ಒಬ್ಬರ ಹಿಂದೆ ಒಬ್ಬರಂತೆ ಮಾಡೆಲ್ ಗಳ ಸರಣಿ ಆತ್ಮಹ’ತ್ಯೆ ಸಂಸಾರವೇ ಮುಳುವಾಯ್ತಾ ಈ ತಾರೆಯರಿಗೆ!

ಸಿನಿಮಾ ರಂಗಕಿಂತಲೂ ತುಸು ವಿಭಿನ್ನ ಮಾಡೆಲ್ ಜಗತ್ತು. ಅದೆಷ್ಟೋ ಹುಡುಗಿಯರು ಇದರಲ್ಲಿಯೇ ತಮ್ಮ ಜೀವನವನ್ನ ಕಟ್ಟುಕೊಂಡಿದ್ದಾರೆ. ಇನ್ನು ಸಾಕಷ್ಟು ನಟಿಯರೂ ಕೂಡ ಮಾಡೆಲ್ ಜಗತ್ತಿನಿಂದಲೇ ಸಿನಿಮಾಕ್ಕೆ ಪ್ರವೇಶಿಸಿದ್ದು. ಆದರೆ ಇಂದು ಬಂಗಾಳಿ ಮಾಡೆಲ್ ಗಳ ಲೈಫ್ ನಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಹಲವಾರು ಕಾರಣಕ್ಕೆ ಮಾಡೆಲ್ ಗಳು ನೇ’ಣಿಗೆ ಶರಣಾಗುತ್ತಿದ್ದಾರೆ. ಇದು ಖಂಡಿತವಾಗಿಯೂ ಮಾಡೆಲ್ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ.

ಇದೇ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ಮೂರು ಮಾಡೆಲ್ ಗಳು ತಮ್ಮ ಜೀವನವನ್ನ ತಾವೇ ಕೊನೆಗೊಳಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಗ್ಲಾಮರಸ್ ಲೋಕದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಎಲ್ಲರಿಗೂ ಆತಂಕ ಸೃಷ್ಟಿಸಿದೆ. ಬಂಗಾರದ ಉದಯೋನ್ಮುಖ ನಟಿ ಪಲ್ಲವಿ ಡೇ ಕೆಲವು ದಿನಗಳ ಹಿಂದೆಯಷ್ಟೇ ನೇ’ಣಿಗೆ ಶರಣಾಗಿದ್ದಾರೆ. ಕೋಲ್ಕತ್ತಾದ ಗರ್ಫದಲ್ಲಿರುವ ತನ್ನದೇ ಪ್ಲಾಟ್ ನಲ್ಲಿ ನೇ’ಣು ಬಿಗಿದುಕೊಂಡು ಜೀವವನ್ನೆ ತೆಗೆದು ಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಜನ ಮಾತನಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ನಟಿ ರೂಪದರ್ಶಿ ಬಿದುಶಾ ಡಿ ಮಜುಮ್ದಾರ್ ಕೂಡ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇ’ಣು’ಬಿಗಿದುಕೊಂಡು ಸಾವನ್ನಪ್ಪಿದ್ದರು. ಇದೀಗ ಬಂಗಾಳದ ಪ್ರಖ್ಯಾತ ಮಾಡಲ್ ಆಗಿರುವ ಮಂಜುಶಾ ನಿಯೋಗಿ ತಮ್ಮ ಮನೆಯಲ್ಲಿ ನೇ’ಣು’ ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಎಲ್ಲ ಘಟನೆಗಳು ಮೇಲ್ನೋಟಕ್ಕೆ ಆತ್ಮಹ’ತ್ಯೆ ಪ್ರಕರಣದಂತೆ ಕಂಡರು, ನಿಜವಾದ ಹಕ್ಕೀಕತ್ತು ಏನು ಎಂಬುದು ಯಾರಿಗೂ ಅರಿವಿಲ್ಲ. ಕೆಲವರು ಕೌಟುಂಬಿಕ ಸಮಸ್ಯೆ ಎಂದರೆ ಇನ್ನು ಕೆಲವರು ಗ್ಲಾಮರಸ್ ಲೋಕದಲ್ಲಿನ ಸಮಸ್ಯೆ ಈ ಮಾಡೆಲ್ ಗಳ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ ಎನ್ನುತ್ತಾರೆ.

ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಂತಹ ಮಂಜುಶಾ ನಿಯೋಗಿ ಒಬ್ಬಳು ಪ್ರಖ್ಯಾತ ಮಾಡೆಲ್. ಆಕೆ ತನ್ನ ಕುಟುಂಬದವರೊಂದಿಗೆ ಬಂಗಾಳದ ಪ್ಯೂತೌಲಿ ಏರಿಯಾದಲ್ಲಿ ನೆಲೆಸಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ನೇಣಿಗೆ ಶರಣಾದ ಮಂಜುಶಾ ಅವರ ಸಾವು ಕೂಡ ಬಹಳ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಕೆಯ ತಾಯಿ ಹೇಳುವ ಪ್ರಕಾರ ಮಂಜುಶಾ ತನ್ನ ಸ್ನೇಹಿತೆ ಬಿದಿಶಾ ಮಜುಂದಾರ್ ಸಾವಿನಿಂದ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದಿದ್ದಾರೆ. ಆದರೆ ಈ ಸಾ’ವಿನ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಳ್ಳಲು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಮಂಜೂಶಾ, ಬಿದಿಶಾ ಅವರ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರಂತೆ. ತಾನು ಅವಳಂತೆ ಆಗಬೇಕು ಅಂತ ಮಂಜೂಶ ಅಂದುಕೊಂಡಿದ್ದರಂತೆ. ಬಿದಿಶಾ ಕೂಡ ಬಂಗಾಳದ ಮಾಡೆಲ್. ಕೇವಲ 21 ವರ್ಷದ ವಯಸ್ಸಿನ ಬಿದಿಶಾಗೆ ಸರಿಯಾದ ಕೆಲಸ ಸಿಕ್ಕಿಲ್ಲ ಎಂದು ಖಿನ್ನತೆಗೆ ಒಳಗಾಗಿ ಜೀವವನ್ನು ತೆಗೆದು ಕೊಂಡಿದ್ದರು. ಹಾಗೆಂದು ತಾವೇ ಡೆ’ತ್ ನೋಟೊಂದನ್ನು ಬರೆದಿಟ್ಟಿದ್ದಾರೆ. ಆದರೆ ಬಿದಿಶಾ ಮಜುಂದಾರ್ ಅವರು ಸ್ನೇಹಿತರ ಬಳಿ ಪೊಲೀಸರು ವಿಚಾರಿಸಿದಾಗ ಆಕೆ ಇಲ್ಲಿಯೆ ಜಿಮ್ ಟ್ರೈನರ್ ಒಬ್ಬನ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದರು ಆದರೆ ಇವರಿಬ್ಬರ ನಡುವೆ ಕಲಹವೂ ಏರ್ಪಟ್ಟಿತ್ತು ಎಂದು ಹೇಳಿದ್ದಾರೆ. ಇದೇ ವಿಷಯವಾಗಿ ಆತನ ಬಳಿ ಪ್ರಶ್ನಿಸಿದಾಗ ಅವಳಿಗೆ ಕೆಲಸದ ಆಫರ್ ಗಳು ಇದ್ದವು. ಆದರೆ ಆರೋಗ್ಯ ಸರಿ ಇರಲಿಲ್ಲ ಹಾಗಾಗಿ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಿದರು. ವಿದಿಶಾ ಗೆ ಕ್ಯಾನ್ಸರ್ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ವಿಚಾರಣೆಯ ನಂತರವಷ್ಟೇ ಬಹಿರಂಗಗೊಳ್ಳಲಿದೆ.

ಕೇರಳದ ಮೂಲದ ಮಾಡೆಲ್ ಹಾಗೂ ನಟಿಯಾಗಿದ್ದ ಶಹಾನ ವರದಕ್ಷಿಣೆಯ ಕಿರುಕುಳವನ್ನು ಸಹಿಸಲಾರದೆ ಜೀವವನ್ನು ತೆಗೆದು ಕೊಂಡಿದ್ದರು. ಮೇ 12ಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶಹಾನ ಅವರ ಶವ ಪತ್ತೆಯಾಗಿತ್ತು. ಇದಾದ ಬಳಿಕ ಪಲ್ಲವಿ ಡೇ ಎನ್ನುವ ಮಾಡೆಲ್ ಕೂಡ ಇದೇ ಕಾರಣಕ್ಕೆ ಜೀವವನ್ನು ತೆಗೆದು ಕೊಂಡಿದ್ದರು. ಮನೆ ಹಾಗೂ ವೃತ್ತಿಜೀವನ ಎರಡನ್ನೂ ಸರಿಯಾಗಿ ನಿಭಾಯಿಸಲಾಗದೆ ಈ ನಿರ್ಧಾರವನ್ನು ತೆಗೆದು ಕೊಂಡಿದ್ದರು. ಅದರ ಹಿಂದೆಯೇ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ವಿದೀಶಾ ಮುಜುಂದಾರ್ ಇಹಲೋಕವನ್ನು ತ್ಯಜಿಸಿದರು. ಇದೀಗ ಮಂಜೂಶಾ ನಿಯೋಗಿ ಕೂಡ ಇದೇ ದಾರಿ ಹಿಡಿದಿದ್ದಾರೆ. ಸಾಮಾಜಿಕವಾಗಿ ಇಷ್ಟು ಬೆರೆತು, ಜಗತ್ತನ್ನು ನೋಡಿ ಬೋಲ್ಡಾಗಿ ನಟನೆಯನ್ನು ಮಾಡುವಂತಹ ಈ ಹುಡುಗಿಯರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರವನ್ನು ತೆಗೆದು ಕೊಂಡಿದ್ದಾದರೂ ಯಾಕೆ? ಗ್ಲಾಮರಸ್ ಲೋಕದಲ್ಲಿ ಖಿನ್ನತೆಗೆ ಒಳಗಾಗುವಂಥದ್ದು ಏನು ನಡೆಯುತ್ತೆ? ಇಷ್ಟು ವೀಕ್ ಮೈಂಡ್ ನ್ನು ಮಾಡೆಲ್ ಗಳು ಹೇಗೆ ಹೊಂದಿರುತ್ತಾರೆ? ಇದೆಲ್ಲ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಹೆತ್ತವರನ್ನ ಬಿಟ್ಟು ಹೋದಾಗ ಹೆತ್ತವರ ನೋವನ್ನು ಮಾತ್ರ ಯಾರೂ ಭರಿಸಲು ಸಾಧ್ಯವಿಲ್ಲ.

Leave a Comment

error: Content is protected !!