ಬ್ಯಾಕ್ ಟು ಬ್ಯಾಕ್ ಕೆಜಿಎಫ್ ನಂತಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಯಶ್ ಅವರ ಮುಂದಿನ ಚಿತ್ರಗಳಿಗೆ ನಿರೀಕ್ಷೆ ಹೆಚ್ಚಿದೆ. ಎಸ್ ಅವರಿಗೆ ಇದು ದೊಡ್ಡ ತಲೆಬಿಸಿಯಾಗಿದೆ.

ಅಭಿಮಾನಿಗಳಂತೂ ಯಶ್ ಅವರ ಮುಂದಿನ ಚಿತ್ರ ಕೆಜಿಎಫ್ ಕ್ಕಿಂತ ದೊಡ್ಡ ಮಟ್ಟದಲ್ಲಿ ಇರಬೇಕು ಎಂದು ಅಪೇಕ್ಷೆ ಪಡುತ್ತಿದ್ದಾರೆ. ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಿವೆ. ರಾಮಾಯಣ ಕಥೆ ಆಧಾರಿತ ಚಿತ್ರವೊಂದರಲ್ಲಿ ಯಶ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಶಿವಾಜಿ ಜೀವನಾಧಾರಿತ ಚಿತ್ರದಲ್ಲಿ ಯಶ್ ಅವರು ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೆಲ್ಲಾ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇವುಗಳು ಯಶ್ ಅವರ ಮುಂದಿನ ಚಿತ್ರಗಳು ಅಲ್ಲ ಎಂಬುದು ಅಧಿಕೃತವಾಗಿ ತಿಳಿದು ಬಂದಿದೆ.

ಅಧಿಕೃತವಾಗಿ ತಿಳಿದು ಬಂದ ವಿಷಯವೇನೆಂದರೆ ಯಶ್ ಅವರು ಕೆಜಿಎಫ್ ಚಿತ್ರದ ನಂತರ ಮಫ್ತಿ ಚಿತ್ರದ ನಿರ್ದೇಶಕರಾದ ನರ್ತನ್ ಅವರ ಜೊತೆ ಹೊಸದಾದ ಸಿನಿಮಾವೊಂದನ್ನು ಮಾಡಲಿದ್ದಾರೆ. ಈ ಚಿತ್ರ ಕೆಜಿಎಫ್ ಚಿತ್ರದ ಹಾಗೆ ಔಟ್ ಅಂಡ್ ಔಟ್ ಆ್ಯಕ್ಷನ್ ಚಿತ್ರವಾಗಿರುತ್ತದೆ. ವಿಶೇಷವೇನೆಂದರೆ ಈ ಚಿತ್ರಕ್ಕೆ ಯಶ್ ಅವರೇ ಬಂಡವಾಳ ಹಾಕಲಿದ್ದಾರಂತೆ. ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಲಿದ್ದಾರೆ. ಕಳೆದ ಸುಮಾರು ಎರಡು ವರ್ಷಗಳಿಂದ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಯಶ್ ಅವರ ಮುಂದಿನ ಸಿನಿಮಾದ ಹೆಸರು ಜಟಸ್ಯ ಎಂದು ಹೇಳಲಾಗುತ್ತಿದೆ.

ಸದ್ಯದ ಮಟ್ಟಿಗೆ ಯಶ್ ಅವರ ಈ ಹೊಸ ಚಿತ್ರ(ಜಟಸ್ಯ) ಸ್ಕ್ರಿಪ್ಟ್ ವರ್ಕ್ ಹಂತದಲ್ಲಿದ್ದು,ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಸಿನಿಮಾದ ಅಧಿಕೃತ ಘೋಷಣೆಯಾಗಲಿದೆ. ಕೇವಲ ನಾಲ್ಕು ಜನರು ಮಾತ್ರ ಈ ಸಿನಿಮಾದಲ್ಲಿ ಸದ್ಯದ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಕಥೆಯನ್ನು ಗೌಪ್ಯವಾಗಿಟ್ಟಿದ್ದಾರೆ. ಪ್ಯಾನ್ ಇಂಡಿಯನ್ ಲೆವಲ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಹೇಗೆ ಮೂಡಿಬರುತ್ತೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಒಟ್ಟಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗೆ ಇಡೀ ದೇಶವೇ ಕಾದು ಕುಳಿತಿದೆ.

Leave a Comment

error: Content is protected !!