
ವಿಜಯ ರಾಘವೇಂದ್ರ ಇನ್ನೊಂದು ಮದುವೆ! ಮಗನಿಗಾದರೂ ಮತ್ತೊಂದು ಮದುವೆ ಆಗಿ ಎಂದು ಒತ್ತಾಯ ಮಾಡುತ್ತಿರುವವರಿಗೆ ವಿಜಯರಾಘವೇಂದ್ರ ಹೇಳಿದ್ದೇನು ಗೊತ್ತಾ?
Vijay Raghavendra: ಸ್ನೇಹಿತರೆ ಬೆಂಗಳೂರಿನ ಮಲ್ಲೇಶ್ವರದ ಕಾಫಿ ಡೇ ಒಂದರಲ್ಲಿ ಮೊದಲ ಬಾರಿಗೆ ಸ್ಪಂದನವರನ್ನು ಕಂಡಂತಹ ವಿಜಯ್ ರಾಘವೇಂದ್ರ(Vijay Raghavendra) ಅವರಿಗೆ ಮೊದಲ ನೋಟದಲ್ಲೇ ಪ್ರೀತಿ ಚುಗರೆಡಿದು ಮದುವೆಯಾದರೆ ಅದು ಈಕೆಯನ್ನು ನಿರ್ಧರಿಸಿ ಬಿಡುತ್ತಾರೆ. ಹೀಗೆ ತಾವು ಮೊದಲ ಬಾರಿ ನೋಡಿದಂತಹ ಹುಡುಗಿಗಾಗಿ ರಾಘು ಎಲ್ಲೆಡೆ ಹುಡುಕಿದರೂ ಸಿಗದ ಸ್ಪಂದನ, ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದಂತಹ ಕಾರ್ಯಕ್ರಮ ಒಂದರಲ್ಲಿ ತಮ್ಮ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ.
ಆ ಸಂದರ್ಭದಲ್ಲಿ ಚಿನ್ನೆ ಗೌಡರ(Chinne Gowda) ಮನೆಯಲ್ಲಿ ಮಗನಿಗೆ ಮದುವೆ ಮಾಡುವ ಮಾತುಕತೆ ನಡೆಸುತ್ತಿದ್ದ ಕಾರಣ ರಾಘು ನೇರವಾಗಿ ತಮ್ಮ ಮನೆಯವರ ಬಳಿ ಸ್ಪಂದನ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಾರೆ. ಆನಂತರ ಸ್ಪಂದನ ಅವರ ಮನಸ್ಸಿನಲ್ಲಿ ರಾಘು ಮೇಲೆ ಪ್ರೀತಿ ಚಿಗುರೆಡೆದು ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂದಿನಿಂದ ಸ್ಪಂದನ ಅವರ ಕೊನೆಯ ದಿನದವರೆಗೂ ಬಹಳ ಪ್ರೀತಿಯಿಂದ ಇರುತ್ತಿದ್ದ ಈ ಜೋಡಿ ಹಕ್ಕಿಗಳ ಮೇಲೆ ಅದು ಯಾರ ವಕ್ರ ದೃಷ್ಟಿ ಬಿತ್ತೋ ಸ್ಪಂದನ(Spandana) ಹೃದಯಘಾತದಿಂದಾಗಿ ರಾಘವೇಂದ್ರ ಅವರನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಹೆಂಡತಿಯ ಅಗಲಿಕೆಯ ನೋವಿನಿಂದ ಇಂದಿಗೂ ಹೊರ ಬರೆದಂತಹ ರಾಘು ಮಗನಿಗಾಗಿ ಕುಟುಂಬಸ್ತರಿಗಾಗಿ ಹಾಗೂ ಅಭಿಮಾನಿಗಳಿಗಾಗಿ ಗಟ್ಟಿ ಮನಸ್ಸು ಮಾಡಿ ಸಿನಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಹೀಗಿರುವಾಗ ಸಾಮಾಜಿಕ ಜಾಲತಾಣಗಳೆಲ್ಲ ವಿಜಯ್ ರಾಘವೇಂದ್ರ(Vijay Raghavendra) ಎರಡನೇ ಮದುವೆ ಆಗುತ್ತಾರೆ ಎಂಬ ಸುದ್ದಿ ಜೋರಾಗಿಯೇ ಚರ್ಚೆಯಾಗುತ್ತಿದ್ದು, ಇದಕ್ಕೆ ನೇರವಾಗಿ ಉತ್ತರಿಸಿರುವ ರಾಘು “ಸ್ಪಂದನಾನೆ ನನಗೆ ಸರ್ವಸ್ವ ಅವರನ್ನು ಬಿಟ್ಟು ಬೇರೆ ಯಾರು ಆ ಜಾಗಕ್ಕೆ ಬರಲು ಸಾಧ್ಯವಿಲ್ಲ. ನನ್ನ ಜೀವ ಜೀವನ ಸ್ಪಂದನ ಅವರೇ, ಇಂದಿಗೂ ಎಂದಿಗೂ ಮುಂದೆ ಕೂಡ ನನ್ನ ಮಗನನ್ನು ನೋಡಿಕೊಂಡು ಅವನನ್ನು ಚೆನ್ನಾಗಿ ಬೆಳೆಸುತ್ತಾ ಜೀವನ ಮಾಡುತ್ತೇನೆ” ಎಂದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಹೀಗೆ ತಮ್ಮ ಮನದಾಳದ ಮಾತನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿ ವಿಜಯ್ ರಾಘವೇಂದ್ರ ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.