ದರ್ಶನ್ ಮಾಡಿದ ಸಹಾಯವನ್ನು ನೆನೆದ ಪ್ರಶಾಂತ್ ನೀಲ್ ದರ್ಶನ್ ಇಲ್ಲದೇ ಇದ್ದರೆ ಪ್ರಶಾಂತ್ ನೀಲ್ ಈ ಮಟ್ಟಕ್ಕೆ ಬೆಳೆಯುವುದು ಸಾಧ್ಯ ಆಗ್ತಾ ಇರ್ಲಿಲ್ಲ

ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಅವರ ಹೆಸರು ಇಂದು ದೇಶದೆಲ್ಲೆಡೆ ಜನಪ್ರಿಯತೆ ಹೊಂದಿದೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಪ್ರಶಾಂತ್ ನೀಲ್ ಅವರು ಉಗ್ರಂ ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದರು. ಉಗ್ರಂ ಚಿತ್ರ ಬಿಡುಗಡೆಯಾದಾಗ ಪ್ರಶಾಂತ್ ನೀಲ್ ಅವರು ಹೆಸರು ಯಾರಿಗೂ ಗೊತ್ತಿರಲಿಲ್ಲ. ಪ್ರಾರಂಭದ ದಿನಗಳಲ್ಲಿ ಪ್ರಶಾಂತ್ ನೀಲ್ ಅವರು ತುಂಬಾ ಕಷ್ಟಪಟ್ಟಿದ್ದಾರೆ ಹಾಗೂ ಪ್ರಶಾಂತ್ ನೀಲ್ ಅವರು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿ ಎಂದರೆ ಅದು ಡಿ ಬಾಸ್. ಡಿ ಬಾಸ್ ಅವರು ಅಂದು ಮಾಡಿದ ಚಿಕ್ಕ ಸಹಾಯ ಇಂದು ಪ್ರಶಾಂತ್ ಅವರನ್ನು ಇಂತಹ ಸಾಧನೆ ಮಾಡುವಲ್ಲಿ ಪ್ರೇರೇಪಿಸಿದೆ.

ದರ್ಶನ್ ಅವರ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಯಾವಾಗಲೂ ಸಹ ಕಲಾವಿದರಿಗೆ ಮತ್ತು ಹೊಸ ಕಲಾವಿದರನ್ನು ಬೆನ್ನುತಟ್ಟಿ ಪ್ರಶಂಸೆ ನೀಡುತ್ತಾರೆ. ದರ್ಶನ್ ಅವರಿಗೆ ಸಹಾಯ ಮಾಡುವ ದೊಡ್ಡ ಗುಣವಿದೆ. ಹಾಗೆ ತಾನು ಸಹಾಯ ಮಾಡಿದೆ ಎಂದು ಎಲ್ಲೂ ಕೂಡ ದರ್ಶನ್ ಅವರು ಗರ್ವ ದಿಂದ ಹೇಳಿಕೊಳ್ಳುವುದಿಲ್ಲ ಇದು ಕೂಡ ಅವರ ಇನ್ನೊಂದು ದೊಡ್ಡ ಗುಣ. ದರ್ಶನ್ ಅವರು ಕೇವಲ ತೆರೆ ಮೇಲೆ ಅಷ್ಟೇ ಅಲ್ಲದೆ ತೆರೆ ಹಿಂದೆ ಕೂಡ ಹಲವಾರು ಜನರ ಬದುಕಿನಲ್ಲಿ ಹೀರೋ ಆಗಿದ್ದಾರೆ.

ಕೆಜಿಎಫ್ ಚಿತ್ರ ಬಹು ದೊಡ್ಡ ಮಟ್ಟದಲ್ಲಿ ಇಂದು ಯಶಸ್ಸನ್ನು ಕಂಡಿದೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಿಮಗೆಲ್ಲಾ ಗೊತ್ತಿರಬಹುದು ಪ್ರಶಾಂತ್ ನೀಲ್ ಅವರು ಕನ್ನಡದ ಹೆಸರಾಂತ ನಟ ಶ್ರೀಮುರಳಿ ಅವರ ಹೆಂಡತಿಯ ತಮ್ಮ. ಶ್ರೀಮುರಳಿಯವರ ಭಾವ ನಾಗಿದ್ದರೂ ಕೂಡ ಪ್ರಶಾಂತ್ ನೀಲ್ ಅವರಿಗೆ ಉಗ್ರಂ ಚಿತ್ರ ಬಿಡುಗಡೆ ಯಾದಾಗ ಸಿಕ್ಕಾಪಟ್ಟೆ ತೊಂದರೆಯಾಗಿತ್ತು. ಆಗಷ್ಟೇ ಉಗ್ರಂ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಯಾಗಲು ಸಿದ್ಧವಾಗಿತ್ತು.

ಶ್ರೀಮುರಳಿ ಅವರು ಉಗ್ರಂ ಚಿತ್ರ ಬಿಡುಗಡೆ ಆಗುವ ಸಮಯದಲ್ಲಿ ಸ್ಟಾರ್ ನಟ ಆಗಿರಲಿಲ್ಲ. ಉಗ್ರಂ ಚಿತ್ರಕ್ಕೆ ಹೇಳುವಷ್ಟು ಪ್ರಚಾರ ಕೂಡ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೆ ಉಗ್ರಂ ಚಿತ್ರಕ್ಕೆ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ 6 ಕೋಟಿ ರುಪಾಯಿಗಳನ್ನು ಹಾಕಿದ್ದರು. ಬಿಡುಗಡೆಯ ಸಮಯದಲ್ಲಿ ಉಗ್ರಂ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡೋಕೆ ಯಾರೂ ಕೂಡ ಮುಂದೆ ಬರುತ್ತಾ ಇರಲಿಲ್ಲ. ಈ ಸಮಯ ದರ್ಶನ್ ಅವರು ಶ್ರೀಮುರಳಿಯವರ ಮತ್ತು ಪ್ರಶಾಂತ್ ನೀಲ್ ಅವರ ಸಹಾಯಕ್ಕೆ ಮುಂದಾಗುತ್ತಾರೆ. ಸ್ವತಃ ದರ್ಶನ್ ಅವರೇ ತಮ್ಮ ಬ್ಯಾನರ್ ಅಡಿ ಉಗ್ರಂ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡಲು ಒಪ್ಪಿಕೊಳ್ಳುತ್ತಾರೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ ಈ ಸಿನಿಮಾವನ್ನು ನಾನು ವಿತರಣೆ ಮಾಡುತ್ತೇನೆಂದು ದರ್ಶನ್ ಆಶ್ವಾಸನೆ ಕೊಟ್ಟಿದ್ದರು.

ದರ್ಶನ್ ಅವರು ತಮ್ಮ ಮಾತಿನಂತೆ ಉಗ್ರಂ ಚಿತ್ರವನ್ನು ವಿತರಣೆ ಮಾಡುತ್ತಾರೆ. ನಂತರ ಉಗ್ರಂ ಚಿತ್ರ ಕರ್ನಾಟಕದೆಲ್ಲೆಡೆ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ. ಅದಾದ ನಂತರ ಶ್ರೀ ಮುರಳಿ ಮತ್ತು ಪ್ರಶಾಂತ್ ನೀಲ್ ಅವರ ಅದೃಷ್ಟವೇ ಬದಲಾಗುತ್ತೆ. ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಅವರು ಇಂದಿಗೂ ಕೂಡ ದರ್ಶನ್ ಅವರು ಮಾಡಿದ ಸಹಾಯವನ್ನು ನೆನೆಸಿಕೊಂಡು ಭಾವುಕರಾಗ್ತಾರೆ. ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ನಡೆದ ಕೆಜಿಎಫ್ ಚಿತ್ರದ ಸಂದರ್ಶನಗಳಲ್ಲಿ ಕೂಡ ದರ್ಶನ್ ಅವರು ಮಾಡಿದ ಸಹಾಯವನ್ನು ನೆನೆದು ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಅದಕ್ಕೆ ದರ್ಶನ್ ಅವರು ಕಾರಣ ಎಂದು ಪ್ರಶಾಂತ್ ನವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಕಷ್ಟಕಾಲದಲ್ಲಿ ಡಿ ಬಾಸ್ ಪ್ರಶಾಂತ್ ನೀಲ್ ಅವರಿಗೆ ಸಹಾಯ ಮಾಡಿದ್ದಾರೆ. ಈ ಸಹಾಯವನ್ನು ವಾಪಸ್ಸು ಮಾಡುವುದಕ್ಕಾದರೂ ಪ್ರಶಾಂತ್ ನೀಲ್ ಅವರು ಡಿ ಬಾಸ್ ಅವರಿಗೆ ಒಂದು ಚಿತ್ರವನ್ನು ಮಾಡಲೇಬೇಕೆಂದು ಅಭಿಮಾನಿಗಳ ಆಸೆ ಪಡುತ್ತಿದ್ದಾರೆ.

Leave A Reply

Your email address will not be published.

error: Content is protected !!