Sumalatha Ambareesh: ನಟಿ ಸುಮಲತಾ ಅಂಬರೀಶ್ ತಮ್ಮ ಸೊಸೆ ಅವಿವಾ ಅವರಿಗೆ ನೀಡಿರುವ ಡೈಮಂಡ್ ನೆಕ್ಲೆಸ್ ಬೆಲೆ ಎಷ್ಟು?

Sumalatha Ambareesh ಅಂತು ಇಂತು ಅಂಬರೀಶ್(Ambareesh) ರವರ ಅನುಪಸ್ಥಿತಿಯಲ್ಲಿ ಸುಮಲತಾ ಅಂಬರೀಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಏಕೈಕ ಪುತ್ರನ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ.

ಅಭಿಷೇಕ್ ಅಂಬರೀಶ್ ರವರು ಅವಿವಾ(Aviva Bidapa) ಅವರನ್ನು ಕಳೆದ ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದರು ಹಾಗೂ ಪರಸ್ಪರ ಮನೆಯವರ ಒಪ್ಪಿಗೆ ಮೇರೆಗೆ ಡೇಟಿಂಗ್ ಕೂಡ ಮಾಡುತ್ತಿದ್ದರು. ಕೊನೆಗೂ ಇವರಿಬ್ಬರ ಮದುವೆ ಅದ್ದೂರಿಯಾಗಿ ನಡೆದಿದ್ದು ಪ್ರತಿಯೊಬ್ಬರೂ ಕೂಡ ಇವರಿಬ್ಬರ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವಂತಹ ಅತ್ಯಂತ ಅದ್ದೂರಿ ಮದುವೆಯಾಗಿದೆ.

ಇನ್ನು ಈ ಸಂದರ್ಭದಲ್ಲಿ ತಮ್ಮ ಸೊಸೆ ಆಗಿರುವಂತಹ ಅವಿವ ಅವರಿಗೆ ತಮ್ಮ ಮಗ ಆಗಿರುವಂತಹ ಅಭಿಷೇಕ ಅಂಬರೀಶ್(Abhishek Ambareesh) ಅವರ ಎದುರಿಗೆ ನಟಿ ಸುಮಲತಾ ಅಂಬರೀಶ್ ರವರು ವಜ್ರದ ಅದ್ದೂರಿ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಆ ನೆಕ್ಲೆಸ್ ನ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಅವಿವಾ ರವರಿಗೆ ಉಡುಗೊರೆ ರೂಪದಲ್ಲಿ ಬಂದಿರುವಂತಹ ವಜ್ರದ ನೆಕ್ಲೆಸ್ ಬೆಲೆ ಭರ್ಜರಿ ಒಂದು ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಜೋಡಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!