ಸ್ಯಾಂಡಲ್ವುಡ್ ನಟರು ತಮ್ಮ ಅಮ್ಮಂದಿರೊಂದಿಗೆ! ಇಲ್ಲಿವೆ ನೋಡಿ ಸುಂದರ ಫೋಟೋಗಳು

Sandalwood Actress Mothers: ನನ್ನೆಲ್ಲ ನೋವಿಗೆ ನಗುವಾಗಿ ನನ್ನೆಲ್ಲಾ ಗೆಲುವಿಗೆ ಗುರುವಾಗಿ ನನ್ನೆಲ್ಲ ಭಾವಕ್ಕೆ ಮಗುವಾಗಿ ಸ್ಪಂದಿಸುವವಳೇ ‘ಅಮ್ಮ’ ಒಂದು ಮಗುವಿನ ಬೆಳವಣಿಗೆಗೆ ಹಾಗೂ ಅದರ ಯಶಸ್ವಿಗೆ ತಾಯಿಯಾದವಳು ಮಹತ್ತರ ಪಾತ್ರವನ್ನು ವಹಿಸುತ್ತಾಳೆ. ಚಿಕ್ಕಂದಿನಿಂದಲೂ ಆಕೆ ಯಾವ ಪಾಠವನ್ನು ಕಲಿಸುತ್ತಾ ಬರುತ್ತಾಳೋ ಅದನ್ನೇ ಮಗು ಅಳವಡಿಸಿಕೊಂಡು ಬೆಳೆಯುವುದು ಪ್ರಕೃತಿಯ ಸಹಜ ಪ್ರಕ್ರಿಯೆ. ಹೀಗೆ ನಮ್ಮ ಸ್ಯಾಂಡಲ್ ವುಡ್ಗೆ ಚಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್, ಪವರ್ ಸ್ಟಾರ್ ನಂತಹ ಸ್ಟಾರ್ಗಳ ಕೊಡುಗೆಯನ್ನು ನೀಡಿರುವ ತಾಯಂದಿರ ಕುರಿತು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ತಾಯಿ: ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ತಮ್ಮ ನಟನ ಕರಿಯರ್ರನ್ನು ಪ್ರಾರಂಭ ಮಾಡಿದಂತಹ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟ ಅದಕ್ಕೆ ಅವರ ತಾಯಿ ಪುಷ್ಪ ಅವರೇ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದಂತಹ ಯಶ್ ಅವರಿಗೆ ಚಿಕ್ಕಂದಿನಿಂದಲೂ ತಾನೋರ್ವ ಸ್ಟಾರ್ ನಟನಾಗಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಂದೆಯ ವಿರೋಧ ವ್ಯಕ್ತವಾದರೂ ಕೂಡ ತಾಯಿಯ ಪ್ರೋತ್ಸಾಹ ಇದ್ದೇ ಇರುತ್ತದೆ.

ಡಾಲಿ ಧನಂಜಯ್ ಮತ್ತವರ ತಾಯಿ: ಎಲ್ಲಾ ವೇದಿಕೆಯಗಳ ಮೇಲು ತಮ್ಮ ತಾಯಿಯ ಬಗ್ಗೆ ಮುತ್ತಿನಂತ ಮಾತನ್ನು ಆಡದೆ ತಮ್ಮ ಸಂದರ್ಶನವನ್ನು ಮುಗಿಸದ ಡಾಲಿ ಧನಂಜಯ್ ಅವರ ತಾಯಿಯ ಹೆಸರು ಸಾವಿತ್ರಮ್ಮ(Savithramma).

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಪಾರ್ವತಮ್ಮ: ನಮ್ಮ ಕನ್ನಡ ಸಿನಿಮಾ ರಂಗಕ್ಕೆ ತಮ್ಮ ನಿರ್ಮಾಣದ ಮೂಲಕ ಸಾಕಷ್ಟು ಕೊಡುಗೆಯನ್ನು ನೀಡುವಂತಹ ಪಾರ್ವತಮ್ಮ ರಾಜಕುಮಾರ್ ಅವರು ರಾಘಣ್ಣ ಶಿವಣ್ಣ ಮತ್ತು ಪುನೀತ್ ರಾಜಕುಮಾರ್ ಎಂಬ ಮೂರು ಮುತ್ತುಗಳನ್ನು ನೀಡಿದ್ದಾರೆ. ಅಪ್ಪು ಜೊತೆಗೆ ಪಾರ್ವತಮ್ಮ(Parvathamma) ಕ್ಲಿಕಿಸಿಕೊಂಡಿರುವ ಸುಂದರ ಫೋಟೋಗಳನ್ನು ಈ ಪುಟದಲ್ಲಿ ಕಾಣಬಹುದಾಗಿದೆ.

ನಟ ರಕ್ಷಿತ್ ಶೆಟ್ಟಿ ಮತ್ತು ಅವರ ತಾಯಿಯ ಸುಂದರ ಫೋಟೋ: ಮಾಧ್ಯಮದ ಮುಂದೆ ಬಂದಾಗೆಲ್ಲ ತಮ್ಮ ಮಗನನ್ನು ಹಾಡಿ ಹೊಗಳುವಂತಹ ರಕ್ಷಿತ್ ಶೆಟ್ಟಿ ಅವರ ತಾಯಿ ರಂಜಿನಿ ಶೆಟ್ಟಿ, ಮಗನ ಪ್ರತಿ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಾ, ಬೆನ್ನೆಲುಬಾಗಿ ನಿಂತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ತಾಯಿ: ಹಿರಿಯ ನಟ ತೂಗುದೀಪ ಶ್ರೀನಿವಾಸ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೀನಾ ತೂಗುದೀಪ್(Meena Thoogudeepa) ಅವರಿಗೆ ದರ್ಶನ್(Darshan) ಮತ್ತು ದಿನಕರ್ ಎಂಬ ಇಬ್ಬರು ಮಕ್ಕಳಿದ್ದು, ಮಕ್ಕಳ ಯಶಸ್ಸಿನ ಸಂತೋಷದಲ್ಲಿ ತಮ್ಮ ಸಂತಸವನ್ನು ಕಾಣುತ್ತಿದ್ದಾರೆ.

ಕಿಚ್ಚ ಸುದೀಪ್ ಮತ್ತು ಅವರ ಅಮ್ಮ: ಎಂ ಸಂಜೀವಿ ಎಂಬ ಉದ್ಯಮಿಯೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಸರೋಜಾ(Saroja) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರ ತಾಯಿಯಾಗಿದ್ದು, ಮಗನ ಪ್ರತಿ ಏಳಿಗೆಗೆ ಪ್ರೋತ್ಸಾಹಿಸುತ್ತಾ, ತಮ್ಮ ಪತಿಯ ಬ್ಯುಸಿನೆಸ್ಗೂ ಸಪೋರ್ಟ್ ಮಾಡುತ್ತಾ ಮಾದರಿಯ ಗೃಹಿಣಿಯಾಗಿದ್ದಾರೆ. ಇದನ್ನೂ ಓದಿ ಕೊನೆಗೂ ಅಧಿಕೃತವಾಗಿ ರಿವಿಲ್ ಆಯ್ತು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಲಿಸ್ಟ್!

Leave A Reply

Your email address will not be published.

error: Content is protected !!