Tiger Prabhakar: ಅಂದಿನ ಕಾಲದಲ್ಲಿ ಸ್ಟಾರ್ ನಟರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು ಟೈಗರ್ ಪ್ರಭಾಕರ್.

Tiger Prabhakar ಕನ್ನಡ ಚಿತ್ರರಂಗದ ಹುಲಿ ಟೈಗರ್ ಪ್ರಭಾಕರ್ ಎಂಬುದಾಗಿ ಖ್ಯಾತರಾಗಿರುವಂತಹ ಪ್ರಭಾಕರ್ ರವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಕನ್ನಡ ಪ್ರಭಾಕರ್(Prabhakar) ಎನ್ನುವ ಹೆಸರಿನಲ್ಲಿ ನಟನೆಯ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಜೊತೆಗೂ ಕೂಡ ಪ್ರಮುಖ ಪಾತ್ರದಲ್ಲಿ ಇಲ್ಲವೇ ಕಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಭವ ಟೈಗರ್ ಪ್ರಭಾಕರ್(Tiger Prabhakar) ಅವರಿಗಿತ್ತು. ಖಳನಾಯಕ ಹಾಗೂ ನಾಯಕ ನಟನ ಪಾತ್ರದಲ್ಲಿ ಪ್ರಭಾಕರ್ ಅವರು ಸಂಪೂರ್ಣ ಪರಕಾಯ ಪ್ರವೇಶವನ್ನು ಮಾಡುತ್ತಿದ್ದರು.

ಇನ್ನು ಸಂಭಾವನೆ ವಿಚಾರದಲ್ಲಿ ಕೂಡ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದ ಹೆಗ್ಗಳಿಕೆ ಟೈಗರ್ ಪ್ರಭಾಕರ್ ಅವರದ್ದಾಗಿದೆ. ಮೂಲಗಳ ಪ್ರಕಾರ ಅಂದಿನ ಕಾಲದಲ್ಲಿ 70 ರಿಂದ 75,000 ಪ್ರತಿ ಸಿನಿಮಾಗಳಿಗೆ ಅವರು ಸಂಭಾವನೆ ರೂಪದಲ್ಲಿ ಹಣವನ್ನು ಪಡೆಯುತ್ತಿದ್ದರಂತೆ. ಅಂದರೆ ಈ ಸಮಯದಲ್ಲಿ ಅದು ಕೋಟಿ ರೂಪಾಯಿ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂದರೆ ಕೂಡ ತಪ್ಪಾಗಲಾರದು.

ಸಿನಿಮಾ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದ ಟೈಗರ್ ಪ್ರಭಾಕರ್ ರವರು ವೈಯಕ್ತಿಕ ಜೀವನದಲ್ಲಿ ಮಾತ್ರ ಸಂಪೂರ್ಣವಾಗಿ ಸೋತು ಹೋಗುತ್ತಾರೆ ಎನ್ನುವುದೇ ವಿಪರ್ಯಾಸವಾಗಿದೆ. ಟೈಗರ್ ಪ್ರಭಾಕರ್ ಅವರ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!