ದುಬಾರಿ ದೂರದರ್ಶನ ಹೊಂದಿರುವ ಬಾಲಿವುಡ್ ಬಾದ್ ಶಾ; ಶಾರುಖ್ ಮನೆಯಲ್ಲಿರುವ ಒಂದು ಟಿವಿ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ಕಿಂಗ್, ಬಾಲಿವುಡ್ ಬಾದ್ ಷಾ ಎಂದು ಕರೆಸಿಕೊಳ್ಳುವ ಶಾರುಖ್ ಖಾನ್, ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿರುವವರು. ಇದುವರೆಗೆ ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ಕಿಂಗ್ ಖಾನ್, ಬಾಲಿವುಡ್ ಆಳಿದ ನಟರುಗಳಲ್ಲಿ ಒಬ್ಬರು!! ನಟ ಶಾರೂಖ್ ಖಾನ್ ನಟಿಸದೆ ಇರೋ ಪಾತ್ರಗಳೇ ಇಲ್ಲ. ವಯಸ್ಸು 50 ದಾಟಿದರೂ ಇನ್ನೂ ಯುವಕರನ್ನು ಮೀರಿಸುವ ಸಿಕ್ಸ್ ಪ್ಯಾಕ್ ಶಾರುಖ್ ಸಿನಿಮಾ ಮಾತ್ರವಲ್ಲದೆ ಇತರ ಹಲವು ವಿಷಯಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ.

ಇತ್ತೀಚಿಗೆ ಸಂದರ್ಶನ ವೊಂದರಲ್ಲಿ ಶಾರುಕ್ ಖಾನ್ ತನ್ನ ಮನೆಯಲ್ಲಿರುವ ಟಿವಿಯ ಬಗ್ಗೆ ಮಾತನಾಡಿದರು. ನಟ ಶಾರೂಖ್ ಖಾನ್ ಅವರ ಮನೆಯಲ್ಲಿ ಎಷ್ಟು ಟಿವಿಗಳಿವೆ ಗೊತ್ತಾ?! ಇನ್ನು ಅವುಗಳ ಬೆಲೆ ಕೇಳಿದ್ರೆ ಅಂತೂ ನೀವು ನಿಜಕ್ಕೂ ಶಾಕ್ ಆಗ್ತೀರಿ. ಹೌದು ಕಿಂಗ್ ಖಾನ್ ಮನೆಯಲ್ಲಿ ಒಟ್ಟೂ 12 ಟಿವಿಗಳಿವೆಯಂತೆ. ನಟ ಶಾರುಖ್ ಖಾನ್ ಮನೆಯಿರುವುದು ಮುಂಬೈನ ಪ್ರತಿಷ್ಠಿತ ಸ್ಥಳದಲ್ಲಿರುವ ಮನ್ನತ್ ಬಂಗಲೆಯಲ್ಲಿ.

ಇತ್ತೀಚಿಗೆ ಮನ್ನತ್ ಬಂಗಲೆಯ ನಾಮ ಫಲಕ ಬದಲಾಯಿಸಿದ್ದರು ನಟ ಶಾರುಖ್ ಖಾನ್. ಇದಕ್ಕೆ ಅವರು ಬರೋಬ್ಬರಿ 20 ರಿಂದ 25 ಲಕ್ಷ ಹಣವನ್ನು ವ್ಯಯಿಸಿದ್ದಾರೆ. ಒಂದು ಸಣ್ಣ ನಾಮಫಲಕ ಬದಲಾವಣೆಗೆ ಇಷ್ಟೊಂದು ಹಣ ಸೂರಿಬೇಕಿತ್ತ ಅಂತ ಸಾಕಷ್ಟು ಟ್ರೋಲ್ ಕೂಡ ಆಗಿದ್ದರು ಬಾದ್ ಷಾ. ಇದೀಗ ಮತ್ತೆ ಮನೆಯಲ್ಲಿರುವ ಟಿವಿಗಳ ಬಗ್ಗೆ ಮಾತನಾಡಿರುವ ಶಾರೂಕ್ ಖಾನ್ ಅದರ ಬೆಲೆಯನ್ನು ಕೂಡ ಹೇಳಿದ್ದಾರೆ.

ಶಾರುಖ್ ಖಾನ್ ಅವರ ಮನೆಯಲ್ಲಿ ಒಟ್ಟು 12 ಟಿವಿ ಗಳಿದ್ದು, ಒಂದು ಅವರ ರೂಮಿನಲ್ಲಿ, ಲಿವಿಂಗ್ ರೂಮಿನಲ್ಲಿ ಒಂದು ಟಿವಿ, ಮಗ ಅಬ್ರಾಮ್ ಕೊನೆಯಲ್ಲಿ ಒಂದು ಹಾಗೂ ಆರ್ಯನ್ ಕೊನೆಯಲ್ಲಿ ಒಂದು ಟಿ ವಿ ಇದೆ. ಹಾಗೆಯೇ ಮಗಳು ಸುಹಾನ ಅವರ ಕೋಣೆಯಲ್ಲಿಯೂ ಒಂದು ಟಿವಿ ಇದೆ. ಇನ್ನೂ ಜಿಮ್ ಕೋಣೆಯಲ್ಲಿರುವ ಟಿವಿ ಹಾಳಾಗಿದೆ. ಹಾಗಾಗಿ ಎಲ್ಲಾ ಟಿವಿಯು ಹಳೆಯದಾಗಲೂ ಕಾಯುತ್ತಿದ್ದೇನೆ ಎಲ್ಲಾ ಟಿವಿ ಹಾಳಾದರೆ ಎಲ್ ಜಿ ಟಿವಿಯನ್ನು ಕೊಂಡುಕೊಳ್ಳುತ್ತೇನೆ ಎಂದಿದ್ದಾರೆ ಶಾರುಖ್ ಖಾನ್. ಅಂದಹಾಗೆ ಈ ಟಿವಿ ಗಳ ಬೆಲೆ ಎಷ್ಟು ಗೊತ್ತಾ! ಶಾರುಖ್ ಖಾನ್ ಅವರೇ ಹೇಳಿರುವಂತೆ ಅವರ ಮನೆಯಲ್ಲಿರುವ ಒಂದೊಂದು ಟಿವಿಯ ಬೆಲೆ ಒಂದುವರೆ ಲಕ್ಷದಿಂದ 2 ಲಕ್ಷ ರೂಪಾಯಿಗಳು.

ಇನ್ನು ಈ ಸಂದರ್ಶನದ ತುಳು ಕನ್ನು ತಮ್ಮ ಟ್ವೀಟ್ ಪೇಜ್ ನಲ್ಲಿ ಹಂಚಿಕೊಂಡಿದ್ದರು ಶಾರುಖ್ ಖಾನ್. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಹಲವಾರು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಕೆಲವರು ಅದಕ್ಕಾಗಿ ಅಲ್ವಾ ಕಿಂಗ್ ಅನ್ನೋದು ಅಂತ ಹೇಳಿದ್ರೆ, ಇನ್ನೂ ಕೆಲವರು ನಮ್ಮ ಒಂದು ವರ್ಷದ ಗಳಿಕೆ ಎಂದು ಹೇಳಿದ್ದಾರೆ. ಹೀಗೆ ಬೇರೆ ಬೇರೆ ಕಮೆಂಟ್ ಗಳನ್ನು ಮಾಡಿದ್ದಾರೆ ನೆಟ್ಟಿಗರು.ಒಟ್ಟಿನಲ್ಲಿ ಬಾಲಿವುಡ್ ಬಾದ್ ಷಾ ಮನೆಯು ಅತ್ಯಂತ ದುಬಾರಿ ಹಾಗೂ ಅವರ ಮನೆಯಲ್ಲಿರುವ ಟಿವಿಯೂ ಇಷ್ಟು ದುಬಾರಿನಾ ಅಂತ ಜನರು ಉದ್ಘರವೆತ್ತಿದ್ದಾರೆ.

Leave A Reply

Your email address will not be published.

error: Content is protected !!