ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ಐದು ರೂಪಾಯಿಯ ಮನೀ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ ಕಾರಣ ಏನು ಗೊತ್ತಾ

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ಕೆಟ್ಟ ಚಿತ್ರಗಳಿಂದ ಕಂಗೆಟ್ಟಿ ಹೋಗಿದೆ. ಬಾಲಿವುಡ್ ಚಿತ್ರರಂಗದ ಕಲಾವಿದರು ಒಳ್ಳೆಯ ಸಿನಿಮಾಗಳ ಕಡೆ ಗಮನ ಹರಿಸದೆ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್ ಹೀರೋಗಳ ಈ ಒಂದು ಬೆಳವಣಿಗೆ ನೋಡಿ ಜನರೆಲ್ಲಾ ಛೀಮಾರಿ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂಬ ಸಣ್ಣ ಸೌಜನ್ಯತೆ ಕೂಡ ಈ ಬಾಲಿವುಡ್ ಹೀರೋ ಗಳಿಗಿಲ್ಲ.

ಬಾಲಿವುಡ್ ಬಿಗ್ ಹೀರೋಗಳು ಎನಿಸಿಕೊಂಡಿರುವ ಅಜಯ್ ದೇವ್ಗನ್ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ರಂತಹ ನಟರು ಕಮರ್ಷಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಲ್ ಗುಟ್ಕಾ ಪಾನ್ ಮಸಾಲಾ ಜಾಹೀರಾತಿನಲ್ಲಿ ಈ ಮೂವರು ನಟರು ಕೂಡ ಭಾಗವಹಿಸಿದ್ದಾರೆ ಯುವಕರಿಗೆ ಗುಟ್ಕಾ ತಿನ್ನುವಂತೆ ಪ್ರಚೋದನೆ ನೀಡಿದ್ದಾರೆ. ಇವರು ಈ ರೀತಿ ಕೆಲಸ ಮಾಡಿದ್ದಕ್ಕೆ ಇವರನ್ನು ಬಹಿಷ್ಕಾರ ಹಾಕುತ್ತಿದ್ದಾರೆ ಜನಸಾಮಾನ್ಯರೆಲ್ಲ ಇವರಿಗೆ ಮುಖಮೂತಿ ನೋಡದೆ ಸಾಮಾಜಿಕ ಜಾಲತಾಣದಲ್ಲಿ ಜಾಡಿಸುತ್ತಿದ್ದಾರೆ.

ಜನ ಎಷ್ಟೇ ಓದಿದರೂ ಕೂಡ ಇವರು ತಮಗೆ ಹಣವೇ ಮುಖ್ಯ ಎಂಬಂತೆ ಕ್ಯಾರೇ ಅನ್ನುತ್ತಿಲ್ಲ.ಇದೀಗ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ವಿದ್ಯಾರ್ಥಿನಿಯೊಬ್ಬಳು ಛೀಮಾರಿ ಹಾಕಿ ವಿಭಿನ್ನ ರೀತಿಯಲ್ಲಿ ಪಾಠ ಕಲಿಸಿದ್ದಾಳೆ. ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯೊಬ್ಬಳು ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಹೆಸರಿನಲ್ಲಿ 5 ರೂಪಾಯಿಯ ಮನಿ ಆರ್ಡರ್ ಮಾಡಿ ಸಂದೇಶವನ್ನು ಕಳಿಸಿದ್ದಾಳೆ. 5 ರೂಪಾಯಿಯ ಮನಿ ಆರ್ಡರನ್ನು ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರ ಮನೆ ವಿಳಾಸಕ್ಕೆ ಕಳುಹಿಸಿದ್ದಾಳೆ.

ಮೇ 24 ಬ್ರದರ್ಸ್ ಡೇ ( ಸಹೋದರರ ದಿನ) ದಂದು ಈ ವಿದ್ಯಾರ್ಥಿನಿ ಬರೆದ ಸಂದೇಶ ಈ ರೀತಿ ಇದೆ.. “ನನ್ನ ಪ್ರೀತಿಯ ಸಹೋದರರಾದ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರಿಗೆ ಸಹೋದರರ ದಿನದ ಶುಭಾಶಯಗಳು ನಿಮ್ಮಿಬ್ಬರನ್ನೂ ನಾನು ಸಹೋದರರಂತೆ ಭಾವಿಸಿದ್ದೇನೆ. ಪಾನ್ ಮಸಾಲಾ ಜಾಹೀರಾತನ್ನು ನೀವು ತಕ್ಷಣವೇ ನಿಲ್ಲಿಸಬೇಕು ಯಾಕೆಂದರೆ ಇದು ಜನತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ನನ್ನ ಮನವಿಯನ್ನು ನೀವು ಸ್ವೀಕರಿಸಲೇಬೇಕು. ಪಾನ್ ಮಸಾಲಾ ಜಾಹೀರಾತನ್ನು ನಿಲ್ಲಿಸಿ , ಯುವಜನತೆಯನ್ನು ರಕ್ಷಿಸಬೇಕು “

“ನಾನು ಕೂಡ ನಿಮ್ಮ ಅಭಿಮಾನಿ.. ನೀವು ಜಾಹೀರಾತಿನಲ್ಲಿ ಕಾಣಿಸಿಕೊಂಡರು ನಾನು ಅದರಿಂದ ಪ್ರೇರಣೆಗೊಂಡು ನಾನು ಕೂಡ ವಿಮಲ್ ಪಾನ್ ಮಸಾಲ ತಿನ್ನಲು ಪ್ರಾರಂಭಿಸುತ್ತೇನೆ. ದಯವಿಟ್ಟು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಡಿ “ಎಂದು ವಿದ್ಯಾರ್ಥಿನಿ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾಳೆ. ಈ ವಿದ್ಯಾರ್ಥಿ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರ ವಿಳಾಸಕ್ಕೆ ಮನಿ ಆರ್ಡರ್ ಮಾಡಿರುವ ಲೆಟರ್ ನ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

Leave a Comment

error: Content is protected !!