
ವೇದಿಕೆಯ ಮೇಲೆ ರಾಘಣ್ಣ ಹೇಳಿದ ಮಾತುಗಳನ್ನು ಕೇಳಿ ಗಳಗಳನೆ ಕಣ್ಣೀರು ಹಾಕಿದ ಅಶ್ವಿನಿ ಮತ್ತು ಶಿವಣ್ಣ
ಇದೇ ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ದೇಶದಾದ್ಯಂತ ಬಿಡುಗಡೆ ಹೊಂದಲಿದೆ. ಕೊನೆಯ ಬಾರಿ ಪುನೀತ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವ ಸಮಯ ಬಂದಿದೆ. ಅಭಿಮಾನಿಗಳಂತೂ ಮಾರ್ಚ್ 17 ರಂದು ಹಬ್ಬ ಮಾಡೋಕೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ಜೇಮ್ಸ್ ಚಿತ್ರದ ಬಿಡುಗಡೆಗೂ ಮುಂಚೆಯೇ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಶಿವಣ್ಣ, ರಾಘಣ್ಣ ಹಾಗೆ ರಾಜ್ ಕುಟುಂಬದ ಎಲ್ಲಾ ಸದಸ್ಯರು ಅತಿಥಿಯಾಗಿ ಪಾಲ್ಗೊಂಡಿದ್ದರು. ಪುನೀತ್ ಅವರ ಕೊನೆಯ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸಲು ಪ್ರತಿಯೊಬ್ಬರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಒಂದು ಕಾರ್ಯಕ್ರಮ ತುಂಬಾ ಭಾವನಾತ್ಮಕವಾಗಿತ್ತು.
ಕಾರ್ಯಕ್ರಮ ಪ್ರಾರಂಭವಾದ ದಿನದಿಂದಲೂ ಸಹ ಪತ್ನಿ ಅಶ್ವಿನಿ ಮತ್ತು ಶಿವಣ್ಣ ಅವರ ಕಣ್ಣಲ್ಲಿ ನೀರು ತುಂಬಿತ್ತು. ಕಾರ್ಯಕ್ರಮದಲ್ಲಿ ಪುನೀತ್ ಅವರ ವಿಡಿಯೋ ಪ್ಲೇ ಮಾಡಿದಾಗಲೆಲ್ಲ ಅಶ್ವಿನಿ ಮತ್ತು ಶಿವಣ್ಣ ಅವರ ಮನಸ್ಸು ಚುರ್ ಅನ್ನುತ್ತಿತ್ತು. ಅದರಲ್ಲೂ ರಾಘಣ್ಣ ಅವರನ್ನು ವೇದಿಕೆ ಮೇಲೆ ಕರೆದಾಗ ರಾಗಣ್ಣ ಆಡಿದ ಭಾವನಾತ್ಮಕ ಮಾತುಗಳನ್ನು ಕೇಳಿ ಇಬ್ಬರೂ ಕೂಡ ಕೂತಿದ್ದ ಜಾಗದಲ್ಲೆ ಗಳಗಳನೆ ಅತ್ತುಬಿಟ್ಟರು. ಶಿವಣ್ಣ ಅವರ ಕಣ್ಣೀರನ್ನು ಕಂಡು ಪಕ್ಕದಲ್ಲಿ ಕುಳಿತಿದ್ದವರೆಲ್ಲ ಸಮಾಧಾನ ಮಾಡಲು ಓಡಿಬಂದರು.
ರಾಘಣ್ಣ ಅವರು ವೇದಿಕೆ ಮೇಲೆ ಒಬ್ಬರೇ ನಿಂತುಕೊಂಡು ಮೈಕ್ ಹಿಡಿದು ನಾನು ಇನ್ಮೇಲೆ ಬದುಕಲ್ಲ, ನಾನು ನನ್ನ ತಮ್ಮ ಇರುವ ಜಾಗಕ್ಕೆ ಹೋಗೇ ಹೋಗುತ್ತೇನೆ. ನಾನು ಮತ್ತು ಅಪ್ಪು ಒಂದಲ್ಲ ಒಂದು ದಿನ ಭೇಟಿಯಾಗುತ್ತೇವೆ…. ಎಂಬ ಭಾವನಾತ್ಮಕ ಮಾತನ್ನು ರಾಘಣ್ಣ ಅವರು ಸ್ಟೇಜ್ ಮೇಲೆ ನಿಂತುಕೊಂಡು ಹೇಳಿದ್ದಾರೆ. ಈಗಾಗಲೇ ಒಬ್ಬ ತಮ್ಮನನ್ನು ಕಳೆದುಕೊಂಡು ದುಃಖದಲ್ಲಿರುವ ಶಿವಣ್ಣಗೆ ಕೂಡ ಈ ರೀತಿಯ ಎಮೋಷನಲ್ ಮಾತುಗಳನ್ನು ಹೇಳಿದ್ದು ತುಂಬಾ ನೋ ವಾಗುತ್ತೆ. ದುಃಖವನ್ನು ತಡೆಯಲಾಗದೆ ಶಿವಣ್ಣ ಗಳಗಳನೆ ಅಳುತ್ತಾರೆ.
ಹಾಗೆಯೇ ಶಿವಣ್ಣ ವೇದಿಕೆಯ ಮೇಲೆ ಓಡಿಹೋಗಿ ರಾಗಣ್ಣ ಅವರಂಥ ಅಳುವುದನ್ನು ಮುಂದುವರೆಸಿದ್ದಾರೆ. ಹಾಗೆ ವೇದಿಕೆ ಮೇಲೆ ಬಂದ ಶಿವಣ್ಣ ಮೈಕ್ ಹಿಡಿದು ರಾಘಣ್ಣ ಬಳಿ ಈ ರೀತಿಯ ಮಾತುಗಳನ್ನು ದಯವಿಟ್ಟು ಹೇಳಬೇಡಿ ಎಂದು ಹೇಳಿದರು. ಅಣ್ಣನಾಗಿ ಈಗಾಗಲೇ ತಮ್ಮನನ್ನು ಕಳೆದುಕೊಂಡಿದ್ದೇನೆ ಇನ್ನೊಬ್ಬ ತಮ್ಮ ಇಂದ ಇನ್ನು ಇಂತಹ ಮಾತುಗಳನ್ನು ಕೇಳಲು ನನಗೆ ಶಕ್ತಿಯಿಲ್ಲ. ರಾಗಣ್ಣ ಹೇಳಿದ ಮಾತು ನನಗೆ ತುಂಬಾ ನೋವಾಗಿದೆ ಎಂದು ಶಿವಣ್ಣ ಹೇಳಿದರು ಈ ಮಾತುಗಳನ್ನು ಕೇಳಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಕಣ್ಣಲ್ಲಿ ಕೂಡ ಕಂಬನಿ ಹರಿಯಿತು.