ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದ ಕಥೆಯನ್ನು ಬರೆಯೋಕೆ ಮುಂಚೆ ಮಾಡುತ್ತಿದ್ದ ಕೆಲಸವೇನು ಗೊತ್ತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ !

ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯದಂತಹ ಮುತ್ತು ರತ್ನ. ಇಂತಹ 1ಚಿತ್ರ ಕನ್ನಡ ಚಿತ್ರರಂಗದಿಂದ ಮೂಡಿ ಬರುತ್ತೆ ಅಂತ ನಾವೆಲ್ಲ ಕನಸು ಮನಸ್ಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ. ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದ ಎಲ್ಲ ರೆಕಾರ್ಡುಗಳನ್ನೂ ಮುರಿಯುವುದು ಖಚಿತವಾಗಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ಟ್ರೇಲರ್ ಮತ್ತು ಟೀಸರ್ ಗಳ ಮೂಲಕ ದೊಡ್ಡದಾದರೆ ಕೋರ್ಟ್ ಸೃಷ್ಟಿ ಮಾಡಿದೆ.

ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತ ಚಿತ್ರರಂಗದಲ್ಲಿಯೇ ಯಾರೋ ಅಳಿಸಲಾಗದ ದಾಖಲೆ ಗಳನ್ನು ಕೆ ಜಿ ಎಫ್ – 2 ಹುಟ್ಟುಹಾಕಿದೆ. ಕೆಜಿಎಫ್ – 2 ಇದೇ ವಾರ ಏಪ್ರಿಲ್ ರಂದು ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಕೆಜಿಎಫ್-2 ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಬಿಡುಗಡೆಗೆ ಮೂರು ದಿನ ಬಾಕಿ ಇರುವಾಗಲೇ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಒಟ್ಟಿನಲ್ಲಿ ಬಾಕ್ಸಾಫೀಸ್ ಪೀಸ್ ಪೀಸ್ ಆಗುವುದಂತೂ ಖಚಿತ.

ಕನ್ನಡ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೂತ್ರಧಾರ ಪ್ರಶಾಂತ್ ನೀಲ್ ಅವರ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ. ಪ್ರಶಾಂತ್ ನೀಲ್ ಅವರು ಹುಟ್ಟಿದ್ದು ಹಾಸನದಲ್ಲಿ ಇವರು ಬಡತನದಲ್ಲಿ ಹುಟ್ಟಿ ನ ಶ್ರೀಮಂತ ಕುಟುಂಬದಲ್ಲೇ ಹುಟ್ಟಿದ್ದಾರೆ. ಓದಿನಲ್ಲಿ ಕೂಡ ಚುರುಕಾಗಿದ್ದ ಪ್ರಶಾಂತ್ ನೀಲ್ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಮತ್ತು ಎಂಬಿಎ ಪದವಿಯನ್ನು ಕೂಡ ಮುಗಿಸಿದ್ದಾರೆ.ತದನಂತರ ಇವರು ವಿದೇಶಕ್ಕೆ ಹೋಗಿ ಚಿತ್ರ ನಿರ್ದೇಶನ ಪದವಿಯನ್ನು ಕೂಡ ಪಡೆದಿದ್ದಾರೆ.

ಕಾಲೇಜಿನ ದಿನಗಳಿಂದಲೂ ಪ್ರಶಾಂತ್ ನೀಲ್ ಅವರಿಗೆ ಹಾಲಿವುಡ್ ಸಿನಿಮಾ ಗಳೆಂದರೆ ತುಂಬಾ ಪ್ರೀತಿ. ಇವರು ಇಲ್ಲಿಯ ತನಕ  ಕನ್ನಡ ಸಿನಿಮಾಗಳನ್ನು ಮೂಡೆ ಇಲ್ವಂತೆ. ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಕನ್ನಡ ಸಿನಿಮಾ ಮಾಡಬೇಕೆಂಬ ಆಸೆ ಇಟ್ಟುಕೊಂಡು ಕೆಜಿಎಫ್ ಚಿತ್ರವನ್ನು ಇವರು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಕೆಲಸ ಹಾಗೂ ಚಾಣಕ್ಯತನದ ಬಗ್ಗೆ ಎರಡು ಮಾತಿಲ್ಲ. ಆದರೆ ಪ್ರಶಾಂತ್ ನೀಲ್ ಅವರಿಗೆ ಒಂದು ಕೆ ಟ್ಟ ಅಭ್ಯಾಸವಿದೆ.

ಅದೇನೆಂದರೆ ಪ್ರಶಾಂತ್ ನೀಲ್ ಅವರು ಚಿತ್ರಗಳಿಗೆ ಕಥೆಯನ್ನು ಬರೆಯುವಾಗ ಅದರಲ್ಲೂ ವಿಶೇಷವಾಗಿ ಕೆಜಿಎಫ್ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಕತೆಯನ್ನು ಬರೆಯುವುದು ಕ್ಕಿಂತಲೂ ಮುಂಚೆ ಮ ದ್ಯಪಾನ ವನ್ನು ಸೇವಿಸುತ್ತಿದ್ದರು. ಅವರದ್ದೇ ಭಾಷೆಯಲ್ಲಿ ಹೇಳಬೇಕೆಂದರೆ  ರಾತ್ರಿ ಎಣ್ಣೆ ಕುಡಿದು ಕೆಜಿಎಫ್ ಚಿತ್ರದ ಕತೆ ಬರೆದಿದ್ದರು. ನಂತರ ಬೆಳಿಗ್ಗೆ ಎದ್ದು ಆ ಕಥೆಯನ್ನು ಓದುತ್ತಿದ್ದರು. ಬೆಳಿಗ್ಗೆ ಎಣ್ಣೆಯ ನ ಶೆ ಇಳಿದ ಮೇಲೆ ಕೂಡ ಆ ಕಥೆ ಅವರಿಗೆ ಚೆನ್ನಾಗಿದೆ ಅನ್ನಿಸಿದರೆ ಮಾತ್ರ ಆ ಕಥೆಯನ್ನು ಚಿತ್ರಕ್ಕೆ ಅಳವಡಿಸುತ್ತಿದ್ದರು. ನಾಚಿಕೆ ಸ್ವಭಾವದ ಮನುಷ್ಯ ಎಂದೆನಿಸಿಕೊಂಡಿದ್ದ ಪ್ರಶಾಂತ್ ನೀಲ್ ಅವರು ಈ ರೀತಿಯಾಗಿ ಸಂದರ್ಶನವೊಂದರಲ್ಲಿ ನೇರವಾದ ಮಾತುಗಳನ್ನು ಆಡಿರುವುದು ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿದೆ.

Leave a Comment

error: Content is protected !!