
ಗೋಣಿ ಚೀಲದಿಂದ ತಯಾರಿಸಿದ ತುಂಡುಬಟ್ಟೆಯನ್ನು ಹಾಕಿಕೊಂಡು ಫೋಟೊ ತೆಗೆಸಿಕೊಂಡ ನಟಿಯ ವೀಡಿಯೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್
ಬಾಲಿವುಡ್ ನಟಿಯೊಬ್ಬಳು ಇದೀಗ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದ್ದಾಳೆ. ವಿಧವಿಧವಾದ ಫ್ಯಾಷನ್ ಡ್ರೆಸ್ ಹಾಕಿಕೊಂಡು ಸೋಷಿಯಲ್ ಮೀಡಿಯಾವನ್ನು ಈಕೆ ಗಡಗಡನೆ ನಡುಗಿಸುತ್ತಿದ್ದಾಳೆ. ಈಕೆ ಹೆಸರು ಉಫಿ೯ ಜಾವೇದ್. ಈಕೆಯನ್ನು ನೀವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ. ಈಕೆ ಹಿಂದಿಯಲ್ಲಿ ಪ್ರಸಾರವಾಗಿದ್ದ 2021 ರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿದ್ದಳು.
ರಿಯಾಲಿಟಿ ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಉಫಿ೯ ಜಾವೇದ್ ನಟನೆ ಮಾಡಿದ್ದಾಳೆ. ಆದರೆ ಈಕೆ ಜನಪ್ರಿಯತೆ ಗಳಿಸಿದ್ದು ಮಾತ್ರ ತನ್ನ ಚಿತ್ರವಿಚಿತ್ರ ಉಡುಪುಗಳ ಅವತಾರದಿಂದ. ಈಕೆಗೆ ಈಗ 24 ವರ್ಷ ವಯಸ್ಸಾಗಿದೆ. ಈಕೆ ಹುಟ್ಟಿ ಬೆಳೆದು ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದು ಲಕ್ನೋದಲ್ಲಿ. ಈಕೆ 18 ವರ್ಷ ವಯಸ್ಸಿನಲ್ಲಿರುವಾಗಲೇ ಸಹನಟ ಪರಾಸ್ ಎಂಬುವನ ಜೊತೆ ಡೇಟಿಂಗ್ ಮಾಡಿ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಒಂದೇ ವರ್ಷದಲ್ಲಿ ಇಬ್ಬರೂ ಬೇರ್ಪಟ್ಟು ಬ್ರೇಕ್ ಕಪ್ ಮಾಡಿಕೊಂಡಿದ್ದರು.
ಈಕೆ ಉಡುಗೆ ತೊಡುಗೆಯ ಬಗ್ಗೆ ಅತಿಯಾದ ಕಾರಣ ಸಾಮರ್ಥ್ಯವನ್ನು ಹೊಂದಿದ್ದಾಳೆ. ಇವಳು ಹಾಕುವ ಬಟ್ಟೆಗಳನ್ನು ನೋಡಿದರೆ ಈ ರೀತಿಯ ಬಟ್ಟೆಗಳನ್ನು ಹಾಕಬಹುದಾ ಇಷ್ಟು ಚಿಕ್ಕ ಬಟ್ಟೆಯಲ್ಲಿ ನಾವು ನಮ್ಮ ಮಾನ ಕಾಪಾಡಿಕೊಳ್ಳಬಹುದು ಎಂದು ಆಶ್ಚರ್ಯವಾಗುತ್ತದೆ ಕೆಲವರು ಇವಳ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಹೊಗಳುತ್ತಾರೆ. ಇನ್ನೂ ಕೆಲವರು ಈಕೆಯನ್ನು ಟೀಕೆಯನ್ನು ಕೂಡ ಮಾಡುತ್ತಾರೆ. ಆದರೆ ಒಂದಂತೂ ನಿಜ ಈಕೆ ಬಟ್ಟೆಯನ್ನು ಧರಿಸುವುದು ರಲ್ಲಿ ವಿಭಿನ್ನತೆಯನ್ನು ತೋರ್ಪಡುವುದು ರಲ್ಲಿ ಯಶಸ್ವಿಯಾಗಿದ್ದಾಳೆ. ಚಿತ್ರವಿಚಿತ್ರವಾದ ವಿಭಿನ್ನತೆಯಿಂದ ಒಳಗೊಂಡಿರುವ ಬಟ್ಟೆಗಳನ್ನು ಹಾಕಿಕೊಂಡು ಜನರನ್ನು ಮನೋರಂಜಿಸುವುದು ಈಕೆಯ ಮೂಲ ಕಸುಬು.
ಇದೀಗ ಉರ್ಫಿ ಜಾವೇದ್ ಗೋಣಿ ಚೀಲವನ್ನು ಬಳಸಿಕೊಂಡು ಅದನ್ನ ತುಂಡುಮಾಡಿ ಬಟ್ಟೆಯ ವಿನ್ಯಾಸದ ಆಕೃತಿಯಲ್ಲಿ ರಚಿಸಿ ಧರಿಸಿದ್ದಾಳೆ. ಈಕೆ ಗೋಣಿಚೀಲವನ್ನು ಧರಿಸಿರುವ ವೀಡಿಯೋ ನೋಡಿ ಹಲವರು ಅಯ್ಯೋ ರಾಮ ಈಕೆಗೆ ಏನಾಗಿದೆ ಯಾರಾದರೂ ಈಕೆಗೆ ಬಟ್ಟೆ ಕೊಡಿಸಿ ಎಂದು ತಮಾಷೆಯಾಗಿ ಕಮೆಂಟ್ ಹಾಕಿದ್ದಾರೆ ಇನ್ನೂ ಕೆಲವರು ಈಕೆಯ ಕ್ರಿಯೇಟಿವ್ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಹೊಗಳಿದ್ದಾರೆ. ಜನರು ಹೊಗಳಲು ತೆಗಳಲು ಈಕೆ ಮಾತ್ರ ವಿಧವಿಧವಾದ ವಿನ್ಯಾಸವಾದ ಉಡುಪುಗಳನ್ನು ಧರಿಸುವುದನ್ನು ನಿಲ್ಲಿಸಲ್ಲ. ಈ ರೀತಿಯಾದ ಚಿತ್ರವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಜನರನ್ನು ರಂಜಿಸಿ ಈಕೆ ತಿಂಗಳಿಗೆ ಲಕ್ಷ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾಳೆ ಎಂದರೆ ನೀವು ನಂಬಲೇಬೇಕು.