ವೈರಲ್ ಆಯ್ತು ಅಪ್ಪು ಅವರ ಹಾಗೆ ಕಾಣೋ ಅವಳಿ ಮಕ್ಕಳ ಫೋಟೋ ಹೇಗಿದ್ದಾರೆ ನೋಡಿ ಅಪ್ಪು ಅವರ ಥರ ಇರೋ ಅವಳಿ ಜವಳಿ

ಪ್ರಪಂಚದಲ್ಲಿ ಒಬ್ಬ ಮನುಷ್ಯನ ಹಾಗೆ ಏಳು ಜನರು ಒಪ್ಪುತ್ತಾರೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಒಬ್ಬರ ಹಾಗೆ ಕಾಣುವ ಏಳು ಜನರು ಇರುವುದು ನಿಜಕ್ಕೂ ನಿಜಾನಾ ಎಂಬುದು ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಸಿನಿಮಾಗಳಲ್ಲಿ ನೋಡಿರುತ್ತೇವೆ ಹೊರತು ನಿಜಜೀವನದಲ್ಲಿ ಒಬ್ಬರ ಹಾಗೆ ಇನ್ನೊಬ್ಬರು ಇರುವುದು ತುಂಬಾ ವಿರಳ. ಇದೀಗ ಪುನೀತ್ ರಾಜ್ ಕುಮಾರ್ ಅವರ ಹಾಗೆ ಕಾಣುವ ಇಬ್ಬರು ಅವಳಿ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಸ್ಟೈಲ್ ಹಾಗೂ ಸ್ಮೈಲ್ ಎರಡೂ ಕೂಡ ತುಂಬ ವಿಭಿನ್ನವಾದದ್ದು ಮತ್ತು ವಿಶೇಷವಾದದ್ದು. ಪುನೀತ್ ರಾಜ್ ಕುಮಾರ್ ಅವರ ಹಾಗೆ ನಟನೆ ಮಾಡುವುದಾಗಲಿ ಮಿಮಿಕ್ರಿ ಮಾಡೋದಾಗಲಿ ತುಂಬಾ ಕಷ್ಟ ಅವರು ಕರ್ನಾಟಕಕ್ಕೆ ಒಬ್ಬರೇ ಮಾಸ್ಟರ್ ಪೀಸ್. ಅವರ ಹಾಗೆ ಇನ್ನೊಬ್ಬರು ಯಾರು ಇರೋಕೆ ಸಾಧ್ಯವಿಲ್ಲ. ಪುನೀತ್ ಅವರ ಹೋಲಿಕೆ ಇರುವಂತಹ ಕೆಲವೇ ಕೆಲವು ಕಲಾವಿದರನ್ನು ನಾವೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ.

ಉಡುಪಿಯ ಸಾಲಿಗ್ರಾಮ ಮೂಲದ ಯುವಕನೊಬ್ಬ ನೋಡಲಿಕ್ಕೆ ಅಪ್ಪು ಅವರ ಹಾಗೆ ಕಾಣುತ್ತಿರುವ ವಿಡಿಯೋಗಳನ್ನು ಫೇಸ್ ಬುಕ್ ಹಾಗೂ ಯೂಟ್ಯೂಬ್ ಗಳಲ್ಲಿ ನಾವು ನೋಡಿದ್ದೇವೆ. ಇದೀಗ ಅಪ್ಪು ಅವರ ಹಾಗೆ ಕಾಣುವ ಇಬ್ಬರು ಪುಟಾಣಿ ಮಕ್ಕಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಅಪ್ಪು ಅವರು ಚಿಕ್ಕವಯಸ್ಸಿನಲ್ಲಿ ಹೇಗೆ ಕಾಣುತ್ತಿದ್ದರೋ ಈ ಇಬ್ಬರು ಅವಳಿ ಮಕ್ಕಳು ಕೂಡ ಸೇಮ್ ಟು ಸೇಮ್ ಹಾಗೆ ಕಾಣುತ್ತಿದ್ದಾರೆ.

ಅಪ್ಪು ಅವರ ಆ ನಗು ಹಾವೊಂದು ಮುಖದಲ್ಲಿನ ಕಳೆ ಅವರ ಮುಖದಲ್ಲಿ ಕಾಣಸಿಗುತ್ತಿದೆ. ವೈರಲ್ ಆಗುತ್ತಿರುವ ಈ ಇಬ್ಬರು ಅವಳಿ ಮಕ್ಕಳು ಬೆಂಗಳೂರಿನ ಮೂಲದವರು. ಪುನೀತ್ ಅವರು ತೀರಿಕೊಂಡ ನಂತರ ಈ ಇಬ್ಬರು ಮಕ್ಕಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದೆ. ಇತ್ತೀಚಿಗೆ ಈ ಅವಳಿ ಮಕ್ಕಳು ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಮುದ್ದಾದ ಮಕ್ಕಳು ನೋಡಲು ಥೇಟ್ ಪುನೀತ್ ಅವರು ಬಾಲ್ಯದಲ್ಲಿ ಹೇಗೆ ಇದ್ದರೂ ಹಾಗೆ ನೂರಕ್ಕೆ ನೂರು ಹಾಗೆಯೇ ಇದ್ದಾರೆ ಅದೇ ಕಣ್ಣು ನಗು ಮುದ್ದಾದ ಕೆನ್ನೆ ಒಮ್ಮೆ ನೋಡಿದರೆ ಪುನೀತ ಅವರೇ ಮರುಜನ್ಮ ತಾಳಿ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಹಾಗೆ ಇದ್ದಾರೆ.

Leave A Reply

Your email address will not be published.

error: Content is protected !!