ಅವನು ನನ್ನ ಹುಡುಗ ಅವನನ್ನು ನಾನು ಮದುವೆಯಾಗದೆ ಇಲ್ಲಿಂದ ಕದಲಲ್ಲ ಎಂದು ಖ್ಯಾತ ನಟನ ಮನೆಯ ಮುಂದೆ ಧರಣಿ ಕೂತ ನಟಿ

ತಮಿಳಿನಲ್ಲಿ ನಟ ಸಿಂಬು ತುಂಬಾನೇ ಫೇಮಸ್. ನಟ ಸಿಂಬು ಅವರ ಸಿನಿಮಾಗಳಿಂತ ಹೆಚ್ಚು ಅವರ ಹ್ಯಾಂಡ್ ಸಮ್ ಲುಕ್ ನಿಂದಲೇ ಹುಡುಗಿಯರನ್ನ ಅಟ್ರಾಕ್ಟ್ ಮಾಡುತ್ತಾರೆ. ನಟ ಸಿಂಬು ಕಂಡ್ರೆ ತಮಿಳಿಗರು ಮಾತ್ರವಲ್ಲ, ದೇಶಾದ್ಯಂತ ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. ಇಷ್ಟೊಂದು ಫ್ಯಾನ್ಸ್ ಫಾಲೋವರ್ಸ್ ಇರುವ ನಟ ಸಿಂಬು ತಮ್ಮ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ನಿಧಿ ಅಗ್ರವಾಲ್ ಜೊತೆಗೆ ಪ್ರೀತಿಯಲ್ಲಿರುವ ಸಿಂಬು ಅವರನ್ನೇ ಮದುವೆಯಾಗುತ್ತಿದ್ದಾರೆ ಅಂತ ಕಾಲಿವುಡ್ ನಲ್ಲಿ ಸುದ್ದಿಯಾಗಿತ್ತು. ಈ ನಡುವೆ ಈ ಲವ್ ಸ್ಟೋರಿಗೆ ಒಂಂದು ಟ್ವಿಸ್ಟ್ ಸಿಕ್ಕಿದೆ. ಸಿಂಬು ನನ್ನವನೆ ಎನ್ನುತ್ತಾ ಧಾರಾವಾಹಿಯ ಶೈಲಿಯಲ್ಲಿಯೇ ಸಿಂಬು ಮನೆಯೆದುರೇ ಸೀನ್ ಕ್ರಿಯೇಟ್ ಮಾಡಿದ್ದಾರೆ ಧಾರಾವಾಹಿಯ ನಟಿ ಶ್ರೀನಿಧಿ.

ಹೌದು ನಟಿ ಶ್ರೀನಿಧಿ ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ’ಯಾರಡಿ ನೀ ಮೋಹಿನಿ’ ಧಾರಾವಾಹಿಯ ಮೂಲಕ ತಮಿಳುಗರಿಗೆ ಹೆಚ್ಚು ಅಚ್ಚುಮೆಚ್ಚಾಗಿರುವ ನಟಿ ಶ್ರೀನಿಧಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅಲ್ಲದೇ ಒಂದಿಲ್ಲೊಂದು ಸುದ್ದಿಯ ಮೂಲಕ ಮೂಲಕ ಟ್ರೊಲ್ ಆಗುತ್ತಾ ಇರುತ್ತಾರೆ. ತಮಿಳು ನಟರ ಬಗ್ಗೆ ಆಗಾಗ ತಮ್ಮದೇ ಆದ ವಿಚಾರವನ್ನು ವ್ಯಕ್ತಪಡಿಸುವ ಶ್ರೀನಿಧಿ, ಈ ಬಗ್ಗೆ ಸಾಕಷ್ಟು ಟ್ರೋಲ್ ಆಗಿದ್ದಾರೆ.

ಇನ್ನು ಅಭಿಮಾನಿಯೊಬ್ಬರು ನಟ ಸಿಂಬು ಬಗ್ಗೆ ಕೇಳಿದಾಗ ತಾನು ಅವರನ್ನು ಮದುವೆಯಾಗೋಕ್ಕೆ ಸಿದ್ಧ ಅಂತ ಒಂದು ವಿಡಿಯೋ ಮಾಡಿ ಶ್ರೀನಿಧಿ ಹೇಳಿಕೊಂಡಿದ್ದರು. ಆದರೆ ಇಂಥ ವಿಷಯಗಳಿಗೆ ಸದಾ ಟ್ರೋಲ್ ಆಗುತ್ತಿದ್ದ ಶ್ರೀನಿಧಿಯ ಈ ಮಾತನ್ನು ಯಾರೂ ಹೆಚ್ಚು ಪರಿಗಣಿಸಿರಲಿಲ್ಲ. ಇದೀಗ ಶ್ರೀನಿಧಿ ಮಾಡಿರುವ ಒಂದು ಕೆಲಸ ಕಾಲಿವುಡ್ಡಿಗರಿಗೆ ಶಾಕ್ ನೀಡಿದೆ. ಅದೇನು ಅಂತೀರಾ? ಹೇಳ್ತೀವಿ ಮುಂದೆ ಓದಿ.

ಹೌದು ನಟಿ ಶ್ರೀನಿಧಿ ತಾನು ಸಿಂಬುವನ್ನು ಪ್ರೀತಿಸುತ್ತೇನೆ. ನಾನು ಅವರನ್ನು ಮದುವೆಯಾಗುವವರೆಗೂ ಈಗಿ ಜಾಗವನ್ನು ಬಿಟ್ಟು ಕದಲುವುದಿಲ್ಲ ಎಂದು, ನಟ ಸಿಂಬು ಮನೆಯ ಎದುರು ಧರಣಿ ಕೂತಿದ್ದರು. ಮಧ್ಯರಾತ್ರಿಯಲ್ಲಿ ಸಿಂಬು ಮನೆ ಮುಂದೆ ಬಂದು ಈ ರೀತಿ ಗಲಾಟೆ ಮಾಡಿದ್ದಾರೆ ನಟಿ ಶ್ರೀನಿಧಿ. ಸಿಂಬುವನ್ನು ತಾನು ನೋಡಲೇ ಬೇಕು ಎಂದು ಹಠ ಹಿಡಿದು ಕುಳಿತಿದ್ದ ಶ್ರೀನಿಧಿಯನ್ನು ಸಿಂಬು ಮನೆಯವರು ಹೇಗೋ ಸಮಾಧಾನ ಮಾಡಿ ಹಿಂತಿರುಗಿ ಕಳುಹಿಸಿದ್ದಾರೆ.

ಆದರೆ ನಟ ಸಿಂಬು ಮಾತ್ರ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರತಿಕ್ರಿಯೆಯನ್ನು ಇದುವರೆಗೂ ನೀಡಿಲ್ಲ. ಸದ್ಯ ಒಂದಿಲ್ಲೊಂದು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ನಟ ಸಿಂಬು, ಶ್ರೀನಿಧಿ ವಿಷಯದಲ್ಲಿ ಮಾತ್ರ ಸೈಲೆಂಟ್ ಆಗಿದ್ದಾರೆ. ಇದು ಯಾಕೋ ಕಾಲಿವುಡ್ ನಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ನಟಿ ಶ್ರೀನಿಧಿ ಇಷ್ಟೊಂದು ಡ್ರಾಮಾವನ್ನು ಯಾಕೆ ಕ್ರಿಯೇಟ್ ಮಾಡಿದರು? ಅವರಿಗೆ ನಿಜವಾಗಿ ಸಿಂಬು ಮೇಲೆ ಈ ಮಟ್ಟಿಗಿನ ಪ್ರೀತಿ ಆಗಿದ್ಯಾ ಎಂಬುದರ ಬಗ್ಗೆ ಮಾತ್ರ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Leave a Comment

error: Content is protected !!