ಸಾ’ವಿನ ಅಂಚಿನಿಂದ ಪಾರಾದ ಯುವ ನಟಿ; ಆಕೆಯ ಜೀವ ಉಳಿಸಿದ್ದೇ ನೆಟ್ಟಿಗರು. ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

ಸಾಮಾಜಿಕ ಜಾಲತಾಣಗಳು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು, ನಾವು ಹೇಗೆ ಅದನ್ನು ಬಳಸಿಕೊಳ್ಳುತ್ತೇವೋ ಹಾಗೆ. ಸಾಮಾಜಿಕ ಜಾಲತಾಣವನ್ನು ನೀವು ಒಳ್ಳೆಯ ಮಾಹಿತಿಗಳನ್ನು ಪಡೆಯಲು, ಸ್ನೇಹಿತರನ್ನು ಗಳಿಸಿಕೊಳ್ಳಲು ಬಳಸಬಹುದು. ಅಲ್ಲದೇ ತಮ್ಮ ಅನುಭವಗಳನ್ನು, ಭಾವನೆಗಳನ್ನು ಇತರರೊಂದಿಗೆ ಶೇರ್ ಮಾಡಲು ಕೂಡ ಜನ ಸೋಶಿಯಲ್ ಮೀಡಿಯಾದ ಮೊರೆ ಹೋಗುತ್ತಾರೆ. ಆದರೆ ವಿಪರ್ಯಾಸವೆಂದರೆ, ಕೆಲವರು ತಾವು ಜೀವಕಳೆದುಕೊಳ್ಳುವುದರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ.

ಹೌದು, ಯುವ ನಟಿಯೊಬ್ಬಳು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಡೆತ್ ನೋಟ್ ಬರೆದು ಜೀವ ತೆಗೆದುಕೊಳ್ಳಲು ಮುಂದಾಗಿದ್ದಳು. ಸ್ನೇಹಿತರೆ, ಕೊಲ್ಕತ್ತಾ ಮಾಂಡಲಿಂಗ್ ಕ್ಷೇತ್ರದಲ್ಲಿವನ್ನೇ ತಲ್ಲಣ ಗೊಳಿಸಿದ್ದ, ಮಾಡೆಲ್ ಗಳ ಸಾವಿನ ಬಗ್ಗೆ ನೀವೂ ಕೇಳಿರಬಹುದು. ಒಬ್ಬರಾದ ಮೇಲೆ ಒಬ್ಬರಂತೆ ಮಾಡೆಲ್ ಗಳು ಬೇರೆ ಬೇರೆ ಕಾರಣಗಳಿಗೆ ಪ್ರಾಣ ಕಳೆದುಕೊಂಡರು. ಅವರುಗಳಲ್ಲಿ ಮಾಡೆಲ್ ಹಾಗೂ ನಟಿಯಾಗಿದ್ದ ಪಲ್ಲವಿ ದೆ, ರೂಪದರ್ಶಿ ಬಿದಿಶಾ ಡಿ. ಮಂಜುಮ್ದಾರ್, ಖ್ಯಾತ ಮಾಡೆಲ್ ಮಂಜುಶಾ ನಿಯೋಗಿ, ಇನೊಬ್ಬ ರೂಪದರ್ಶಿ ಸರಸ್ವತಿ ದಾಸ್ ಕಳೆದ ಒಂದೆರಡು ತಿಂಗಳುಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂದವರು.

ಈ ಮಾಡೆಲ್ ಗಳು ಜೀವ ಕಳೆದುಕೊಂಡಿದ್ದನ್ನು ನೋಡಿ ಮಾಡೆಲಿಂಗ್ ಜಗತ್ತೇ ತಲ್ಲಣಗೊಂಡಿತ್ತು. ಈ ಸುದ್ದಿ ಇನ್ನೂ ತಣ್ಣಗಾಗಿಲ್ಲ ಆಗಲೆ ಇನೊಬ್ಬ ಕಿರುತೆರೆಯ ನಟಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಳು. ಆಕೆಯ ರೈ ದೆಬ್ಲಿನಾ ದೇ. ಬಂಗಾಲಿ ಕಿರುತೆರೆ ಹಾಗೂ ವೆಬ್ ಸೀರೀಸ್ ನಲ್ಲಿ ನಟಿಸಿ ಉದಯೋನ್ಮುಖ ನಟಿ ಎನಿಸಿಕೊಂಡವರು ರೈ ದೆಬ್ಲಿನಾ.

ನಟಿ ರೈ ದೆಬ್ಲಿನಾ, ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೆ ಪಾಲಕರು ಹಾಗೂ ಕುಟುಂಬದವರೇ ಕಾರಣ ಅಂತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದ ನೆತ್ತಿಗರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಟಿ ರೈ ದಬ್ಲಿನಾ ಅಷ್ಟೊತ್ತಿಗಾಗಲೇ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದರು. ಇದೀಗ ಪೊಲೀಸರ ಸಮಯ ಪ್ರಜ್ಞೆಯಿಂದ ರೈ ಜೀವಪಾಯದಿಂದ ಪಾರಾಗಿದ್ದಾರೆ. ವಯಕ್ತಿಕ ಕಾರಣಕ್ಕೆ ತನ್ನ ಜೀವವನ್ನೇ ಕಳೆದುಕೊಳ್ಳುವ ದುಡುಕಿನ ನಿರ್ಧಾರ ಮಾಡಿದ್ದ ನಟಿ ರೈ ದೇಬ್ಲಿನ ಅವರನ್ನು ರಕ್ಷಿಸುವಲ್ಲಿ ನೆಟ್ಟಿಗರೂ ಕೂಡ ಕಾರಣರಾಗಿದ್ದಾರೆ.

Leave a Comment

error: Content is protected !!