ಶೂಟಿಂಗ್ ಸಮಯದಲ್ಲಿ ಭೀಕರ ಅಪಘಾತ ಕಾರು ಪಲ್ಟಿಯಾಗಿ ನೀರಿಗೆ ಬಿದ್ದು ವಿಜಯ್ ದೇವರಕೊಂಡ ಮತ್ತು ಸಮಂತಾ ಗೆ ಗಾಯ

ಶೂಟಿಂಗ್ ಮಾಡುವಾಗ ತುಂಬ ಜಾಗುರೂಕತೆಯಿಂದ ಎಚ್ಚರಿಕೆ ವಹಿಸಬೇಕು ಸ್ವಲ್ಪ ಎಡವಿದರೆ ಕೂಡ ನಮ್ಮ ಜೀವಕ್ಕೆ ಅಪಾಯ ಬರುವಂತಹ ಸಂದರ್ಭಗಳು ಒದಗುತ್ತವೆ. 6 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಚಿತ್ರೀಕರಣ ಸಂದರ್ಭದಲ್ಲಿ ಆಕಸ್ಮಿಕವಾಗಿ ನಡೆದ ಅಜಾಗರೂಕತೆಯಿಂದ ಅನಿಲ್ ಮತ್ತು ಉದಯ್ ಎಂಬ ಇಬ್ಬರು ಯುವ ನಟರನ್ನು ನಾವೆಲ್ಲ ಕಳೆದುಕೊಂಡಿದ್ದೇವೆ. ಹತ್ತಾರು ಜನರು ಕಣ್ಮುಂದೆ ಇದ್ದರೂ ಸಹ ಈ ಅವಘಡವನ್ನು ತಪ್ಪಿಸಲು ಸಾಧ್ಯವಾಗಿಲ್ಲ ವಾಗಿತ್ತು. ಇಂಥ ದುರದೃಷ್ಟಕರ ಘಟನೆಗಳು ಶೂಟಿಂಗ್ ಸಮಯದಲ್ಲಿ ನಡೆಯುತ್ತವೆ.

ಇದೀಗ ತೆಲುಗು ಚಿತ್ರರಂಗದಲ್ಲಿ ಕೂಡ ಚಿತ್ರೀಕರಣ ಸಂದರ್ಭದಲ್ಲಿ ಇಂಥದ್ದೇ ಒಂದು ಘಟನೆ ನಡೆದಿರುವ ಸುದ್ದಿ ಕೇಳಿ ಬರುತ್ತಿದೆ. ತೆಲುಗು ಚಿತ್ರರಂಗದ ಹೆಸರಾಂತ ನಟ ವಿಜಯ್ ದೇವರಕೊಂಡ ಮತ್ತು ಹೆಸರಾಂತ ನಟಿ ಸಮಂತಾ ಅವರು ಖುಷಿ ಎಂಬ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಾರ್ ಚೇಸಿಂಗ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೊಡ್ಡ ಅನಾಹುತ ಉಂಟಾಗಿದೆ. ಸಾಹಸ ದೃಶ್ಯವೊಂದರ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾಗೆ ಅಪಾಯ ಎದುರಾಗಿದೆ.

ಚೇಸಿಂಗ್ ದೃಶ್ಯವೊಂದರ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯ ದೇವರಕೊಂಡ ಮತ್ತು ಸಮಂತಾ ಕಾರಿನಲ್ಲಿ ಕುಳಿತಿದ್ದರು. ನದಿಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದ ಮೇಲೆ ವಾಹನವನ್ನು ಓಡಿಸಬೇಕಾಗಿತ್ತು. ಕಾರು ಸೇತುವೆ ಮೇಲೆ ಚಲಿಸುತ್ತಿರುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ನೀರಿಗಿ ಹೋಗಿ ಬಿದ್ದಿದೆ. ಕಾರಿನಲ್ಲೇ ಇದ್ದ ವಿಜಯ ದೇವರಕೊಂಡ ಮತ್ತು ಸಮಂತಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರಿಗೆ ಬಿದ್ದ ತಕ್ಷಣ ಇಬ್ಬರನ್ನೂ ಕೂಡ ತಕ್ಷಣ ಸಿನೆಮಾ ಸಿಬ್ಬಂದಿಗಳು ಪಾರು ಮಾಡಿದ್ದಾರೆ.

ಇಬ್ಬರಿಗೂ ಬೆನ್ನಿಗೆ ಗಾಯವಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ ಮತ್ತು ಇಬ್ಬರಿಗೂ ಚಿಕಿತ್ಸೆ ನೀಡಿದ್ದಾರೆ. ಸಮಂತಾ ಮತ್ತು ವಿಜಯ್ ಇದೀಗ ಹೋಟೆಲ್ ನಲ್ಲಿ ಇದ್ದುಕೊಂಡೇ ಚೇತರಿಸಿಕೊಳ್ಳುತ್ತಿದ್ದಾರೆ. ತುಂಬಾ ಭದ್ರತೆ ಕಾಪಾಡಿಕೊಂಡಿದ್ದರೂ ಸಹ ಶೂಟಿಂಗ್ ವೇಳೆ ಇಂತಹ ಅವಘಡಗಳು ನಡೆದಿವೆ. ಇಂತಹ ದೊಡ್ಡ ಅವಘಡ ನಡೆದರೂ ಸಹ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ನಿಜಕ್ಕೂ ಅದೃಷ್ಟವೇ ಸರಿ.

Leave A Reply

Your email address will not be published.

error: Content is protected !!